ಸಾಗರ : ಲೋಕಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಜಾರಿಗೆ ತಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವನ್ನು ಸ್ವಾಗತಿಸಿ ಬುಧವಾರ ಬಿಜೆಪಿ ಮಹಿಳಾ ಘಟಕದ ವತಿಯಿಂದ ಸಾಗರ ಹೋಟೆಲ್ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿ ಸಿಹಿ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಹಲವು ದಶಕಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೇಸ್ ಸರ್ಕಾರ ಮಹಿಳಾ ಮೀಸಲಾತಿ ಕುರಿತು ಭರವಸೆ ನೀಡಿದ್ದನ್ನು ಬಿಟ್ಟರೆ ಅನುಷ್ಟಾನಕ್ಕೆ ತರುವ ಪ್ರಯತ್ನ ನಡೆಸಿರಲಿಲ್ಲ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ತಂದಿದ್ದನ್ನೆ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿ ಮಹಿಳೆಯರನ್ನು ವಂಚಿಸುತ್ತಾ ಬಂದಿತ್ತು. ಇದೀಗ ನರೇಂದ್ರ ಮೋದಿಯವರ ಸರ್ಕಾರ ಶೇ. ೩೩ ಮೀಸಲಾತಿ ಜಾರಿಗೊಳಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಭಾಷ್ಯವನ್ನು ಬರೆದಿದೆ. ಕೇಂದ್ರದ ಈ ನಿರ್ಧಾರವನ್ನು ಗಲ್ಲಿಗಲ್ಲಿಗಳಲ್ಲಿ ಮಹಿಳೆಯರು ಸಂಭ್ರಮಿಸಿ ನರೇಂದ್ರ ಮೋದಿಯವರನ್ನು ಆಶೀರ್ವದಿಸಬೇಕು ಎಂದರು.


ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ನಾರಿಶಕ್ತಿ ವಂದನಾ ಅಧಿನಿಯಮ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ರಹದಾರಿ ಕಲ್ಪಿಸಿದೆ. ಮಹಿಳಾ ಮೀಸಲಾತಿ ಕಾಂಗ್ರೇಸ್ ಪಕ್ಷದ ಪೊಳ್ಳು ಭರವಸೆಯಾಗಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ತರುವ ಮೂಲಕ ಮಹಿಳೆಯರಿಗೆ ಮೀಸಲಾತಿ ಬಲವನ್ನು ನೀಡಿದೆ. ಈ ಕಾಯ್ದೆ ಜಾರಿಯಿಂದ ಹೆಚ್ಚಿನ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.


ಬಿಜೆಪಿ ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷೆ ಸವಿತಾ ವಾಸು ಮಾತನಾಡಿ, ಕೇಂದ್ರದಲ್ಲಿ ನಾರಿಶಕ್ತಿ ವಂದನಾ ಅಧಿನಿಯಮ ಜಾರಿ ಮಹಿಳೆಯರ ರಾಜಕೀಯ ಪಯಣಕ್ಕೆ ಹೊಸ ದಿಕ್ಕನ್ನು ತೋರಿಸಿದೆ. ಅನೇಕ ವರ್ಷಗಳಿಂದ ಮಹಿಳೆಯರಿಗೆ ಶಾಸನಸಭೆ, ಲೋಕಸಭೆಯಲ್ಲಿ ಶೇ. ೩೩ ಮೀಸಲಾತಿ ನೀಡಲು ಹೋರಾಟ ನಡೆಸಿಕೊಂಡು ಬರಲಾಗಿತ್ತು.

ಆದರೆ ಕಾಂಗ್ರೇಸ್ ಪಕ್ಷ ಮೀಸಲಾತಿ ವಿಷಯ ಬಂದಾಗ ಮಹಿಳೆಯರಿಂದ ಮತ ಪಡೆದು ಮೋಸ ಮಾಡುತಿತ್ತು. ಆದರೆ ಬಿಜೆಪಿ ಮಹಿಳಾ ಮೀಸಲಾತಿ ಜಾರಿಗೊಳಿಸುವ ಮೂಲಕ ಹೊಸ ಅಧ್ಯಾಯ ಸೃಷ್ಟಿಸಿದೆ ಎಂದು ಹೇಳಿದರು.


ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಪ್ರಮುಖರಾದ ಪ್ರೇಮ ಕಿರಣ್ ಸಿಂಗ್, ಪುರುಷೋತ್ತಮ್, ಅರವಿಂದ ರಾಯ್ಕರ್, ಶ್ರೀನಿವಾಸ್ ಮೇಸ್ತ್ರಿ, ಮೈತ್ರಿ ಪಾಟೀಲ್, ಸುಧಾ ಉದಯ್, ಕವಿತಾ ಜಯಣ್ಣ, ಸತೀಶ್ ಕೆ., ಶಂಕರ ಅಳ್ವಿಕೋಡಿ, ಬಿ.ಎಚ್.ಲಿಂಗರಾಜ್, ಕೃಷ್ಣ ಶೇಟ್, ಪ್ರದೀಪ್ ಇನ್ನಿತರರು ಹಾಜರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!