ಶಿವಮೊಗ್ಗ,
ನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ರಾಜ ಕೀಯ ಕಸರತ್ತುಗಳ ನಡುವೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ. ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸ್ವಿಪ್ ಸಮಿತಿಯ ಲೋಖಂಡೆ ಸ್ನೇಹಲ್ ವಿಶೇಷವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣಗೌಡ ಅವರ ಪ್ರಯತ್ನದ ಫಲವಾಗಿ ಈ ಭಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನವಾಗುವ ನಿರೀಕ್ಷೆ ಇದೆ. ವಿಶೇಷವಾಗಿ ಶಿವಮೊಗ್ಗ ನಗರದ ಮತದಾನ ಪ್ರಮಾಣ ಹೆಚ್ಚಲಿದೆ ಎಂಬುದು ಸಂತಸದ ವಿಷಯ.


ನಿರಂತರವಾಗಿ ಚುನಾವಣಾ ಪ್ರಕ್ರಿಯೆ ಆರಂಭವಾಗುವ ದಿನದಿಂದಲೂ ಮತದಾ ರರಿಗೆ ಜಾಗೃತಿ ಮೂಡಿಸಲು ಈ ಸರ್ಕಾರದ ವಿಭಾಗಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕ ಪ್ರಮು ಖರು ಹಮ್ಮಿಕೊಂಡ ಹತ್ತಾರು ಬಗೆಯ ಪ್ರಯತ್ನದ ಫಲವಾಗಿ ಮತದಾನ ನಿರೀ ಕ್ಷೆಗೂ ಮೀರಿ ನಡೆಯುವ ಸಾಧ್ಯತೆಗಳಿವೆ. ಅಂತೆಯೇ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರ ತಂಡ ಚುನಾವಣೆಗೆ ನಡೆಸಿದ ಸಿದ್ದತೆಗಳ ಬಗ್ಗೆ ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ನೌಕರರು ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ.


ಈಗಾಗಲೇ ಚುನಾವಣೆಗೆ ಪೂರ್ವಭಾವಿಯಾಗಿ ತರಬೇತಿ ಶಿಬಿರಗಳು ಸೇರಿದಂತೆ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ನೌಕರರು ಇಂದು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದ ವ್ಯವಸ್ಥೆಯನ್ನು ಸಹ ಶ್ಲಾಘಿಸಿದ್ದಾರೆ.
ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ನೋಡಿಕೊಂಡ ಕ್ರಮ ವಿಶೇಷವಾಗಿದೆ. ಸ್ವಿಪ್ ಸಮಿತಿಯು ಮತದಾರರಲ್ಲಿ ಜಾಗೃತಿ ಮೂಡಿಸಲು ಕರಪತ್ರ ವಿತರಣೆ, ಮನೆ ಮನೆ ಬಾಗಿಲಲ್ಲಿ ಮತದಾನದ ತಿಳುವಳಿಕೆ ಸ್ಕೇಟಿಂಗ್, ರಂಗೋಲಿ ಹತ್ತು ಹಲವು ಕಾರ್ಯಕ್ರಮಗಳ ಜೊತೆಗೆ ವಿವಿಧ ಸಂಸ್ಥೆ ಗಳನ್ನು ಬಳಸಿಕೊಂಡು ಕಾರ್ಯಕ್ರಮವನ್ನು

ಆಯೋಜಿಸಲಾಗಿತ್ತು. ವಿಶೇಷವಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರನ್ನು ಇಲ್ಲಿ ಗಂಭಿರವಾಗಿ ಪರಿಗಣಿಸಲಾಗಿತ್ತು. ಇತ್ತೀಚೀನ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಅತ್ಯಂತ ಕಡಿಮೆ ಇತ್ತು. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ೧೪.೭೨ ಲಕ್ಷ ಮಂದಿ ಮತದಾನ ಮಾಡಲಿದ್ದು, ಅಗತ್ಯವಿರುವೆಡೆ ೮ ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಒಟ್ಟಾರೆ ೧೭೮೨ ಮತಗಟ್ಟೆಗಳು ಈ ಭಾರಿ ಕರ್ತವ್ಯ ನಿರ್ವಹಿಸಲಿದ್ದು, ಇದಕ್ಕಾಗಿ ೨೦೫೦ ಪಿಆರ್‌ಒ, ೨೦೫೦ ಎಪಿಎಆರ್‌ಒ, ೪೧೦೦ ಪಿಒ ಹಾಗೂ ೮೩ ಮೈಕ್ರೋ ಅಬ್ಜರ್‌ವರ‍್ಸ್ ನಿಯೋಜಿಸಲಾಗಿದೆ.


ಜಿಲ್ಲೆಯಲ್ಲಿ ಮಹಿಳಾ ಮತದಾರರ ಪ್ರಮಾಣ ಹೆಚ್ಚಾಗಿದ್ದು, ಶಿವಮೊಗ್ಗ ಗ್ರಾಮಾಂ ತರ, ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ತಾಲ್ಲೂಕಿನಲ್ಲಿ ಮಹಿಳಾ ಮತದಾ ರರು ಹೆಚ್ಚಾಗಿದ್ದಾರೆ. ಶಿಕಾರಿಪುರ ಹಾಗೂ ಸೊರಬದಲ್ಲಿ ಪುರುಷ ಮತದಾರರಿದ್ದಾರೆ. ಈ ನಡುವೆ ತೃತೀಯ ಲಿಂಗಿಗಳು ೩೨ ಜನ ಮತದಾನ ಮಾಡಲಿದ್ದಾರೆ.


ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ೨,೬೦,೭೦೪ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಉಳಿದಂತೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ೧,೮೮,೧೪೬ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮತಗಟ್ಟೆ ಯೊಳಗೆ ಮತದಾರ ಹಾಗೂ ಅವರ ಕೈಗೂಸು, ಅಂದ ಹಾಗೂ ದುರ್ಬಲರಿಗೆ ಸಹಾಯಕ, ಮತಗಟ್ಟೆ ಅಧಿಕಾರಿಗಳು ಹಾಗೂ ಅಭ್ಯರ್ಥಿ, ನಿಯೋಜಿತ ಏಜೆಂ ಟರಿಗೆ ಮಾತ್ರ ಅವಕಾಶವಿದೆ. ಯಾವು ದಾದರೂ ಒಂದು ದಾಖಲೆ ನೀಡಿದರೆ ಸಾಕು ಮತದಾನ ಮಾಡಬಹುದು. ನಾಳೆ ಬೆಳಗ್ಗೆ ೬ರಿಂದಲೇ ಮತಗಟ್ಟೆ ಆವರಣದ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಯಮಗಳು ಅನ್ವಯಿಸಲಾಗುತ್ತದೆ.


ನಾಳೆ ಗುಟ್ಟು ಬಚ್ಚಲಿಡಲಿರುವ ಅಭ್ಯರ್ಥಿಗಳ ಮತಗಳ ಪೆಟ್ಟಿಗೆಯನ್ನು ಏಳು ವಿಧಾನ ಸಭಾ ಕ್ಷೇತ್ರಗಳಲ್ಲೂ ಕಾಯ್ದಿರಿಸುವ ಹಾಗೂ ಮತ ಏಣಿಕೆ ಮಾಡುವ ಕ್ರಮಕೈಗೊಳ್ಳಲಾಗಿದೆ.


ನಾಳೆ ಮತದಾನ ನೆಪದಲ್ಲಿ ರಜೆ ಹಾಕಿ ಜಾಲಿ ಪ್ರವಾಸ ನಡೆಸುವ ಯಾವುದೇ ಅವಕಾಶ ಸಿಗಬಾರದೆಂದು ಜೋಗ, ಕುಪ್ಪಳ್ಳಿ, ಸಿಂಹಧಾಮ, ಸೇರಿದಂತೆ ಬಹುತೇಕ ಕಡೆ ಪ್ರವಾಸಿ ತಾಣಗಳನ್ನು ಬಂದ್ ಮಾಡಲಿದ್ದಾರೆ. ಬುದ್ದಿವಂತ ಸರಳ ಸೂಕ್ತ ಸಕಾಲದಲ್ಲಿ ಸಿಗುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಾಳಿನ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತುಂಗಾ ತರಂಗ ವಿನಂತಿಸುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!