ಭಜರಂಗದಳವನ್ನ ಕಾಂಗ್ರೆಸ್ ನಿಷೇಧಿಸುವ ಭರವಸೆ ನೀಡಿ ಹೊರಡಿಸುವ ಪ್ರಣಾಳಿಕೆಯನ್ನ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಅಭಿಯಾನ ನಡೆಸುತ್ತಿರುವ ಬೆನ್ನಲ್ಲೇ ಆಕ್ರೋಶಗೊಂಡ ಬಿಜೆಪಿ ಪ್ರತಿಭಟನೆ ಮುಂದುವರೆಸಿದೆ.
ಗೋಪಿವೃತ್ತದಲ್ಲಿ ಬಿಜೆಪಿ ನಗರ ಘಟಕ ಹನುಮಾನ್ ದೇವರ ಫೋಟೋ ಇಟ್ಟು ಹನುಮಾನ್ ಚಾಲೀಸ್ ಪಠಣ ಮಾಡಿದೆ. ಹನುಮಾನ್ ಚಾಲೀಸ್ ಕಿರುಹೊತ್ತಿಗೆಯನ್ನ ಕೈಯಲ್ಲಿ ಹಿಡಿದ ಬಿಜೆಪಿ ಕಾರ್ಯಕರ್ತರು ಹನುಮಾನ್ ಚಾಲೀಸ್ ಪಠಿಸಿದರು.
ಬಿಜೆಪಿ ಮುಖಂಡ ಗಿರಿಶ್ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಗೆ ಸೋಲಿನ ಭಯ ಹುಟ್ಟಿದೆ ಹೀಗಾಗಿ ಬೇಕಾದ್ದು ಮಾತನಾಡಲು ಹೊರಟಿದೆ. ಗ್ಯಾರೆಂಟಿ ಕಾರ್ಡ್ ಜನರಿಗೆ ಹಂಚಲು ಮುಂದಾಗಿ ಮಂಕು ಬೂದಿ ಹಚ್ಚಲು ಮುಂದಾಗಿದೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ದೀನ್ ದಯಾಳು, ಪಾಲಿಕೆ ಸದಸ್ಯೆ ಸುರೇಖಾ ಮುರುಳೀಧರ್, ಸುನೀತ ಅಣ್ಣಪ್ಪ ಮೊದಲಾದವರು ಭಾಗಿಯಾಗಿದ್ದರು.
ಸಾಗರ,
ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗ ದಳವನ್ನು ನಿಷೇಧಿಸುವ ಪ್ರಸ್ತಾಪ ಮಾಡಿರುವುದನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಭಜರಂಗ ದಳ, ದುರ್ಗಾವಾಹಿನಿ ಇನ್ನಿತರ ಪರಿವಾರ ಸಂಘಟನೆಗಳಿಂದ ಸಾಗರ ಹೋಟೆಲ್ ವೃತ್ತದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು.
ವಿಶ್ವಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ರವೀಶ್ ಮಾತನಾಡಿ, ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶಭಕ್ತ ಭಜರಂಗ ದಳ ಸಂಘಟನೆಯನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ದ್ದನ್ನು ಸಂಘ ಪರಿವಾರ ತೀವೃವಾಗಿ ಖಂಡಿಸುತ್ತಿದೆ. ಕಾಂಗ್ರೆಸ್ಗೆ ತಾಕತ್ತಿದ್ದರೆ ಪರಿವಾರದ ಸಂಘಟನೆಗಳನ್ನು ನಿಷೇದಿಸಿ ನೋಡಲಿ ಎಂದು ಸವಾಲು ಹಾಕಿದ ಅವರು, ಅದಕ್ಕೆ ತಕ್ಕ ಉತ್ತರವನ್ನು ಕರ್ನಾಟಕ ರಾಜ್ಯದಲ್ಲಿ ನಾವು ನೀಡಲು ತಯಾರಿದ್ದೇವೆ. ನಿಮ್ಮ ತಲೆ ಎಲ್ಲಿ ಇರಿಸಿಕೊಂಡು ಪ್ರಣಾಳಿಕೆ ಸಿದ್ದ ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತೇವೆ ಎನ್ನುವ ಭ್ರಮೆಯಲ್ಲಿ ನೀವಿದ್ದೀರಿ. ಒಂದೊಮ್ಮೆ ನೀವು ಅಧಿಕಾರಕ್ಕೆ ಬಂದರೂ ಕಾನೂನಿನ ಅಡಿಯಲ್ಲಿ ಸಂಘಟನೆ ನಿಷೇದ ಮಾಡಲು ಬರುವುದಿಲ್ಲ. ಕೇಂದ್ರ ಸರ್ಕಾರ ನಿಮ್ಮ ಪ್ರಸ್ತಾವನೆ ತಿರಸ್ಕರವಾಗುವ ಜೊತೆಗೆ ದೇಶದ ಸಮಸ್ತ ಹಿಂದೂ ಬಾಂಧವರು ಭಜರಂಗದಳದ ರಕ್ಷಣೆಗೆ ಬರುತ್ತಾರೆ. ಹಿಂದೂ ವಿರೋಧಿ ನೀತಿಯನ್ನು ಕೈಬಿಡಿ, ತಕ್ಷಣ ಭಜರಂಗ ದಳ ನಿಷೇಧ ಮಾಡುವ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದುರ್ಗಾವಾಹಿನಿಯ ಅಧ್ಯಕ್ಷೆ ಪ್ರತಿಮಾ ಜೋಗಿ, ಐ.ವಿ.ಹೆಗಡೆ, ಸಂತೋಷ್ ಶಿವಾಜಿ, ಕೋಮಲ್ ರಾಘವೇಂದ್ರ, ಸಂತೋಷ್ ಶೇಟ್, ಗಣೇಶ ಪ್ರಸಾದ್, ಪುರುಷೋತ್ತಮ್, ಅರವಿಂದ ರಾಯ್ಕರ್, ಕೆ.ವಿ.ಪ್ರವೀಣ್, ನಾರಾಯಣ ಮೂರ್ತಿ, ಸವಿತಾ ವಾಸು, ಭಾವನಾ ಸಂತೋಷ್, ಕೃಷ್ಣಮೂರ್ತಿ ಭಂಡಾರಿ, ಶ್ರೀರಾಮ್, ರಾಮು ಚವ್ಹಾನ್, ಪರಶುರಾಮ್ ಇನ್ನಿತರರು ಹಾಜರಿದ್ದರು.