ಶಿಕಾರಿಪುರ,ಮೇ.30:

ರಾಷ್ಟ್ರೀಯ ಪಕ್ಷಗಳ ಕಪಿಮುಷ್ಠಿಯಲ್ಲಿ ಕರ್ನಾಟಕ ಸಿಲುಕಿದ್ದು ಕನ್ನಡಿಗರು ಇದರಿಂದ ಹೊರ ಬರಬೇಕಾಗಿದೆ ಎಂದು ಶಿಕಾರಿಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅನಿಲ್ ಎಂ ಆರ್ ಹೇಳಿದರು.
ಅವರು ಇಂದು ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ನಾನು ಕರ್ನಾಟಕ ರಾಜ್ಯ ಕನ್ನಡ ಗೆಳೆಯರ ಬಳಗದ ಬೆಂಬಲದೊಂದಿಗೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು ಅವರಿಗೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.

ನಾನು ಮೂಲತಃ ಶಿಕಾರಿಪುರದ ನಿವಾಸಿಯಾಗಿದ್ದು ಇಲ್ಲಿನ ಜನರಿಗೆ ಸ್ಪಂದನೆ ಮಾಡುವುದು ನನ್ನ ಕರ್ತವ್ಯ ನಾನು ಕಳೆದ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರೂ ಹಣ ಹೆಂಡ ಜಾತಿಯನ್ನು ಮಾಡದೆ ಚುನಾವಣೆಯನ್ನು ಎದುರಿಸಿದ್ದು ನೈತಿಕತೆಯಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ ನಾಯಕತ್ವವನ್ನು ಬೆಳೆಸುವುದು ಎರಡನೇ ಹಂತದ ಯುವ ಪೀಳಿಗೆಯನ್ನು ಮುಖ್ಯ ದಾರಿಗೆ ತರುವುದು ನಮ್ಮ ಸ್ಪರ್ಧೆಯ ಉದ್ದೇಶವಾಗಿದೆ ತಾಲೂಕಿನಲ್ಲಿ ತಂಡವನ್ನು ಕಟ್ಟಿಕೊಂಡು ಸುತ್ತಾಡುತ್ತಿದ್ದು ನಾಯಕತ್ವವನ್ನು ಉಳಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

2014ರಿಂದ ಉಪಚುನಾವಣೆ ಸೇರಿದ ಸ್ಪರ್ಧೆಯನ್ನು ಮಾಡುತ್ತಿದ್ದು ಕುಟುಂಬ ರಾಜಕಾರಣವನ್ನು ಹೊರತುಪಡಿಸಿ ಯುವ ಪೀಳಿಗೆಯನ್ನು ಮುಖ್ಯ ವಾಣಿಗೆ ತರುವುದಾಗಿದೆ ಸಾವಿರ ಕಿಲೋಮೀಟರ್ ದಾರಿಯನ್ನು ಕ್ರಮಿಸಿ ಪ್ರಚಾರವನ್ನು ಮಾಡುವುದು ನನ್ನ ಉದ್ದೇಶವಾಗಿದೆ . ಗೆಳೆಯರ ಬಳಗದ ವತಿಯಿಂದ ಮುಂಬರುವ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ತಾಲೂಕ್ ಪಂಚಾಯತ್ ಗ್ರಾಮ ಪಂಚಾಯತ್ ಹಾಗು ನಗರಸಭೆ ಪುರಸಭೆಗಳಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಈ ಮೂಲಕ ಸ್ಥಳೀಯವಾಗಿ ಪ್ರತಿಭೆಗಳನ್ನು ಹೊರ ತರುವ ಪ್ರಯತ್ನ ನಮ್ಮದಾಗಿದೆ ಎಂದರು.


ಕೇಂದ್ರ ಸರ್ಕಾರ ಓದಿದ ಬ್ಯಾಂಕ್ ಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ರಾಜ್ಯದ್ಯಂತ ಇರುವ ಎಲ್ಲ ಬ್ಯಾಂಕಿಂಗ್ ಸಿಸ್ಟಮ್ ಅನ್ನು ಹಾಳು ಮಾಡುತ್ತಿದ್ದು ರಾಜ್ಯದ ಬ್ಯಾಂಕುಗಳು ಕಾಣೆಯಾಗುತ್ತಿವೆ ರೈತರ ಸಂಸ್ಥೆಯನ್ನು ಅಮೂಲ್ನಂತಹ ಸಂಸ್ಥೆಯೊಂದು ನುಂಗಿ ಹಾಕಲಿದೆ ಎಂದರು.
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಕರ್ನಾಟಕ ರಾಜ್ಯದ ಮೂರು ಲಕ್ಷ ರೂಪಾಯಿಗಳ ಬಜೆಟ್ಟನ್ನು ಜನತೆಗೆ ಮುಟ್ಟಿಸುವುದು ಹಾಗೂ ಕರ್ನಾಟಕ ರಾಜ್ಯ ನೀರಾವರಿ ಸೇರಿದಂತೆ ಸಮೃದ್ಧವಾದ ರಾಜ್ಯವಾಗಿದ್ದು ಇಲ್ಲಿನ ತೆರಿಗೆಯನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ವಸೂಲು ಮಾಡಿ ಬೇರೆ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ ಇದು ನಮ್ಮ ಕನ್ನಡಿಗರ ಮೇಲಿನ ಹಲ್ಲೆಯಾಗಿದೆ ತೆರಿಗೆ ದ್ವಿಮುಖ ನೀತಿಯನ್ನು ನಾವು ಖಂಡಿಸಿ ಪ್ರತಿಪಟಿಸುತ್ತೇವೆ ಈ ಬರೆಯಲು ವಿರೋಧಿಸಿ ನಾವು ರಾಷ್ಟ್ರೀಯ ಪಕ್ಷಗಳಿಂದ ದೂರ ಉಳಿದು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಒಂದೇ ಮುಖದ ಎರಡು ನಾಣ್ಯಗಳಾಗಿವೆ ಎಂದರು.

ಈ ಕಾರಣಗಳಿಗಾಗಿ ತಳಿಯ ಪ್ರತಿಭೆಯನ್ನು ತಾವು ಬೆಂಬಲಿಸಿ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಣ್ಣ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲೋಕಯ್ಯ ಉಪಸ್ಥಿತರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!