ಶಿವಮೊಗ್ಗ, ಜುಲೈ 25
ಸಾಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಪಾಸಣೆ ಮಾಡಿ ಸರ್ಕಾರದ ತೆರಿಗೆ ಹಾಗೂ ಇನ್ನಿತರೆ ಪ್ರಕರಣ ಸಂಬಂಧ ವಾಹನವನ್ನು ಮುಟ್ಟುಗೋಲು

ಹಾಕಿರುವ ವಾಹನಗಳ ಮಾಲೀಕರು 7 ದಿನದೊಳಗಾಗಿ ಷರತ್ತುಗೊಳಪಟ್ಟು ವಾಹನಗಳನ್ನು ಬಿಡಿಸಿಕೊಳ್ಳುವುದು.

ತಪ್ಪಿದ್ದಲ್ಲಿ ಈ ವಾಹನಗಳನ್ನು ಹರಾಜು ಮಾಡಲಾಗುವುದು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಈ ವಾಹನಗಳನ್ನು ಆನವಟ್ಟಿ, ಹೊಸನಗರ ಮತ್ತು ರಿಪ್ಪನಪೇಟೆ ಪೊಲೀಸ್ ಠಾಣೆಗಳ ಆವರಣಗಳಲ್ಲಿ ಹಾಗೂ ಸ.ಪ್ರಾ.ಸಾ.ಅ. ಸಾಗರ ಕಚೇರಿ ಆವರಣದಲ್ಲಿ ನಿಲುಗಡೆ ಮಾಡಲಾಗಿದೆ.