ಹೊಸನಗರ: ಲೈಂಗಿಕ ಪ್ರಕರಣಗಳಲ್ಲಿ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು ನಾವು ಕೊನೆಯ ಸ್ಥಾನಕ್ಕೆ ಹೋಗಬೇಕಾದರೆ ಶಾಲೆಯಲ್ಲಿ ಶಿಕ್ಷಕರ ವೃಂದ, ಕಾಲೇಜ್‌ಗಳಲ್ಲಿ ಉಪನ್ಯಾಸಕ ವೃಂದ ಹಾಗೂ ಪೋಷಕರು ಮಕ್ಕಳ ಬಗ್ಗೆ ಕಾಳಗಿ ವಹಿಸಿದರೆ ಲೈಂಗಿಕ ಪ್ರಕರಣಗಳನ್ನು ತಡೆ ಹಿಡಿಯಬಹುದು ಎಂದು ಹೊಸನಗರ ಪ್ರಥಮ ದರ್ಜೆ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರವಿಕುಮಾರ್ ಕೆ. ಹೇಳಿದರು.

ಪಟ್ಚಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಫೋಕ್ಸೋ ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅವರು,‌ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಕಾರಣ ಯಾವುದೇ ಮಕ್ಕಳಾಗಲಿ, ಪೋಷಕರಾಗಲಿ, ಇನ್ನಿತರ ಅಧಿಕಾರಿಗಳಾಗಲಿ ಯಾವುದೇ ಹಿಂಜರಿಕೆ ಭಯ ಇಲ್ಲದೇ ಲೈಂಗಿಕ ದೌರ್ಜನ್ಯ ವಿರುದ್ಧ ದೂರ ನೀಡಬಹುದು ದೂರು ನೀಡುವುದರಿಂದ ಲೈಂಗಿಕ ದೌರ್ಜನ್ಯ ತಡೆಯಬಹುದು ಎಂದರು.

ಲೈಂಗಿಕ ಪ್ರಕರಣಗಳು ಅಪರಿಚಿತರಿಂದಲೇ ಆಗುತ್ತದೆ ಎಂದು ತಿಳಿಯುವುದು ತಪ್ಪು ಗ್ರಹಿಕೆ. ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಪ್ರಕರಣಗಳು ಪೋಷಕರಿಂದ ನೆರೆ-ಹೊರೆಯವರಿಂದ, ಶಿಕ್ಷಕರಿಂದ ಮತ್ತು ಸಂಬಂಧಿಕರಿಂದಲೇ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಮುಚ್ಚು-ಮರೆ ಇಲ್ಲದೇ ಸಂತ್ರಸ್ಥರು ತಮ್ಮ ದೂರುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅಥವಾ ನ್ಯಾಯಾಲಯಕ್ಕೆ ನೀಡಿದರೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯನ್ನು ನೀಡುವಲ್ಲಿ ನ್ಯಾಯಾಲಯ ದೊಡ್ಡ ಪಾತ್ರ ವಹಿಸುತ್ತದೆ ಹಾಗೂ ಸಂತ್ರಸ್ಥರಿಗೆ ಪರಿಹಾರ ನೀಡಲಿದೆ ಎಂದರು.

ಯಾವುದೇ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಾಗ ಅದನ್ನು ನೋಡಿದ ಅಥವಾ ಅದರ ಬಗ್ಗೆ ತಿಳಿದಿದ್ದರೂ ಸಹ ಲೈಂಗಿಕ ಸಂತ್ರಸ್ಥೆ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ಥೆ ಸ್ನೇಹಿತರೊಂದಿಗೆ ಸಂಬಂಧಿಕರೊಂದಿಗೆ ಇತರರೊಂದಿಗೆ ಹೇಳಿಕೊಂಡು ಪರ ವ್ಯಕ್ತಿಗಳು ಮುಚ್ಚಿಟ್ಟರೂ ಸಹ ಮುಚ್ಚಿಟ್ಟ ವ್ಯಕ್ತಿಯು ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದರು.

ಸಮಾಜದ ಅಭಿವೃದ್ಧಿಗೆ ಹಲವು ಕಾನೂನುಗಳನ್ನು ನಮ್ಮ ಸಂವಿಧಾನ ರಚಿಸಿದೆ ಆದರೆ ಇಂದಿಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಶೋಷಣೆ ನಡೆಯುತ್ತದೆ. ಹಲವಾರು ಸಮಸ್ಯೆಗಳು ಈಗಲೂ ನಮ್ಮ ಮುಂದೆ ಇದೆ ಸಮಾನತೆ ಬಂದಿದ್ದರೂ ಸಹ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದೆ ಆದ್ದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೂ ತಕ್ಷಣ ಯಾವುದೇ ಹಿಂಜರಿಕೆ ತೋರಿಸದೆ ನ್ಯಾಯಾಕ್ಕಾಗಿ ಪ್ರಕರಣ ದಾಖಲಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲ ಕರ್ಣಕುಮಾರ್‌ ಮಾತನಾಡಿ, ಲೈಂಗಿಕ ಪ್ರಕರಣಗಳು ಬರೀ ಮಹಿಳೆಯರೆ ವಿದ್ಯಾರ್ಥಿನಿಯರ ಮೇಲೆ ಮಾತ್ರ ಕಾನೂನು ಕ್ರಮ ಜಾರಿಯಲ್ಲಿದೆ ಎಂದು ತಿಳಿಯುವುದು ತಪ್ಪು. ಲೈಂಗಿಕ ಪ್ರಕರಣಗಳು ಪುರುಷರ ಮೇಲೆಯು ಆಗುತ್ತಿದೆ. ಆದರೆ, ಪುರುಷರು ದೂರು ದಾಖಲಿಸಲು ಮುಂದೆ ಬರುತ್ತಿಲ್ಲ. ಲೈಂಗಿಕ ದೌರ್ಜನ್ಯದ ಅಪರಾಧಗಳೆಂದರೆ ಕೇವಲ ಬಾಲಕಿಯರ ಮೇಲಷ್ಟೆ ಅಲ್ಲ 18 ವರ್ಷದೊಳಗಿನ ಬಾಲಕ, ಬಾಲಕಿಯರೆನ್ನದೇ ಲಿಂಗ ಭೇದವಿಲ್ಲದೇ ಯಾವುದೇ ಮಕ್ಕಳ ಮೇಲೆ ನಡೆಯುವ ಎಲ್ಲಾ ಪ್ರಕರಣಗಳನ್ನು ಲೈಂಗಿಕ ಅತ್ಯಾಚಾರ ಪ್ರಕರಣ ಎಂದು ದೂರು ದಾಖಲಿಸಬಹುದು ಎಂದರು.

ಹೊಸನಗರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸುಮಂಗಳರವರು ಪೋಕ್ಸೋ ಕಾಯ್ದೆಯ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸ್ವಾಮಿರಾವ್‌ರವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ನಿರೂಪಣೆಯನ್ನು ಉಪನ್ಯಾಸಕಿ ಸೀಮಾರವರು ಮಾಡಿದರು. ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಉಪನ್ಯಾಸಕ ವೃಂದ ಕಾಲೇಜಿನ ಸಿಬ್ಬಂದಿಗಳು ನ್ಯಾಯಾಲಯದ ಸಿಬ್ಬಂದಿಯಾದ ರೇಖಾ ಹರೀಶ್, ಲೋಕ ಅದಾಲತ್ ಗುರು, ಪ್ರಾಂಶುಪಾಲರಾದ ಸ್ವಾಮಿರಾವ್ ಇನ್ನಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!