ಶಿವಮೊಗ್ಗ ಬೈಕ್ ಕ್ಲಬ್ ವತಿಯಿಂದ ದಿನಾಂಕ 11-06-2023 ರ ಭಾನುವಾರ ಮಂಡಗದ್ದೆ ಸಮೀಪವಿರುವ ಹೆಗಲತ್ತಿ ಗ್ರಾಮಾಕ್ಕೆ ಬೈಕ್ ರೈಡ್ ಏರ್ಪಡಿಸಲಾಗಿದೆ.

ಕಂಬದಲ್ಲಿ ಮೂಡಿರುವ ನರಸಿಂಹ ದೇವಸ್ಥಾನ, ನಾಗಯಕ್ಷೆ ದೇವಸ್ಥಾನ, ಭೀಮನ ಪಾದ, ಕೃಷ್ಣನ ತೊಟ್ಟಿಲು ಹಾಗೂ ಗವಿ ಸಿದ್ಧೇಶ್ವರ ದೇವಸ್ಥಾನವನ್ನು  ನೋಡಿ ಬರುವುದು.

ಬೆಳಿಗ್ಗೆ 09 ಗಂಟೆಗೆ ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹೋಟೆಲ್ ಮಥುರಾ ಪ್ಯಾರಡೈಸ್ ನಿಂದ ಹೊರಟು ಸಂಜೆ 5 ಗಂಟೆಗೆ ವಾಪಸ್ಸು ಬರಲಾಗುವುದು.

.

100 ಸಿಸಿ ಮೇಲ್ಪಟ್ಟು ಬೈಕ್ ಅಥವಾ ಸ್ಕೂಟಿ ತರುವುದು

ವಾಹನದ ಎಲ್ಲಾ ದಾಖಲೆಗಳನ್ನು ಜೊತೆಗೆ ತರಬೇಕು.

ಒಂದು ವಾಹದಲ್ಲಿ ಇಬ್ಬರು ಬರಬಹುದು.

ಶುಲ್ಕ ಒಬ್ಬರಿಗೆ ರೂ. 250.00.

50 ಬೈಕ್ ಗಳಿಗೆ ಮಾತ್ರ ಅವಕಾಶ, ಮೊದಲು ಹೆಸರು ನೊಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅ.ನಾ.ವಿಜಯೇಂದ್ರ ರಾವ್, 9448790127 ಅಥವಾ ಎಸ್.ಎಸ್.ವಾಗೀಶ್ 9844809533 ಇವರನ್ನು ಸಂಪರ್ಕಿಸುವಂತೆ ಶಿವಮೊಗ್ಗ ಬೈಕ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ ಕೋರಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!