ಶಿವಮೊಗ್ಗ, ಅ.07:
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡರ ಮನೆ ಮೇಲೆ ಇಡಿ ದಾಳಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿಯಿದೆ. ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದರೆಂಬ ಕಾರಣಕ್ಕೆ 10 ವರ್ಷದ ಹಿಂದಿನ ಪ್ರಕರಣದಿಂದ ಮುಕ್ತವಾಗಿದ್ದರೂ ಅದೇ ನೆಪದಲ್ಲಿ ದುರುದ್ದೇಶದಿಂದ ದಾಳಿ ಮಾಡಿರುವುದು ಸರಿಯಾದ ಕ್ರಮವಲ್ಲ. ಮಂಜುನಾಥಗೌಡರ ಪರವಾಗಿ ಇಡೀ ಕಾಂಗ್ರೆಸ್ ಪಕ್ಷ ನಿಂತಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.

ಗೌಡರ ರಾಜಕೀಯ ಚಾರಿತ್ರ್ಯಹರಣ ಮಾಡಲು ಈ ಇಡಿ ಎಂಬುದನ್ನು ಅವರು ಏಡಿ ತರ ಬಳಿಸಿಕೊಂಡಿದ್ದಾರೆ. ಅನಗತ್ಯವಾದ ಈ ಇಡಿ ತನಿಖೆ ಈಗ ಯಾವ ಕಾರಣಕ್ಕೆ ನಡೆಯಿತು ಎಂದು ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಅಧ್ಯಕ್ಷ ಹಾಗೂ ಅವರ ಆಡಳಿತ ಮಂಡಳಿ ಬಂಗಾರದ ಸಾಲ ಪಡೆಯಲು ಅನುಮೋದಿಸಿತ್ತು. ಅದರೆ ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯಾರದು ಆಯಾ ಬ್ಯಾಂಕ್ಗಳ ಮ್ಯಾನೇಜರ್ ಹಾಗೂ ವ್ಯವಸ್ಥಾಪಕ ನಿರ್ಧೇಶಕರನ್ನು ಬಿಟ್ಟು ಜೊತೆಗೆ ಆಡಳಿತ ಮಂಡಳಿಯನ್ನೂ ಬಿಟ್ಟು ಮಂಜುನಾಥಗೌಡರ ಮೇಲೆ ಮಾತ್ರ ದಾಳಿ ನಡೆಸಿರುವುದು ರಾಜಕೀಯ ಕುತಂತ್ರವಲ್ಲವೇ ಎಂದು ಪ್ರಶ್ನಿಸಿದರು.
