ಕಳೆದ ಮೂರು ದಿನಗಳಿಂದ ಸುರಿಯುತ್ತಿ ರುವ ಸಣ್ಣ ಮಳೆಗೆ ನಗರದ ಅರಳೀಕಟ್ಟೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕೋಣೆಯೊಂದರ ಮೇಲ್ಛಾವಣಿ ಭಾನುವಾರ ಕುಸಿದಿದ್ದು, ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.


ಶಾಲಾ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದು, ಹೆಂಚು, ಪಕಾಸಿ ಧ್ವಂಸಗೊಂ ಡಿವೆ. ಶಾಲೆ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದೇ ಆದರೆ ಸಾಕಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅರಳೀಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದಾರು ಕೋಣೆಗಳು ಶಿಥಿಲಗೊಂಡು ಮಳೆಯಿಂದ ಸೋರುತ್ತಿವೆ. ಈ ಬಗ್ಗೆ ಶಾಲಾ ಸಿಬ್ಬಂದಿ, ಎಸ್ಡಿಎಂಸಿ ಸದಸ್ಯರು ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಹಮತ್ ಉಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.


ಎಲ್‌ಕೆಜಿಯಿಂದ ೭ನೇ ತರಗತಿ ಇದ್ದರೂ, ಮೂರು ಕೋಣೆಗಳಲ್ಲಿ ಮಾತ್ರ ಪಾಠ ಪ್ರವಚನ ಮಾಡಲಾಗುತ್ತಿದೆ.

ಇದರಿಂದ ಮಕ್ಕಳ ಕಲಿಕೆಗೆ ಸಾಕಷ್ಟು ತೊಂದರೆಯಾಗು ತ್ತಿದೆ. ಕೂಡಲೇ ಶಾಲೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಕೋಣೆಯ ಮೇಲ್ಛಾವಣಿ ಕುಸಿದ ವಿಷಯ ತಿಳಿದ ತಕ್ಷಣ ಸಹಾಯಕ ಆಯುಕೆ ಪಲ್ಲವಿ ಸಾತೇನಹಳ್ಳಿ ಸ್ಥಳಕ್ಕೆ ಆಗಮಿಸಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಮತ್ತು ಇಸಿಒ ಅವರಿಗೆ ಹಾನಿಗೀಡಾದ ಕುರಿತು ವರದಿ ಸಲ್ಲಿಸಲು ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!