ಶಿವಮೊಗ್ಗ: ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪರವಾಗಿ ಮತ್ತು ವಿರೋಧವಾಗಿ ನಿನ್ನೆ ಸಂಜೆ ಕರ್ನಾಟಕ ಸಂಘದ ಎದುರು ಕಾಂಗ್ರೆಸ್ ಹಾಗೂ ನಮೊ ಬ್ರಿಗೇಡ್ ಕಾರ್ಯಕರ್ತರು ಏಕಕಾಲದಲ್ಲಿ ಪ್ರತಿಭಟನೆ ನಡೆಸಿದರು.


ಕಾಂಗ್ರೆಸ್ ಕಾರ್ಯಕರ್ತರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪೊರಕೆ ಹಿಡಿದು ಪ್ರತಿಭಟನೆ ಮಾಡಿದರೆ ನಮೋ ಬ್ರಿಗೇಡ್ ಸದಸ್ಯರು ಪ್ರತಿಭಟನೆ ನಡೆದ ಸ್ಥಳವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡಿದರು.


ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಪದಾಧಿಕಾರಿಯೊಬ್ಬರನ್ನು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಮಹಿಳಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಸೂಲಿಬೆಲೆ ಪರ ಘೋಷಣೆ ಕೂಗಿದ ನಮೋ ಬ್ರಿಗೇಡ್ ಸದಸ್ಯರು ಕೂಡ ಪ್ರತಿಭಟನೆ ನಡೆಸಿ ಮೋದಿಗೆ ಜೈಕಾರ ಹಾಕಿದರು.


ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಕಾರ್ಯಕ್ರಮದೊಳಗೆ ನುಗ್ಗಲು ಯತ್ನಿಸಿದ್ದ ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ಕರೆದೊಯ್ದರು. ನಂತರ ನಮೋ ಬ್ರಿಗೇಡ್ ಸದಸ್ಯರು ಬಂಧಿಸಿ ಕರೆದೊಯ್ಯುತ್ತಿದ್ದ ಕಾಂಗ್ರೆಸ್ ಸದಸ್ಯರಿಗೆ ಟಾಟಾ ಮಾಡಿದರು. ಅನಂತರ ಪ್ರತಿಭಟನೆ ನಡೆದ ಸ್ಥಳವನ್ನು ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದರು.


ಕಾಂಗ್ರೆಸ್ ಪ್ರತಿಭಟನೆಯ ನೇತೃತ್ವವನ್ನು ಹೆಚ್.ಎಸ್. ಸುಂದರೇಶ್ ವಹಿಸಿದ್ದು, ಈ ಸಂದರ್ಭದಲ್ಲಿ ದೂರುನೀಡಿದ ಸೌಗಂಧಿಕ ರಘುನಾಥ್, ಸ್ಟೆಲ್ಲಾ ಮಾರ್ಟಿನ್, ದೇವೇಂದ್ರಪ್ಪ, ಶೇಷಾದ್ರಿ, ಚಂದ್ರಭೂಪಾಲ್, ಚಂದ್ರಶೇಖರ್, ಚಿನ್ನಪ್ಪ ಸೇರಿದಂತೆ ಹಲವರಿದ್ದರು.


ನಮೋ ಬ್ರಿಗೇಡ್ ಪ್ರತಿಭಟನೆಯಲ್ಲಿ ಪ್ರಮುಖರಾದ ಸುರೇಖಾ ಮುರಳೀಧರ್, ಶಾರದಾ, ಸೀತಾಲಕ್ಷ್ಮಿ, ರಾಜೇಶ್ ಶೆಣೈ, ವಿನಯ್, ಉಷಾ, ದರ್ಶನ್, ಶರತ್ ಕಲ್ಯಾಣಿ, ಪ್ರಭು ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!