ಹೊಸನಗರ : 2023-24ನೇ ಸಾಲಿನ PMKSY ಹನಿ ನೀರಾವರಿ ಯೋಜನೆಯಡಿ ಹೊಸನಗರ ತಾಲೂಕಿನ ರೈತರಿಂದ ಅಡಿಕೆ, ತೆಂಗು, ಬಾಳೆ, ಗೇರು, ಮಾವು, ತಾಳೆ, ಪಪ್ಪಾಯ, ಹಾಗೂ (ರಬ್ಬರ್ ಮತ್ತು ಕಾಫಿ ಬೆಳೆ ಹೊರತುಪಡಿಸಿ) ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆಗೆ ಸಹಾಯಧನಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದ್ದು, ರೈತರು ಇಲಾಖೆಯಿಂದ ಅರ್ಜಿಯನ್ನು ಪಡೆದು ಕಂಪನಿ ದರ ಪಟ್ಟಿಯೊಂದಿದೆ ಸಲ್ಲಿಸಲು ಹೊಸನಗರ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಟಿ.ಸಿ.ಪುಟ್ಟನಾಯ್ಕ್ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

ಸಾಮಾನ್ಯ ವರ್ಗಕ್ಕೆ 2 ಹೆಕ್ಟೇರ್ ವರೆಗೆ ಶೇ.75 ಹಾಗೂ ಪ.ಜಾ. ಮತ್ತು ಪ.ಪಂ.ದ ರೈತರಿಗೆ ಶೇ.90 ರ ಸಹಾಯಧನ ಲಭ್ಯವಿರುತ್ತದೆ. 2 ಹೆಕ್ಟೇರ್ ನಿಂದ 5 ಹೆಕ್ಟೇರ್ ವರೆಗೆ ಎಲ್ಲಾ ರೈತ ವರ್ಗಕ್ಕೆ ಶೇ.45 ರ ಸಹಾಯಧನ ಪಡೆಯಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಸಂಜಯ್ ಚದರದಾರ್, ಮೊ: 8867621857 (ರೈತ ಸಂಪರ್ಕ ಕೇಂದ್ರ ಕಸಬಾ).

ಚಂದ್ರಶೇಖರ, ಮೊ: 9481501571 (ರೈತ ಸಂಪರ್ಕ ಕೇಂದ್ರ ಕೆರೆಹಳ್ಳಿ).

ಶ್ವೇತಾ ಟಿ. ಮೊ: 8861565836 (ರೈತ ಸಂಪರ್ಕ ಕೇಂದ್ರ ಹುಂಚ).

ಸಚಿನ್ ಎಸ್ ಚಿಕ್ಕೇರಿ ಮೊ: 6006338189 (ರೈತ ಸಂಪರ್ಕ ಕೇಂದ್ರ ನಗರ).

By admin

ನಿಮ್ಮದೊಂದು ಉತ್ತರ

error: Content is protected !!