ಸಾಗರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮಂಜೂರಿ ಪ್ರಕ್ರೀಯೆಗೆ ಸಂಬAಧಿಸಿ ಉಂಟಾದ ಕಾನೂನಾತ್ಮಕ ಗೊಂದಲ ಹಾಗೂ ಕಾನೂನಿಗೆ ವ್ಯತಿರಿಕ್ತವಾಗಿ ತೀರಸ್ಕಾರವಾದ ಅರ್ಜಿಗಳ ಕುರಿತು ಚರ್ಚೆ ಹಾಗೂ ಮಂಜೂರಿ ಪ್ರಕ್ರಿಯೇಯಲ್ಲಿ ತೀರಸ್ಕಾರವಾದ ಅರಣ್ಯವಾಸಿಗಳ ಅರ್ಜಿಗಳಿಗೆ ಮೇಲ್ಮನವಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

 ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಇಂದು ಮೇಲ್ಕಂಡ ಕಾರ್ಯಕ್ರಮ ಜರುಗಿದವು.

 ಸಾಗರ ತಾಲೂಕಿನಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಸಲ್ಲಿಸಿದ ಅರ್ಜಿ ಕಾನೂನು ಬಾಹಿರ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ತೀರಸ್ಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲಾಗುವುದಲ್ಲದೇ, ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಅರ್ಜಿಗಳನ್ನು ತೀರಸ್ಕರಿಸಿದ ಕಾನೂನು ಅಂಶವನ್ನ ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪಿಸಿ ತೀರಸ್ಕಾರವಾಗಿರುವ ಆದೇಶವನ್ನ ಪುನರ್ ಪರಿಶಿಲಿಸಬೇಕೆಂದು ಹೋರಾಟಗಾರರು ಅಗ್ರಹಿಸಿದರು. ಉಪವಿಭಾಗ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ್, ಎಸಿಎಫ್ ಶ್ರೀಧರ, ಸಿಪಿಐ ಸೀತಾರಾಮ ಉಪಸ್ಥಿತಿಯಲ್ಲಿ ತಾಲೂಕ ದಂಡಾಧಿಕಾರಿಗಳು ಮಲ್ಲೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ಚರ್ಚೆ ಜರುಗಿದವು.

ಬಿಸಿಬಿಸಿ ಚರ್ಚೆ:


 ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ತೀರಸ್ಕಾರ, ಅರಣ್ಯ ಅಧಿಕಾರಿಗಳ ದೌರ್ಜನ್ಯ, ಮೂರು ತಲೆಮಾರಿನ ದಾಖಲೆಗಳ ಆಕ್ಷೇಪ ವ್ಯಕ್ತಪಡಿಸಿ ಹೋರಾಟಗಾರರಾದ ತಿ.ನ ಶ್ರೀನಿವಾಸ ಮೂರ್ತಿ, ಎಸ್ ಎಲ್ ರಾಜಕುಮಾರ ಕಾರ್ಗಲ್ ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ, ಶಿವಾನಂದ ಕುಗ್ಗೆ ಹಿರಿಯ ಹೋರಾಟಗಾರ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ದಿನೇಶ್ ನಾಯ್ಕ ಮುಂತಾದವರು ಸಮಿತಿಯ ಸದಸ್ಯರೊಂದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಯಾಗಿರುವುದು ವಿಶೇಷವಾಗಿತ್ತು.

 ಕಾರ್ಯಕ್ರಮದಲ್ಲಿ ತಾಲೂಕಾದ್ಯಂತ ೭೦೦ ಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸಿ ಮೇಲ್ಮನವಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

 ಸಭೆಯಲ್ಲಿ ಲಕ್ಷಿö್ಮÃ ರಾಜು ಪಟ್ಟಣ ಪಂಚಾಯತ ಸದಸ್ಯೆ, ರವಿ ಕುಗ್ಗೆ ಜಿಲ್ಲಾ ಪಂಚಾಯತ ಸದಸ್ಯ, ನವೀನ್ ಕುಮಾರ, ನಾಗರಾಜ ಮರಾಠಿ, ಜಗದೀಶ್ ಕಾರ್ಗಲ್, ಉಮೇಶ್, ಮಹಮ್ಮದ್ ಸಲಾಂ ಜೋಗ, ವಿಜಯ ಕುಮಾರ ಕಾರ್ಗಲ್, ಗೋಪಾಲ ಕೃಷ್ಣ, ಮುಂತಾದವರು ಭಾಗವಹಿಸಿದರು.

ಸೂಕ್ತ ಕ್ರಮ :
 ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ಉಂಟಾಗಿರುವ ಕಾನೂನಾತ್ಮಕ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ  ತಂದು ಮುಂದಿನ ಹತ್ತು ದಿನಗಳಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ತಾಲೂಕ ದಂಡಾಧಿಕಾರಿಗಳಾದ ಮಲ್ಲೇಶ್ ಪೂಜಾರಿ ಅವರು ಹೇಳಿದರು.

By admin

ನಿಮ್ಮದೊಂದು ಉತ್ತರ

error: Content is protected !!