ಶಿವಮೊಗ್ಗ: ಸಂಘಟನೆ ಮತ್ತು ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಗೆದ್ದು ಅವರ ಆಶೀರ್ವಾದ ಪಡೆದು ಸಂಘಟನೆಯ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನಗರದ ನಾಗರಿಕರು ಬಿಜೆಪಿ ಬಗ್ಗೆ ಅಪೇಕ್ಷೆ ಹೊಂದಿದ್ದಾರೆ ಎಂದು ಪಕ್ಷದ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಹೇಳಿದರು.


ಅವರು ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಮೀಡಿಯಾ ಹೌಸ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘಟನೆಯೇ ಶಕ್ತಿ. ಬಿಜೆಪಿ ಸಂಘಟನಾತ್ಮಕವಾಗಿ ಪ್ರಬಲವಾಗಿದ್ದು, ಶಿವಮೊಗ್ಗದಲ್ಲಿ ಗೆಲುವಿಗೆ ಪೂರಕ ವಾತಾವರಣವಿದೆ ಎಂದರು.


ಬಿಜೆಪಿ ಕಾರ್ಯಕರ್ತನಾದ ನನಗೆ ಪಕ್ಷ ಸ್ಪರ್ಧೆಗೆ ಅವಕಾಶ ನೀಡಿದೆ. ಯಡಿಯೂರಪ್ಪ, ಈಶ್ವರಪ್ಪ, ಮೇಲ್ಪಂಕ್ತಿ ಹಾಕಿದ್ದಾರೆ. ೧೯೮೦ರ ದಶಕದಿಂದ ಶಿವಮೊಗ್ಗ ಶಾಸಕರಾಗಿ ಈಶ್ವರ‍್ಪಪ್ಪ ಕೆಲಸ ಮಾಡಿದ್ದಾರೆ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಅವರು ನನ್ನನ್ನು ಬೆಳೆಸಿದ್ದಾರೆ ಎಂದರು.


ದೇಶ ಮೊದಲು ಎನ್ನುವ ಪಕ್ಷ ನಮ್ಮದು. ಸರ್ವೆ ಆಧರಿಸಿ ನನಗೆ ಟಿಕೆಟ್ ನೀಡಲಾಗಿದೆ. ನಾನು ಟಿಕೆಟ್ ಹಿಂದೆ ಹೋದವನಲ್ಲ. ನಾನು ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡಿದ್ದೇನೆಯೇ ಹೊರತು ರೇಸ್‌ನಲ್ಲಿ ಇರಲಿಲ್ಲ. ಪಕ್ಷದ ಮುಖಂಡರು ಪಕ್ಷ ಬಿಟ್ಟು ಹೋಗಬಹುದು. ಆದರೆ ಬಿಜೆಪಿ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.


ನಾವು ಎಂದೂ ಕೂಡ ಅಶಾಂತಿ ನಿರ್ಮಾಣಕ್ಕೆ ಕಾರಣರಾಗಿಲ್ಲ. ಆ ರೀತಿ ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಹೋರಾಟ ನಡೆಸಿದ್ದೇವೆ. ನಮ್ಮಿಂದ ಎಂದೂ ಕೂಡ ಗಲಭೆ ಆರಂಭವಾಗಿಲ್ಲ. ಗಲಭೆ ನಡೆದ ಕೂಡಲೆ ಪೊಲೀಸರಿಗೆ

ಮಾಹಿತಿ ನೀಡಿದ್ದೇವೆ ಎಂದು ಚನ್ನಬಸಪ್ಪ ಹೇಳಿದರು.
ಈ ಸಂದರ್ಭದಲ್ಲಿ ಕೆಯುಡಬ್ಲ್ಯುಜೆಎ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!