ಶಿವಮೊಗ್ಗ,ಏ.15:
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು ಚುನಾವಣೆಯ ನಾಮಪತ್ರ ಸಲ್ಲಿಕೆಯ ಹಿಂದಿನ ದಿನ ಅಂದರೆ ಏಪ್ರಿಲ್ 19 ರಂದು ಅಭ್ಯರ್ಥಿ ಯಾರು ಎಂದು ಘೋಷಣೆ ಆಗಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಕಾಂಗ್ರೆಸ್ ಮೊದಲು ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಘೋಷಿಸಲಿ ನಂತರ ಅಗತ್ಯದಂತೆ ಜಾತಿ ಆಧಾರ ಮೂಲಕ ಅಭ್ಯರ್ಥಿಯ ಹೆಸರನ್ನು ಘೋಷಿಸಲು ನಿರ್ಧರಿಸಿದೆ. ಆದರೆ ಈ ವಿಚಾರದಲ್ಲಿ ಅದೇ ಬಗೆಯ ನಿರ್ಧಾರ ಕೈಗೊಂಡಿದೆ ಎನ್ನಲಾಗಿರುವ ಬಿಜೆಪಿ ತಮ್ಮ ಪಕ್ಷದ ಅಭ್ಯರ್ಥಿ ಆಕಾಂಕ್ಷಿಗಳು ಪಕ್ಷ ಬಿಡಬಾರದೆಂದು ನಿರ್ಧರಿಸಿ ಚುನಾವಣೆಯ ಅವಧಿಯ ನಾಮಪತ್ರ ಸಲ್ಲಿಕೆಯ ಕೊನೆಯ ಕ್ಷಣದವರೆಗೂ ಟಿಕೆಟ್ ಅನ್ನು ಕಾಯ್ದಿರಿಸಿಕೊಂಡಿದೆ.
ಈಗಲೂ ಭಾರತೀಯ ಜನತಾ ಪಕ್ಷದಲ್ಲಿ ಡಾ. ಧನಂಜಯ ಸರ್ಜಿ, ಜ್ಯೋತಿ ಪ್ರಕಾಶ್, ಕಾಂತೇಶ್, ಆಯನೂರು ಮಂಜುನಾಥ್, ಹರಿಕೃಷ್ಣ ಹೆಸರು ಸುತ್ತಾಡುತ್ತಿದ್ದು ಇದರ ನಡುವೆ ಕಾಣದ ಕೈಯೊಂದು ಆರ್ ಎಸ್ ಎಸ್ ಬುಡದವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆನ್ನಲಾಗಿದೆ.
ಕಾಂಗ್ರೆಸ್ ತನ್ನ ಪಕ್ಷದ 11 ಜನ ಟಿಕೆಟ್ ಕೋರಿರುವವರನ್ನು ಪರಿಗಣಿಸಿದ್ದು ಜೊತೆಗೆ ಆಯನೂರು ಮಂಜುನಾಥ್ ಆಯನೂರು ಮಂಜುನಾಥ್ ಅವರನ್ನು ಅಗತ್ಯದ ಸಂದರ್ಭದಲ್ಲಿ ಸೇರಿಸಿಕೊಳ್ಳುವ ಅವಕಾಶವನ್ನು ಹಾಗೆಯೇ ಕಾಯ್ದಿರಿಸಿಕೊಂಡಿದೆ ಅಂತೆಯೇ ಜೆಡಿಎಸ್ ಜಿಲ್ಲಾಧ್ಯಕ್ಷ ಎಮ್ ಶ್ರೀಕಾಂತ್ ಅವರಿಗೆ ಮಣೆ ಹಾಕಲು ಎತ್ತಿಸುತ್ತಿದ್ದರೂ ಸಹ ಶ್ರೀಕಾಂತ್ ಅವರು ಅಷ್ಟಾಗಿ ಗಮನಹರಿಸಿಲ್ಲ ಎನ್ನಲಾಗಿದೆ ಒಂದು ವೇಳೆ ಆಯನೂರು ಮಂಜುನಾಥ್ ಜೆಡಿಎಸ್ ನತ್ತ ಸುಳಿಯಬಹುದು ಕಾಲ ನಿರ್ಧರಿಸಬೇಕಾಗಿದೆ ಮೊದಲು ಯಾವುದಾದರೂ ಒಂದು ಪಕ್ಷ ಅದು ರಾಷ್ಟ್ರೀಯ ಪಕ್ಷ ಟಿಕೆಟ್ ಅನೌನ್ಸ್ ಮಾಡಿದ ಮಾತ್ರ ಇವುಗಳಿಗೆ ಉತ್ತರ ಸ್ಪಷ್ಟವಾಗಲು ಸಾಧ್ಯ
ಶಿವಮೊಗ್ಗ ರಾಜಕಾರಣ ಅತ್ಯಂತ ವಿಚಿತ್ರ. ಇಲ್ಲಿ ಅಭ್ಯರ್ಥಿಯ ಆಯ್ಕೆ ಜಾತಿ ಆಧಾರದಲ್ಲೇ ನಡೆಯಬೇಕಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ಜಾತಿಯವರಿಗೆ ಟಿಕೆಟ್ ನೀಡುವ ಸಾಧ್ಯತೆಗಳು ಅತ್ಯಂತ ಕಡಿಮೆ.
ಲಿಂಗಾಯಿತ, ಮುಸ್ಲಿಂ, ಬ್ರಾಹ್ಮಣ ಮತಗಳ ಜೊತೆ ಪರಿಷ್ಟ ಜಾತಿ ಪಂಗಡ ಹಾಗೂ ಹಿಂದುಳಿದ ವರ್ಗದ ಮತಗಳು ಸಹ ಇಲ್ಲಿ ಗಂಭೀರವಾಗಿ ಪರಿಗಣಿತವಾಗಿವೆ.
ಬಂದ ಮಾಹಿತಿ ಪ್ರಕಾರ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಏಪ್ರಿಲ್ 20ರ ಕಾಲಘಟ್ಟದಲ್ಲಿ ಎರಡೂ ಪಕ್ಷದ ಅಭ್ಯರ್ಥಿಗಳ ಘೋಷಣೆ ಸಾಧ್ಯತೆ ಇದೆ. ಏಕೆಂದರೆ ಪಕ್ಷ ಬದಲಾವಣೆ ಮಾಡುವ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳುವ ತಂತ್ರ ಒಂದು ಕಡೆಯಾದರೆ, ಕೊನೆಯ ಹಂತದ ಚುನಾವಣೆಯ ಕಿರಿಕಿರಿಗಳು ಹಾಗೂ ಚುನಾವಣೆಯ ಸಮರ್ಥ ಹೋರಾಟ ಎರಡು ರಾಜಕೀಯ ಪಕ್ಷಗಳ ಮುಂದೆ ನಿಂತುಕೊಂಡಿದೆ ಎನ್ನಲಾಗಿದೆ.