ಶಿವಮೊಗ್ಗ: ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಸೇರಿದಂತೆ ಹಲವು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಇಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಅಭ್ಯರ್ಥಿ ಆಯನೂರು ಮಂಜುನಾಥ್ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.


ಆಯನೂರು ಮಂಜುನಾಥ್ ಅವರ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈ.ಹೆಚ್. ನಾಗರಾಜ್, ಬಿಜೆಪಿಯ ಹಿರಣ್ಣಯ್ಯ, ಲಾರೆನ್ಸ್ ಡಿಸೋಜ, ಸುಮಿತ್ ಆನಂದ್, ರವಿಕುಮಾರ್, ಲೀಲಾವತಿ, ಜಾನವಿ ರೆಡ್ಡಿ, ಪುಷ್ಪಾ ನಾಯಕ್ ಸೇರಿದಂತೆ ಹಲವರು ಜೆಡಿಎಸ್ ಸೇರ್ಪಡೆಗೊಂಡರು


ಈ ಸಂದರ್ಭದಲ್ಲಿಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಶಿವಮೊಗ್ಗದ ಶಾಂತಿ ನೆಮ್ಮದಿಗಾಗಿ ಬೇರೆಬೇರೆ ಪಕ್ಷಗಳಿಂದ ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ಸ್ವಾಗತದ ವಿಷಯ. ಹಿಂದಿನ ಚುನಾವಣೆಗಳಂತೆ ಈ ಚುನಾವಣೆ ಇರುವುದಿಲ್ಲ. ಗೆಲ್ಲುವ ತಂತ್ರವನ್ನು ಹೆಣೆಯಲಾಗುತ್ತಿದೆ ಎಂದರು.


ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಗೆಲ್ಲುವ ಆತ್ಮವಿಶ್ವಾಸ ಹೆಚ್ಚುತ್ತಿದೆ. ನಾವು ಮುಂದಿನ ಸಾಲಿನಲ್ಲಿ ಇದ್ದೇವೆ ಈ ಬಾರಿ ಅಚ್ಚರಿಯ ಫಲಿತಾಂಶ ಬರುವುದಂತೂ ನಿಜ. ನನ್ನನ್ನು ಕೊಳಚೆ ನೀರು ಎಂದು ಕರೆದವರಿಗೆ ಗೊತ್ತಿರಲಿ. ಕೊಳಚೆ ನೀರನ್ನು ಶೋಧಿಸಿದರೆ ಗಂಗೆ ಸಿಗುತ್ತದೆ. ಆದರೆ ಈ ಕೊಳಚೆ ಎಂಬುದು ಮಾಲ್ ಮಾರಾಟ ಮಾಡುವವರಲ್ಲ. ಮಾಲ್ ಮಾರಾಟ ಮಾಡುವವರಿಗೆ ಹೇಳಬೇಕು. ಭ್ರಷ್ಟಾಚಾರ ಮಾಡುವವರಿಗೆ ಹೇಳಬೇಕು ಎಂದರು.


ನಮಗೆ ಪ್ರತಿಸ್ಪರ್ಧಿಯೇ ಇಲ್ಲ. ಆದರೆ ಸನಿಹ ಸ್ಪರ್ಧಿಗಳು ಇದ್ದಾರೆ. ಆ ಸನಿಹ ಯಾರು ಎಂದು ಅವರಿಬ್ಬರೇ ತೀರ್ಮಾನಿಸಲಿ. ಕಾಂಗ್ರೆಸ್ಸಿಗೆ ಜನರೇ ಇಲ್ಲ. ರಾಷ್ಟ್ರೀಯ ಅಧ್ಯಕ್ಷರು ಬಂದಾಗ ಖಾಲಿ ಖುರ್ಚಿಗಳು ಅವರನ್ನು ಸ್ವಾಗತಿಸಿವೆ ಎಂದರೆ ಅದರ ಸ್ಥಿತಿಯನ್ನು ಗಮನಿಸಬೇಕು ಎಂದರು.
ಪಕ್ಷಕ್ಕೆ ಸೇರ್ಪಡೆಗೊಂಡ ವೈ.ಹೆಚ್. ನಾಗರಾಜ್ ಮಾತನಾಡಿ, ಶಿವಮೊಗ್ಗದ ಶಾಂತಿಗಾಗಿ ಆಯನೂರು ಮಂಜುನಾಥ್ ಶ್ರಮಿಸುತ್ತಿದ್ದಾರೆ.

ನನ್ನ ಉದ್ದೇಶವೂ ಅದೇ ಆಗಿದೆ. ಹಾಗಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ. ಮತ್ತು ಈ ಬಾರಿ ಬಿಜೆಪಿಯನ್ನು ಸೋಲಿಸಲೇಬೇಕಾಗಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಈ ಬಾರಿ ಆಯನೂರು ಮಂಜುನಾಥ್ ಗೆಲುವು ಶತಸಿದ್ಧ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!