ಶಿವಮೊಗ್ಗ, ಅ.07:
ನಮಗಿಂತ ಡಬಲ್ ತೆಗೆದುಕೊಳ್ಳುತ್ತಾರೆ ಎಂದು ಟಿ.ವಿ.ಮಾಧ್ಯಮಗಳ ಮುಂದೆ ಯಾವುದೇ ಮುಜುಗರವಿಲ್ಲದೇ ಮಾತನಾಡಿದ ಶೇ.40% ನಾಯಕನ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಪರೋಕ್ಷವಾಗಿ ಶಿವಮೊಗ್ಗದ ಬಿಜೆಪಿ ನಾಯಕರೊಬ್ಬರಿಗೆ ಟಾಂಗ್ ನೀಡಿದರು.

ಮಂಜುನಾಥ ಗೌಡರ ಮನೆಯ ಮೇಲೆ 10 ವರ್ಷದ ಹಿಂದಿನ ಪ್ರಕರಣಕ್ಕೆ ದಾಳಿ ನಡೆಯುತ್ತದೆ. ಇತ್ತೀಚೆಗಷ್ಟೆ ಕಾಂಗ್ರೆಸ್ನ ಕೆಲ ನಾಯಕರು ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಈ ನಾಯಕ ಪರೋಕ್ಷವಾಗಿ ನಾನು ಇಷ್ಪು ಪಡೆಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರಲ್ಲವೇ..? ಕಾಂಗ್ರೆಸ್ ನಾಯಕರು ಪಡೆದಿದ್ದರೆ ತನಿಖೆಯಾಗಲಿ, ಹಾಗೇಯೇ ತಮ್ಮ ತಪ್ಪನ್ನ ನೇರವಾಗಿ ಒಪ್ಪಿಕೊಂಡಿರುವ ಈ ನಾಯಕನ ವಿರುದ್ಧ ಯಾಕೆ ದೂರು ದಾಖಲಾಗಿಲ್ಲ. ನಾನು ಅವರ ಹೆಸರು ಹೇಳೋಲ್ಲ. ಪಾಪ ಶಿವಮೊಗ್ಗ ಬಿಟ್ಟು ಬೇರೆ ಜಿಲ್ಲೆಯಲ್ಲಿ ತಮ್ಮವರಿಗಾಗಿ ರಾಜಕೀಯ ನೆಲೆ ಹುಡುಕುತ್ತಿದ್ದಾರೆಂದು ವ್ಯಂಗ್ಯವಾಡಿದರು.
