
ಶಿವಮೊಗ್ಗ,ಜು.22:
ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಹಾಗೂ ಶಿವಮೊಗ್ಗ ಬಿ. ಎಚ್. ರಸ್ತೆಯ ಬಿದಿರೆ ಕ್ರಾಸ್ ನಲ್ಲಿರುವ ಶಿವಮೊಗ್ಗದ ಶ್ರೀ ಶಿರಡಿ ಸಾಯಿಬಾಬಾ ಮಂದಿರಾ ಟ್ರಸ್ಟ್ ವತಿಯಿಂದ ಬಿದಿರೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಬರುವ ಜುಲೈ 29ರ ಬುಧವಾರ ವೈಭವದ “ಗುರು ಪೂರ್ಣಿಮೆ” ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ.




ಶಿರಡಿ ಸಾಯಿಬಾಬಾ ದೇಗುಲದಂತೆಯೇ ನಿರ್ಮಾಣವಾಗಿರುವ ಸಾಯಿಬಾಬಾ ಮಂದಿರದಲ್ಲಿ ಈ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಎಂದಿನಂತೆ ಈ ವರ್ಷವೂ ಆಚರಿಸಲು ಹಾಗೂ ಅದಕ್ಕೂ ಪೂರ್ವದಲ್ಲಿ ಮೂರು ದಿನಗಳ ಕಾಲ ವೈಭವದ ಶ್ರದ್ದೆ ಭಕ್ತಿಯ ಪೂಜಾರಾಧನೆ ಸಮಾರಂಭ ನಡೆಸಲಿದೆ ಎಂದು ಟ್ರಸ್ಟ್ ತಿಳಿಸಿದೆ.
ಈ ಗುರುಪೂರ್ಣಿಮೆಗೆ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸಾಯಿಬಾಬಾ ಗುರುಗಳ ಕೃಪಾಶೀರ್ವಾದ ಪಡೆಯಲು ಕೋರಲಾಗಿದೆ.

ವೈಭವದ ಹಾಗೂ ಶ್ರದ್ಧೆ ಭಕ್ತಿಯ ಗುರುಪೂರ್ಣಿಮೆ ಆಚರಣೆಯಲ್ಲಿ ಪಾಲ್ಗೊಳ್ಳಲು ಮತ್ತು ವಿಶೇಷ ಪೂಜಾ ಆರಾಧನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು 9845732240, 9448767067 ಗೆ ಸಂಪರ್ಕಿಸಲು ಕೋರಲಾಗಿದೆ.
