ಸಮೀಪದ ಡಣಾಯಕಪುರದಲ್ಲಿರುವ ಭೈರಮ್ ಬೆಟ್ಟದಲ್ಲಿ ಲಯನ್ಸ್ ಕ್ಲಬ್ ಹೊಳೆಹೊನ್ನುರು ಸಂಸ್ಥೆಯು ಓಪನ್ ಮೈಂಡ್ ವರ್ಲ್ಡ್ ಸ್ಕೂಲ್ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಇಂದು ಸಂಭ್ರಮದಿಂದ ನಡೆಸಿತು.


ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯ ಅರಣ್ಯಾಧಿಕಾರಿ ಜಗದೀಶ್ ಮಾತನಾಡಿ ವಿವಿದ ಗಿಡಗಳ ಪರಿಚಯ ಮತ್ತು ಅವುಗಳ ಉಪಯೋಗದ ಬಗ್ಗೆ ಮತ್ತುಮಣ್ಣಿನ

ವಿದಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದರ ಮೂಲಕ ವಿದ್ಯಾರ್ಥಿ ಗಳಲ್ಲಿ ಪರಿಸರ ಜಾಗೃತಿ ಮೂಡಿಸಿದರು.


ನಂತರ ಸುಮಾರು ಇನ್ನೂರೈವತ್ತುಕ್ಕೂ ಹೆಚ್ಚಿನ ವಿವಿದ ಹಣ್ಣುಗಳ, ಕಾಡು ಜಾತಿಗಳ ಗಿಡಗಳನ್ನ ನೆಡಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಮತ್ತು ಎಲ್ಲಾ ಸದಸ್ಯರು ಬಾಗವಹಿಸಿದ್ದರು.


ಇದೆ ಸಂದರ್ಭದಲ್ಲಿ ಓಪನ್ ಮೈಂಡ್ ಶಾಲೆಯ ಮುಖ್ಯಸ್ಥರಾದ ಕಿರಣ್, ಉಮಾ ಮತ್ತು ಶಿಕ್ಷಕರುಗಳು ಉಪಹಾರ ವಿತರಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!