
ಶಿವಮೊಗ್ಗ,ಮೇ.31:
ಇಲ್ಲಿನ ವಿನೋಬ ನಗರದ ನೂರು ಅಡಿ ರಸ್ತೆಯ ಎಪಿಎಂಸಿ ತರಕಾರಿ ಮಾರುಕಟ್ಟೆಯ ವೃತ್ತಕ್ಕೆ ನೂತನವಾಗಿ ನಡೆದಾಡವ ಅಯ್ಯಪ್ಪ ಶ್ರೀ ರೋಜಾ ಷಣ್ಮುಗಂ ಗುರೂಜಿ ಸರ್ಕಲ್ ಎಂದು ನಾಮಕರಣ ಮಾಡಿ ವಿಶೇಷವಾದ ಪೂಜೆ ಸಲ್ಲಿಸಲಾಯಿತು.

ಅಧ್ಯಾತ್ಮ ಗುರುಗಳಾದ ಶ್ರೀ ರೋಜಾ ಷಣ್ಮುಗಂ ಗುರೂಜಿಯವರು ತಮ್ಮ ಶಿಷ್ಯ ಕೋಟಿಯನ್ನು ವಿಶ್ವದಾದ್ಯಂತ ಹೊಂದಿದ್ದಾರೆ. ಶಿವಮೊಗ್ಗದಲ್ಲಿ ಶ್ರೀ ಸ್ವಾಮಿ ಅಯ್ಯಪ್ಪನ ಮಾಲೆ ಧಾರಣೆ, ವ್ರತಾಚರಣೆ ಮೂಲಕ ಯುವಕರಲ್ಲಿ ಅಲ್ಲದೆ ಮನೆಮನೆಗೂ ಅಯ್ಯಪ್ಪನನ್ನು ತಲುಪಿಸಿದ ಸಾಧನೆ ಶ್ರೀ ಶ್ರೀ ರೋಜಾ ಗುರೂಜಿಯವರದ್ದು ಆಗಿದೆ.
ಶ್ರೀ ಅಯ್ಯಪ್ಪ ಸ್ವಾಮಿಯ ಸೇವೆ ಅಲ್ಲದೆ ಅಯ್ಯಪ್ಪ ಸ್ವಾಮಿಯ ದೇವಾಲಯಗಳನ್ನು ಜಿಲ್ಲೆಯಾದ್ಯಂತ ಸ್ಥಾಪಿಸಿದ್ದಾರೆ. ಈ ಮೂಲಕ ಜನರಲ್ಲಿ ಆಧ್ಯಾತ್ಮ ಸಾಧನೆಯ ಬೆಳವಣಿಗೆಗೆ ಮಾರ್ಗದರ್ಶಕರಾಗಿದ್ದಾರೆ.

ಕೇವಲ ತಮ್ಮ ಸಮಾಜ ಸೇವೆಯನ್ನು ಆಧ್ಯಾತ್ಮ ಸಾಧನೆಗೆ ಅಲ್ಲದೆ ಸಾಮಾಜಿಕವಾಗಿ, ರಾಜಕೀಯವಾಗಿ, ಲಯನ್ಸ್ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್ತು , ಕವಿಗೋಷ್ಠಿ, ತಮಿಳು ಸಂಘ ಹೀಗೆ ವಿವಿಧ ಸಂಘ-ಸಂಸ್ಥೆಗಳಲ್ಲಿ ನಿರಂತರವಾಗಿ ತಮ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಶಿವಮೊಗ್ಗ ಹಾಗೂ ವಿಶ್ವದ ನಾನಾ ಕಡೆಗಳಲ್ಲಿ ಇರುವ ಶಿಷ್ಯ ವೃಂದಕ್ಕೆ, ಭಕ್ತರಿಗೆ ಶ್ರೀ ಶಿವಮೊಗ್ಗ ಸ್ವಾಮೀಜಿ ಇಂದೇ ಪರಿಚಿತರು.
ಅಧ್ಯಾತ್ಮ ಸಾಧನೆಯಲ್ಲಿ ಅಪಾರ ಸಿದ್ಧಿಗಳಿಸಿದ್ದ ಶ್ರೀ ರೋಜಾ ಷಣ್ಮುಗಂ ಗುರೂಜಿಯವರು ಶಿವಮೊಗ್ಗದಲ್ಲಿ ಜನಸಾಮಾನ್ಯರಂತೆ ಬಾಳಿದವರು. ಜನಸಾಮಾನ್ಯರೊಡನೆ ಸಾಧಾರಣವಾಗಿ ಬದುಕಿ “ನಡೆದಾಡುವ ಅಯ್ಯಪ್ಪ” ಎಂದು ಶಿಷ್ಯರಿಗೆ ಆಶೀರ್ವಾದ ನೀಡಿದವರು.

ಇಂತಹ ದೇವರೊಡನೆ ಬಾಳಿದ ಶಿಷ್ಯರ ಹಾಗೂ ಭಕ್ತರ ಅಲೌಕಿಕ ಅನುಭವಗಳು ಹಾಗೂ ಗುರೂಜಿಯವರಿಂದ ಪಡೆದ ಆಶೀರ್ವಾದ, ಮಾರ್ಗದರ್ಶನ, ಸಮಾಧಾನಗಳು ವರ್ಣಿಸಲು ಅಸಾಧ್ಯ. ಶ್ರೀ ಸ್ವಾಮಿ ಅಯ್ಯಪ್ಪನ ವ್ರತಾಚರಣೆಯನ್ನು ಸಾಮಾಜಿಕ ಬದಲಾವಣೆಗಾಗಿ ಸಮಾಜದ ಸ್ವಾಸ್ಥ್ಯಕ್ಕೆ ಬಳಸಿ ಕ್ರಾಂತಿಯನ್ನೇ ಮಾಡಿದ್ದಾರೆ.

ಶಿಷ್ಯ ಕೋಟಿಯ ಆಶಯ ಹಾಗೂ ಭಕ್ತರ ಪ್ರಾರ್ಥನೆಯಿಂದ ನಡೆದಾಡುವ ಅಯ್ಯಪ್ಪ ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಸೇವಾ ಕಾರ್ಯವನ್ನು ಅವರ ಶಿಷ್ಯ ವೃಂದದವರು ಮುಂದುವರೆಸುತ್ತಾ ಇದ್ದಾರೆ.
ಎಲ್ಲಾ ಶಿಷ್ಯರ ಭಕ್ತರ ಆಸೆಯಂತೆ ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಹಿರಿಯ ಪುತ್ರ ಶಬರೀಶ್ ಷಣ್ಮುಗಂ ಸ್ವಾಮೀಜಿಯವರು ಈ ನಿಟ್ಟಿನಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಈ ಸಮಾಜ ಸೇವೆಗೆ ಶಿಷ್ಯರ ಸಹಕಾರವನ್ನು ಶಬರೀಶ್ ಷಣ್ಮುಗಂ ಸ್ವಾಮೀಜಿಯವರು ಸದಾ ಸ್ಮರಿಸುತ್ತಾರೆ.

ಶಿವಮೊಗ್ಗದ ನೂತನ ಶಾಸಕ ಚನ್ನಬಸಪ್ಪ ಅವರು ಶುಭ ಕೋರಿದರು. ಮೇಯರ್ ಶಿವಕುಮಾರ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆಯನ್ನು ನೆರವೇರಿಸಿಕೊಟ್ಟರು.
ಈ ವಿಶೇಷ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಅತಿ ದೊಡ್ಡ ಸತ್ಸಂಗ ಮಾಡುವ ಹಾಗೂ ಶ್ರೀ ರೋಜಾ ಗುರೂಜಿಯವರ ಮೂರ್ತಿ ಸ್ಥಾಪಿಸುವ ಸಂಕಲ್ಪ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಬರೀಶ್ ಗುರುಸ್ವಾಮಿ ಯವರೊಂದಿಗೆ ಮೇಯರ್ ಶಿವಕುಮಾರ್ ರವರು ಹಾಗೂ ಶ ರೋಜಾ ಗುರೂಜಿ ಶಿಷ್ಯ ವೃಂದದ ಮುರಳಿ, ಕೇಶವ್, ಮುರುಗೇಶ್, ಧರ್ಮಲಿಂಗಮ್, ಪುರುಷೋತ್ತಮ್, ಸಂಜು, ರಾಜ, ವಿಟಿ ರತ್ನಾಕರ್, ನಿಖಿಲ್, ನೇತ್ರಾ, ಮಮತಾ, ಕಾವ್ಯ ಮುಂತಾದವರು ಉಪಸ್ಥಿತರಿದ್ದರು.