:ಶಿವಮೊಗ್ಗ ಜಿಲ್ಲೆಯ ವಿವಿಧ ಉಪವಿಭಾಗದ ಅರಣ್ಯಹಕ್ಕು ಸಮಿತಿಯಿಂದ ಅಸ್ತಿತ್ವವಿಲ್ಲದ ಅರಣ್ಯಹಕ್ಕು ಸಮಿತಿ ಮೂಲಕ ಅರಣ್ಯವಾಸಿ ಗಳಿಗೆ ನೋಟಿಸ್ ಜಾರಿಗೊಳಿ ಸುತ್ತಿರುವುದನ್ನು ಖಂಡಿಸಿ ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ವತಿಯಿಂದ ಸೋಮವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತ ನಾಡಿದ ವೇದಿಕೆ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ್, ಸರ್ಕಾರ ಬದಲಾವಣೆ ಹಿನ್ನೆಲೆಯಲ್ಲಿ ಅರಣ್ಯಹಕ್ಕು ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಅಸ್ತಿತ್ವದಲ್ಲಿ ಇಲ್ಲದ ಅರಣ್ಯಹಕ್ಕು ಸಮಿತಿ ಅಧಿಕಾರಿಗಳ ಸಭೆ ಕರೆದು ಅನಧಿಕೃತವಾಗಿ ಸಭೆ ನಡೆಸುವ ಮೂಲಕ ನಿಯಮಭಾಹೀರ ನಡಾವಳಿ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಜನಪ್ರತಿನಿಧಿಗಳೇ ಇಲ್ಲದೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಮಿತಿ ಸಭೆ ನಡೆಸಿದರೆ ಜನರಿಗೆ ನ್ಯಾಯ ಸಿಗುವುದಿಲ್ಲ. ಸಾಗರ ತಾಲ್ಲೂಕಿನ ಜೋಗ -ಕಾರ್ಗಲ್ ಪಟ್ಟಣಪಂಚಾ ಯಿತಿ ವ್ಯಾಪ್ತಿ ಸೇರಿದಂತೆ ಬೇರೆಬೇರೆ ಕಡೆ ಅರಣ್ಯ ಇಲಾಖೆ ಅರಣ್ಯವಾಸಿಗಳಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಭೀತಿಯನ್ನು ಹುಟ್ಟಿಸುತ್ತಿರು ವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಇರುವ ಅರಣ್ಯ ಸಮಿತಿ ಕಾನೂನುಬಾಹಿರ ವಾಗಿದ್ದು, ಮುಂದಿನ ೧೦ ದಿನಗಳಲ್ಲಿ ಈ ಕುರಿತು ಅಧಿ ಕಾರಿಗಳು ಸ್ಪಷ್ಟನೆ ನೀಡಬೇಕು. ರೈತರಿಗೆ ನೀಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಉಪವಿಭಾಗಾಧಿ ಕಾರಿಗಳ ಕಚೇರಿ ಎದುರು ಹಗಲು-ರಾತ್ರಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ,
ಅರಣ್ಯವಾಸಿಗಳಿಗೆ ಸಹಜ ನ್ಯಾಯ ನೀಡಿ, ಸ್ಥಾಕ ಜನರನ್ನು ಒಕ್ಕಲೆಬ್ಬಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಆದರೆ ಅಧಿಕಾರಿಗಳು ಸಾವಿರಾರು ಅರ್ಜಿಗಳನ್ನು ವಜಾಗೊಳಿಸಿ ರೈತರನ್ನು ಆತಂಕಕ್ಕೆ ದೂಡು ತ್ತಿದ್ದಾರೆ. ಜೋಗದಲ್ಲಿ ಕಾಗೋಡು ತಿಮ್ಮಪ್ಪ ಅವರ ಆಡಳಿತ ಅವಧಿಯಲ್ಲಿ ೬೦೦ ಜನರಿಗೆ ಹಕ್ಕುಪತ್ರ ನೀಡಲಾ ಗಿದೆ. ಈಗ ಅವರಿಗೆ ಅರಣ್ಯ ಇಲಾಖೆ ತಮ್ಮ ಜಾಗ ಎಂದು ಸ್ಪಷ್ಟನೆ ಕೇಳಿ ನೋಟಿಸ್ ಜಾರಿಗೊಳಿಸುತ್ತಿರುವುದು ಖಂಡನೀಯ. ತಕ್ಷಣ ಜೋಗದ ನಿವಾಸಿಗಳಿಗೆ ನೀಡಿ ರುವ ನೋಟಿಸ್ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಜೋಗ ಅರಣ್ಯಹಕ್ಕು ಸಮಿತಿ ಅಧ್ಯಕ್ಷ ಎಸ್.ಎಲ್.ರಾಜ ಕುಮಾರ್ ಮಾತನಾಡಿ, ಮುವತ್ತು ವರ್ಷಗಳಿಂದ ನಾವು ವಾಸಿಸುತ್ತಿ ರುವ ಭೂಮಿ ಅರಣ್ಯಕ್ಕೆ ಸೇರಿ ದ್ದೆಂದು ಇಲಾಖೆ ನೋಟಿಸ್ ನೀಡಿ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ೨೦೧೬ರಲ್ಲಿ ಅರಣ್ಯಹಕ್ಕು ಕಾಯ್ದೆಯಡಿ ನಾವು ಅರ್ಜಿ ಸಲ್ಲಿಸಿದ್ದೇವೆ. ನಾವು ಸಲ್ಲಿಸಿದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು ಎಲ್ಲರಿಗೂ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ನೀಡಿದ್ದು ಕಾನೂನು ಬಾಹಿರವಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.
ಕಳೆದ ವಿಧಾನಸಭೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದಾಗ ಜಿಲ್ಲಾq ಳಿತ ತಾಲ್ಲೂಕು ಆಡಳಿತದ ಮೂಲಕ ಚುನಾವಣೆಯ ನಂತರ ಜೋಗಾ-ಕಾರ್ಗಲ್ ನಿವಾಸಿಗಳ ಅರಣ್ಯ ಭೂಮಿ ಯಲ್ಲಿನ ಹಕ್ಕು ಪತ್ರ ಪಡೆದಿ ರುವವರ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿ ದ್ದರು.ಆದರೇ ಇಂದು ಏಕೆ ನಮ್ಮ ಸಮಸ್ಯೆಗಳತ್ತ ಚಿತ್ತ ಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರತಿಭಟನಾನಿರತರ ಅಹವಾಲು ಸ್ವೀಕರಿಸಲು ಸಾಗರ ಉಪರಣ್ಯ ಸಂರಕ್ಷಣಾ ವಿಭಾಗದ ಸಹಾಯಕ ಉಪರಣ್ಯ ಸಂರಕ್ಷಣಾಧಿಕಾರಿ ಎಂ.ಶ್ರೀಧರ್ ಆಗಮಿಸಿ ಮನವಿ ಸ್ವೀಕರಿಸಿದರು .ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಅವರು ಮನವಿ ಸ್ವೀಕರಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿದರು. ಪ್ರತಿಭಟನೆ ಯಲ್ಲಿ ಲಕ್ಷ್ಮೀರಾಜು, ವೀರಭದ್ರ ನಾಯ್ಕ್, ಸುರೇಶ್ ,ಮಂಜು,ಅಶೋಕ್,ರಾಜು ಮೊದ ಲಾದವರು ಹಾಜರಿದ್ದರು.