ಶಿವಮೊಗ್ಗ: ಶಿವಮೊಗ್ಗ ನಗರದ ಜನರು ಇನ್ನುಮುಂದೆ ಯಾವುದೇ ಸಮಸ್ಯೆ, ಸಲಹೆ ಇದ್ದರೂ ವಾಟ್ಸಪ್ ಮೂಲಕ ಶಾಸಕರ ಕಚೇರಿಗೆ ನೇರವಾಗಿ ತಿಳಿಸಿ, ಪರಿಹಾರ ಪಡೆಯುವ ನೂತನ ವ್ಯವಸ್ಥೆಯನ್ನು ಆರಂಭ ಮಾಡಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದ ನಾಗರಿಕರು ಸಮಸ್ಯೆ ಹಂಚಿಕೊಳ್ಳಲು ಸ್ಮಾರ್ಟ್ ಶಿವಮೊಗ್ಗ, ‘ ನಿಮ್ಮ ನುಡಿ, ನಮ್ಮ ನಡೆ ’ ಎಂಬ ವಾಟ್ಸಪ್ ಹೆಲ್ಪ್‌ಲೈನ್ ಆರಂಭಿಸಿದೆ. ಈ ಮೂಲಕ ನಗರದ ನಾಗರಿಕರು ತಮ್ಮ ಸಮಸ್ಯೆ ಹಾಗೂ ಸಲಹೆಗಳನ್ನು ಮೆಸೇಜ್ ಮೂಲಕ ನೀಡಬಹುದಾಗಿದೆ ಎಂದರು.


ಸಾರ್ವಜನಿಕರು ಮೊ. ೯೦೧೯೯೦೧೧೭೭ ಈ ವಾಟ್ಸಪ್ ನಂಬರ್‌ಗೆ ತಮ್ಮ ಬಡಾವಣೆಯ ಸಮಸ್ಯೆ, ಸಲಹೆಗಳ ಬಗ್ಗೆ ಮೆಸೇಜ್ ಮಾಡಬಹುದು. ನಂತರ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಸೂಕ್ತ ಪರಿಹಾರ ದೊರೆಯಲಿದೆ. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡಿನಲ್ಲಿ ಸಲಹಾಪಟ್ಟಿಗೆ ಇಟ್ಟು ಅಲ್ಲಿಯೂ ಕೂಡ ಸಾರ್ವಜನಿಕರು ಮುಕ್ತವಾಗಿ ಮುಂದಿನ ಐದು ವ? ಶಿವಮೊಗ್ಗ ನಗರ ಹೇಗೆ ಕಾಣಬೇಕು ಎಂಬ ತಮ್ಮ ಸಲಹೆ ಅಭಿಪ್ರಾಯಗಳನ್ನು ತಿಳಿಸಬಹುದು ಎಂದರು.


ಪ್ರಧಾನಿ ನರೇಂದ್ರ ಮೋದಿಯವರು ಮೇ ೧೧ರಂದು ನಡೆದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಭಾ?ಣದಲ್ಲಿ ಹೇಳಿರುವಂತೆ ತಂತ್ರಜ್ಞಾನವು ದೇಶದ ಅಭಿವೃದ್ಧಿ ಹೆಚ್ಚಿಸಲು ಇರುವ ಒಂದು ಪ್ರಮುಖ ಉಪಕರಣ. ಇದೇ ಕಲ್ಪನೆಯೊಂದಿಗೆ ಸಿದ್ಧವಾಗಿರುವುದು ’ಸ್ಮಾರ್ಟ್ ಶಿವಮೊಗ್ಗ’. ಇದರ ಭಾಗವಾಗಿ ವಾಟ್ಸಾಪ್ ಹೆಲ್ಪ್‌ಲೈನ್ ನಂಬರ್ ಲೋಕಾರ್ಪಣೆಗೊಂಡಿದೆ. ಶಿವಮೊಗ್ಗ ನಗರದ ನಾಗರೀಕರ ಸಹಭಾಗಿತ್ವದಲ್ಲಿ ಅವರ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹ ಮಾಡುವ ಮೂಲಕ ಮುಂದಿನ ಐದು ವ?ಗಳ ಕಾಲ ಶಿವಮೊಗ್ಗ ನಗರವನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ವ್ಯವಸ್ಥೆ ರೂಪಿಸಲಾಗುವುದು ಎಂದರು.


ಅಲ್ಲದೆ ನಾಗರಿಕರು ಅವರ ಸಮಸ್ಯೆಗಳನ್ನು ಸಹ ಮೆಸೇಜ್ ಮುಖಾಂತರ ಕರ್ತವ್ಯ ಭವನಕ್ಕೆ ತಲುಪಿಸಿದರೆ ಅದನ್ನು ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಯಕರ್ತರ ಮುಖಾಂತರ ಸೀಮಿತ ಅವಧಿಯೊಳಗೆ ಸಮಸ್ಯೆಯನ್ನು ಬಗೆಹರಿಸಲು ವ್ಯವಸ್ಥೆ ರೂಪಿಸಲಾಗಿದೆ. ಇದು ಜನರ ಹಾಗೂ ಜನಪ್ರತಿನಿಧಿಯ ನಡುವೆ ಸಂಪರ್ಕ ಸಾಧನೆಗೆ ಅನುವಾಗುವ ಒಂದು ಪ್ರಮುಖ ಪರಿಕರವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲು ’ಕರ್ತವ್ಯಪಡೆ’ಯನ್ನು ಸಜ್ಜುಗೊಳಿಸಲಾಗಿದೆ ಎಂದ ಅವರು, ಪಕ್ಷಭೇದವಿಲ್ಲದೆ ಎಲ್ಲಾ ವಾರ್ಡುಗಳು ಕಾರ್ಪೊರೇಟರ್‌ಗಳ ಸಹಾಯವನ್ನು ಬಳಸಿಕೊಳ್ಳಲಾಗುವುದು ಎಂದರು.


ಸಾರ್ವಜನಿಕರು ಹಸಿರು ನಗರ, ಸ್ವಚ್ಛನಗರ, ಸಾಂಸ್ಕೃತಿಕ ನಗರ, ಆರೋಗ್ಯಕರ ನಗರ, ಆಡಳಿತ ಮತ್ತು ಅಭಿವೃದ್ಧಿ, ಕೈಗಾರಿಕೆ ಮತ್ತು ವಾಣಿಜ್ಯ, ಶೈಕ್ಷಣಿಕ, ಕ್ರೀಡೆ ಹೀಗೆ ಹಲವು ವಿಷಯಗಳನ್ನು ಇಟ್ಟುಕೊಂಡು ಸಮಸ್ಯೆಗಳ ಬಗ್ಗೆ ಸಲಹೆಯನ್ನೂ ನೀಡಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಜಗದೀಶ್, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರನಾಯಕ್, ಪಾಲಿಕೆ ಸದಸ್ಯರಾದ ಇ. ವಿಶ್ವಾಸ್, ವಿಶ್ವನಾಥ್, ಮಂಜುನಾಥ್, ಭಾನುವತಿ ವಿನೋದ್‌ಕುಮಾರ್, ಅನಿತಾ ರವಿಶಂಕರ್, ಸಂಗೀತಾ ನಾಗರಾಜ್, ಕೆ.ವಿ. ಅಣ್ಣಪ್ಪ, ಮಂಜುನಾಥ್ ಎನ್., ಕೋಟೆ ಪ್ರಭು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!