ಮಕ್ಕಳ ಮನಸ್ಸಿನಲ್ಲಿ ಬಾಂಧವ್ಯದ ಬೆಸುಗೆ ಜೊತೆಗೆ ಸ್ವಂತ ಶ್ರಮದಿಂದ ಗಿಡವನ್ನು ಅತ್ಯಂತ ಮುತು ವರ್ಜಿಯಿಂದ ಬೆಳೆಸುವ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ ಪಿ ಆರ್ ಎಸ್ ಎ ಚಾರಿಟೇಬಲ್ ಟ್ರಸ್ಟ್ ಪ್ರಸ್ತುತ ಶಿವಮೊಗ್ಗ ಗ್ರಾಮಾಂತರ ಭಾಗದ ಮೂರು ಶಾಲೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಸಸ್ಯಗಳನ್ನು ನೀಡುವ ಜೊತೆಗೆ ಅವರನ್ನು ಹುರಿದುಂಬಿಸುವ ಕೆಲಸವನ್ನು ಮಾಡುವ ಮೂಲಕ ತನ್ನ ಸಂಸ್ಥೆಯ ಮಹದುದ್ದೇಶದ ’ಗ್ರೀನ್ ಹೀರೋ’ ಯೋಜನೆಗೆ ಚಾಲನೆ ನೀಡಿದೆ.


ಸೆಂಟರ್ ಪಾಲಿಸಿ ರಿಸರ್ಚ್ ಅಂಡ್ ಸೋಶಿ ಯಲ್ ಆಕ್ಷ್ಯನ್ ಸಂಸ್ಥೆಯು ಹಮ್ಮಿಕೊಂಡಿರುವ ಹತ್ತಾರು ಪ್ರಮುಖ ಉದ್ದೇಶಗಳ ಜೊತೆಗೆ ಮಗುವಿನ ಮನಸ್ಸಿನಲ್ಲಿ ಕುಟುಂಬದವರ ಅದರಲ್ಲೂ ತಾಯಿಯ ಬಾಂಧವ್ಯವನ್ನು ಗ್ರೀನ್ ಹೀರೋ ಕಾರ್ಯಕ್ರಮ ಬಿಂಬಿಸಿರುವುದು ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಮಗು ತಾನು ಪಡೆಯುವ ಸಸ್ಯವನ್ನು ಅತ್ಯಂತ ಜೋಪಾನವಾಗಿ ತಮ್ಮ

ಮನೆಯ ಅಂಗಳದಲ್ಲಿ ಬೆಳೆಸುವ ಜೊತೆಗೆ ಆ ಗಿಡಕ್ಕೆ “ತಾಯಿ”ಯ ಹೆಸರನ್ನು ಇಡುವಂತಹದಾಗಿದೆ.
ಒಂದು ವರ್ಷದ ನಂತರ ಆ ಮಗು ಬೆಳೆಸಿದ ಗಿಡವನ್ನು ಪರಿಶೀಲಿಸುವ ಜೊತೆಗೆ ಅವರನ್ನು ಪ್ರೋತ್ಸಾಹಿಸಲು ಬಹುಮಾನ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಪ್ರಸ್ತುತ ಅಗಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಯ್ ಹೊಳೆಯ

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನುಪಿನ ಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದೆ. ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿರುವ ಸಿಪಿಆರ್ ಎಸ್ ಕೆ ಸಂಸ್ಥೆಯ ಸಿಇಓ ಡಾ. ಭಾವನಾ, ನಿವೃತ್ತ ಶಿಕ್ಷಣಾಧಿಕಾರಿ ಪಿ. ಹಾಲಾನಾಯಕ್, ಪ್ರೊ. ಪ್ರದೀಪ್

ರಮಾವತ್ ಹಾಗೂ ಆಯಾ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು ಸ್ಥಳೀಯ ಗ್ರಾಮಸ್ಥರು ಪೋಷಕರು ಈ ಕಾರ್ಯಕ್ರಮ ದೊಂದಿಗೆ ಭಾಗವಹಿಸಿದ್ದರು.
ಮಕ್ಕಳ ಮನದಲ್ಲಿ ಪರಿಸರ ಹಾಗೂ ಬಾಂಧವ್ಯದ ಬೆಸುಗೆಯನ್ನು ನೀಡುತ್ತಿರುವ ಕಾರ್ಯಕ್ರಮವನ್ನು ಸಾರ್ಜನಿಕರು ಪ್ರಶಂಸಿದ್ದಾರೆ. ಮುಂದೆ ಬಹುತೇಕ ಸರ್ಕಾರಿ ಹಿರಿಯ ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಗ್ರೀನ್ ಹೀರೋ ಕಾರ್ಯಕ್ರಮವನ್ನು ಮುಂದುವ ರಿಸಲು ನಿರ್ಧರಿಸಲಾಗಿದೆ ಎಂದು ಸಿಇಓ ಡಾ. ಭಾವನಾ ತಿಳಿಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!