ಅಪಾರ ಸಹನೆಯ ಕಾರಣದಿಂದ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸಭಾಪತಿಯಾಗಿ ಯಶಸ್ವಿಯಾ ದರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

.


ಶಿವಮೊಗ್ಗ ಸಿಟಿಜನ್ ಫೋರಂ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರ ಮೂರ್ತಿಯವರಿಗೆ ಏರ್ಪಡಿಸಿದ್ದ ನಾಗರಿಕ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತ ನಾಡಿದ ಅವರು, ಸದನದಲ್ಲಿ ಉಂಟಾಗುತ್ತಿದ್ದ ವಾಗ್ವಾದಗಳನ್ನು ಸಹನೆಯಿಂದ ಆಲಿಸುತ್ತಿದ್ದರು. ಡಿ.ಎಚ್. ಶಂಕರ್ ಮೂರ್ತಿ ಸಹನೆಯ ಪ್ರತೀಕವಾಗಿದ್ದಾರೆ ಎಂದರು.


ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಇದು ಅತ್ಯಂತ ಸಂಭ್ರಮದ ಕಾರ್ಯಕ್ರಮ, ಡಿಎಚ್‌ಎಸ್ ನಮಗೆಲ್ಲಾ ಹಿರಿಯರು. ಅವರು ವ್ಯಾಪಾರಿ ಕುಟುಂಬಕ್ಕೆ ಸೇರಿದವರು. ಜನಸಂಘ ಹಾಗೂ ಬಿಜೆಪಿ ಕಟ್ಟಲು ತನು-ಮನ-ಧನ ಸಮರ್ಪಿಸಿದ್ದಾರೆ. ಅವರ ಮನೆಯಲ್ಲಿ ನಾನು, ಈಶ್ವರಪ್ಪ ಕುಳಿತು ಸಂಘಟನೆ ಯೋಜನೆ ರೂಪಿಸುತ್ತಿದ್ದೆವು. ಪಕ್ಷದ ಯಾವ ಗಣ್ಯರು ಶಿವಮೊಗ್ಗಕ್ಕೆ ಬಂದರೂ ಡಿಎಚ್‌ಎಸ್ ನಿವಾಸದಲ್ಲೇ ವಾಸ್ತವ್ಯ ಮಾಡುತ್ತಿದ್ದರು ಎಂದು ಹೇಳಿದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ನಾನು ಭಾರತೀಯ ಎಂದು ಎಲ್ಲರೂ ಹೆಮ್ಮೆಯಿಂದ ಹೇಳುವಂ ತಾಗಬೇ ಕೆಂದು ಬಾಲ್ಯದಲ್ಲಿ ಬಯಸಿದ್ದೆ. ಅದೇ ಕಾರಣಕ್ಕೆ ಸಾರ್ವಜನಿಕ ಜೀವನವನ್ನು ಆಯ್ದುಕೊಂಡೆ. ಇಂದು ಭಾರತವನ್ನು ಕಂಡಾಗ, ದೇಶದ ಪ್ರಧಾನಿ ಅಮೆರಿಕದಂತಹ ದೇಶದಲ್ಲಿ ಪಡೆಯುತ್ತಿರುವ ಗೌರವ ಗಮನಿಸಿದಾಗ ನಮ್ಮ ಶ್ರಮ ಸಾರ್ಥಕ ವಾಯಿತು ಎನಿಸುತ್ತದೆ ಎಂದರು.


ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರು.
ಸಿಟಿಜನ್ ಫೋರಂ ಅಧ್ಯಕ್ಷ ಕೆ.ಬಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಲೋಕಸಭೆ ಸದಸ್ಯ ಬಿ.ವೈ

.ರಾ ಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!