ಶಿವಮೊಗ್ಗ, ಏ.13:
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿರುವ ಕಾರಣ ಶಿವಮೊಗ್ಗ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಕೆ.ಎಸ್. ಈಶ್ವರಪ್ಪ ಅವರಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ಅನಿವಾರ್ಯವಾಗಿ ಸಾಧ್ಯವಾಗದಿದ್ದರೆ ಅವರ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್ ಸೇರಿದಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಉಪ ಮೇಯರ್ ಲಕ್ಷ್ಮಿಃ ಶಂಕರ ನಾಯ್ಕ್, ಸದಸ್ಯರಾದ ಸುರೇಖ ಮುರಳೀಧರ್, ವಿಶ್ವಾಸ್, ಗನ್ನಿ ಶಂಕರ್, ಪ್ರಭಾಕರ್, ಆರತಿ ಪ್ರಕಾಶ್, ಅನಿತಾ, ಯು.ಎಚ್. ವಿಶ್ವನಾಥ್, ಎಸ್.ಜಿ. ರಾಜು, ಪ್ರಭಾಕರ್, ಮಂಜುನಾಥ್, ಸಂಗೀತಾ ನಾಗರಾಜ್, ಆಶಾ ಚಂದ್ರಪ್ಪ, ರಾಹುಲ್ ಬಿದರೆ, ಭಾನುಮತಿ ಶೇಟ್, ಲತಾ ಗಣೇಶ್, ಶಿರೀಶ್, ಮೂರ್ತಿ ಸೇರಿದಂತೆ ಎಲ್ಲಾ ಬಿಜೆಪಿ ಸದಸ್ಯರು ಹಾಜರಿದ್ದರು.
ಎರಡನೇ ಪಟ್ಟಿಯಲ್ಲಿಯೂ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಹೆಸರು ಇಲ್ಲ. ಮೂರನೇ ಪಟ್ಟಿಯಲ್ಲಿ ತಮ್ಮ ಬೇಡಿಕೆಯಂತೆ ಅಭ್ಯರ್ಥಿ ಹೆಸರು ಘೋಷಿಸುವಂತೆ ಒತ್ತಾಯಿಸಿದರು.