ಶಿವಮೊಗ್ಗ, ಸೆ.೫:
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ನೆರವಾಗುವ ಉದ್ದೇಶದಿಂದ ಉದ್ಯೋಗ ಪಥ-೨೦೨೬ ನಿಮ್ಮ ಕನಸು- ನಮ್ಮ ಸಂಕಲ್ಪ ಶೀರ್ಷಿಕೆಯಡಿ ಎರಡು ತಿಂಗಳ ಉಚಿತ ಆಫ್ಲೈನ್ ತರಬೇತಿ ಕಾರ್ಯಕ್ರಮಕ್ಕೆ ಏರ್ಪಡಿಸಲಾಗಿದೆ ಎಂದು ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮವೂ ಸೆ.೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಉದ್ಘಾಟನೆಗೊಳ್ಳಲ್ಲಿದ್ದು, ಸಂಪನ್ಮೂಲ ವ್ಯಕ್ತಿಗಳಾದ ಬಿ.ಮಂಜುನಾಥ್, ಪಿ.ವಿ.ಭೈರಪ್ಪ ಹಾಗೂ ಕಿಟ್ಟಿ ಆಗಮಿಸುವರು. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್, ಸ್ಪರ್ಧಾ ಅರಿವು ಅಕಾಡೆಮಿ, ಬೆಂಗಳೂರು ಹಾಗೂ ಸಾಧನಾ ಅಕಾಡೆಮಿ, ಶಿಕಾರಿಪುರ ಸಂಸ್ಥೆಗಳು ಸಹಕಾರ ನೀಡಿವೆ ಎಂದು ತಿಳಿಸಿದರು.

ಕೆಎಎಸ್, ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಪಿಎಸ್ಐ, ಪಿಸಿ, ಕೆಇಎ ಗ್ರೂಪ್-ಸಿ, ಪಿಎಸ್ಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ೭೨ ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದ್ದು, ನವೆಂಬರ್ಡಿಸೆಂಬರ್ ವೇಳೆಗೆ ಪರೀಕ್ಷೆಗಳು ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಉದ್ಯೋಗಾಂಕ್ಷಿಗಳ ಪೂರ್ವ ಸಿದ್ಧತೆಗೆ ಪೂರಕವಾಗಿ ಉಚಿತ ತರಬೇತಿ ನೀಡಲಾಗುತ್ತಿದೆ ಎಂದರು.

ಶಿಕಾರಿಪುರದ ಸಾಧನಾ ಅಕಾಡೆಮಿಯ ಬಿ. ಮಂಜುನಾಥ್, ಬೆಂಗಳೂರಿನ ಸ್ಪರ್ಧಾ ಅರಿವು ಅಕಾಡೆಮಿಯ ಪಿ.ವಿ. ಬೈರಪ್ಪ (ಐಆರ್ಎಸ್) ಹಾಗೂ ವಿವಿಧ ಸರ್ಕಾರಿ ನೇಮಕಾತಿಯ ೧೬ ಪರೀಕ್ಷೆ ಗಳಲ್ಲಿ ಉತ್ತೀರ್ಣರಾಗಿರುವ ಕಿಟ್ಟಿ ಸರ್ (ಪಿಎಸ್ಐ) ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗ ಳಾಗಿ ಪಾಲ್ಗೊಂಡು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಈ ತರಗತಿಗಳು ಬೆಳಿಗ್ಗೆ ೧೦ ರಿಂದ ೧, ಮಧ್ಯಾಹ್ನ ೨ ರಿಂದ ಸಂಜೆ ೫ ರವರಗೆ ಅಚಿವರ್ಸ್ ಟ್ರಸ್ಟ್ನ ಕೊಠಡಿಗಳಲ್ಲಿ ನಡೆಯಲಿದೆ. ೩೦೦ ಜನರಿಗೆ ಅವಕಾಶವಿದ್ದು, ಇನ್ನು ಹೆಚ್ಚಿನ ಜನರು ಬಂದರೆ ಅದಕ್ಕೂ ಅವಕಾಶ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:೭೦೧೯೧೬೧೪೧೩, ೯೩೮೦೫೫೬೪೬೪ ಗೆ ಸಂಪರ್ಕಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್ ವರುಣ್ ತಿಪ್ಪೇಸ್ವಾಮಿ ನಾಯ್ಕ, ವೆಂಕಟೇಶ್, ನಳಿನಾ ಜಾದವ್, ಮಂಜುನಾಥ್, ಅಭಿರಾಮ್ ಇದ್ದರು.