ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅಮಾನವೀಯ ದೌರ್ಜನ್ಯ ಖಂಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತೆಯರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಮಣಿಪುರದಲ್ಲಿ ಕುಕ್ಕಿ ಜನಾಂಗದ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಘಟನೆ ಅಮಾನವೀಯ ವಾದುದು. ಇಡೀ ಮಾನವ ಕುಲವೇ ತಲೆ ತಗ್ಗಿಸುವಂ ತದ್ದು. ಅದರಲ್ಲೂ ಮಹಿಳೆಯರನ್ನು ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ಮಾಡಿರುವುದು ಖಂಡ ನೀಯ. ಅಮಾನುಷ ಕೃತ್ಯ ಎಸಗಿದವರ ವಿರುದ್ದ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನ ಕಾರರು ಆಗ್ರಹಿಸಿದರು.

ಪ್ರಧಾನಿ ಮೋದಿಯವರು ಬೇಟಿ ಬಜಾವೊ ಬೇಟಿ ಪಡಾವೋ ಎಂದು ಬೊಬ್ಬೆ ಹೊಡೆದಿದ್ದಾರಷ್ಟೆ. ಮಣಿಪುರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಅಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದರೂ ಕೂಡ ಪ್ರಧಾನಿಯವರು ಮೌನವಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲವಾಗಿದೆ. ಕೇಂದ್ರಸರ್ಕಾರ ಮಹಿಳಾ ವಿರೋಧಿಯಾಗಿದೆ ಎಂದು ದೂರಿದರು.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರು ದೇಶದ ಮಾಜಿ ಸೈನಿಕರೊಬ್ಬರ ಪತ್ನಿಯಾಗಿದ್ದಾರೆ. ದೇಶ ರಕ್ಷಣೆ ಮಾಡಿದವರ ಹೆಂಡತಿಗೆ ರಕ್ಷಣೆ ಕೊಡಲು ಆಗದಂ ತಹ ಪರಿಸ್ಥಿತಿ ಬಂದಿರುವುದು ಅವಮಾನವಾಗಿದೆ. ಆದ್ದರಿಂದ ಮಣಿಪುರ ಸರ್ಕಾರವನ್ನು ವಜಾಗೊಳಿಸ ಬೇಕು. ರಾಷ್ಟ್ರಪತಿ ಸರ್ಕಾರ ಹೇರಬೇಕು. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಪ್ರಮುಖರಾದ ಬಲ್ಕಿಷ್ ಬಾನು, ವಿಜಯಲಕ್ಷ್ಮಿ ಪಾಟೀಲ್, ಸ್ಟೆಲ್ಲಾ ಮಾರ್ಟಿನ್, ವನ ಮಾಲಾ, ಅರ್ಚನಾ ನಿರಂಜನ, ಚಂದ್ರಿಕಾ, ಶಮೀಮ್ ಬಾನು, ಸುವರ್ಣಾ ನಾಗರಾಜ್ ಇತರರಿದ್ದರು.