ಶಿವಮೊಗ್ಗ:
ಶಿವಮೊಗ್ಗ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ನ ಈ ಐವರ ಹೆಸರುಗಳು ಅಂತಿಮ ಹಂತದ ರಣರಂಗದಲ್ಲಿ ನಿಂತಿವೆ ಎಂದು ಬಲ್ಲಮೂಲಗಳು ಇಂದಿಲ್ಲಿ ಸ್ಪಷ್ಟಪಡಿಸುತ್ತಿವೆ. ಒಬ್ಬರಿಗೆ ಮಾತ್ರ ಸಿಗುವ ಈ ಟಿಕೇಟ್ ಬಿಜೆಪಿ ಪಟ್ಟಿ ಬಿಡುಗಡೆಯಾದ ನಂತರವೇ ಹೊರಬರಲಿದೆ ಎನ್ನಲಾಗಿದೆ.


ಕಾಂಗ್ರೆಸ್ ಪಕ್ಷವು ಪಟ್ಟಿ ಬಿಡುಗಡೆ ಮಾಡುವ ಮುನ್ನ ಬಿಜೆಪಿ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿಲ್ಲ ಎನ್ನಲಾಗಿದ್ದು, ಯಾರು ಮೊದಲು ಬಿಡುಗಡೆ ಮಾಡ್ತಾರೆ ಎಂಬುದೇ ಇಲ್ಲಿ ನಿಗೂಢ ಪ್ರಶ್ನೆಯಾಗಿ ಉಳಿದಿದೆ.


ಇಲ್ಲಿಯೂ ಸಹ ಜಾತಿ ಆಧಾರದ ಲೆಕ್ಕಾಚಾರಗಳು ಪ್ರಮುಖವಾಗಿ ಕಂಡುಬರುತ್ತಿವೆ. ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ನೋಡಿಕೊಂಡು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಉದ್ದೇಶದಿಂದ ಅಂತಿಮವಾಗಿ ಹಿಂದುಳಿದ ವರ್ಗ, ಲಿಂಗಾಯಿತ, ಒಕ್ಕಲಿಗ ಜನಾಂಗದ ಐವರ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಇಟ್ಟುಕೊಂಡಿದೆ ಎಂದು ಇದೇ ಮೂಲಗಳು ತಿಳಿಸುತ್ತಿವೆ.


ಅಂತಿಮ ಹಂತದ ಸುತ್ತುಗಳ ನಡುವೆ ಆಯನೂರು ಮಂಜುನಾಥ್/ ಹೆಚ್.ಸಿ. ಯೋಗೇಶ್, ನರಸಿಂಹಮೂರ್ತಿ/ ಸುಂದರೇಶ್, ಎಲ್. ಸತ್ಯನಾರಾಯಣ್ ಹೆಸರು ಅಂತಿಮ ಹಂತದ ಕೊನೆಯ ಕುಣಿಕೆಯೊಳಗೆ ಸೇರಲು ತವಕಿಸುತ್ತಿವೆ. ಯಾರಿಗೆ ಇದು ಹೂವಿನ ಹಾರವಾಗಬಲ್ಲದು?
ಈಗಾಗಲೇ ವೈಎಚ್ ನಾಗರಾಜ್ ಹಾಗೂ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಅವರು ಯಾರಿಗೆ ಟಿಕೆಟ್ ಸಿಕ್ಕರೂ ನಾವು ಪಕ್ಷಕ್ಕಾಗಿ ದುಡಿಯುತ್ತೇವೆ. ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ದೊರೆತರೆ ಬೆಂಬಲಿಸುತ್ತೇವೆ ಎಂದು ಸುದ್ದಿಗೋಷ್ಠಿಗಳಲ್ಲಿ ತಿಳಿಸಿದ್ದಾರೆ ಎಂಬುದು ಇಲ್ಲಿನ ಮುಖ್ಯ ಚರ್ಚಿತ ವಿಚಾರ.


ಈಶ್ವರಪ್ಪನ ಹೊರತಾಗಿ ಬೇರೆ ಯಾರೇ ಸ್ಪರ್ಧಿಸಿದರೂ ಸಹ ನಾನು ಬಿಜೆಪಿ ಬಿಡುವುದಿಲ್ಲ ಈಶ್ವರಪ್ಪ ಸ್ಪರ್ಧಿಸಿದರೆ ಯಾವುದೇ ಕಾರಣಕ್ಕೂ ನಾನು ನಾನು ವಿರುದ್ಧವಾಗಿ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಲೇ ಬಂದಿರುವ ಆಯನೂರು ಮಂಜುನಾಥ್ ಅವರ ಈ ನಿರ್ಧಾರ ಗಟ್ಟಿಯಾಗಲು ಬಿಜೆಪಿ ಪಟ್ಟಿ ಹೊರಬರಬೇಕಿದೆ ಎಂಬುದು ಸಹ ಇಲ್ಲಿ ಮುಖ್ಯ ಸಂಗತಿ
ಕಾಂಗ್ರೆಸ್ ಪಕ್ಷದ ಪಟ್ಟಿ ಬಿಡುಗಡೆಯಾಗುವ ಮುನ್ನವೇ ಬಿಜೆಪಿಯ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಅಂತೆಯೇ ಕಾಂಗ್ರೆಸ್ ಸಹ ಇದೇ ಆಟವಾಡುತ್ತಿದೆ. ಚುನಾವಣಾ ದಿನಗಳು ಹತ್ತಿರ ಬರುತ್ತಿವೆ.


ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ರಾಜ್ಯಮಟ್ಟದಿಂದ ಕೇಂದ್ರ ಮಟ್ಟಕ್ಕೆ ಜಿಗಿದು ಸಾಕಷ್ಟು ಒತ್ತಡ, ಶಿಫಾರಸ್ಸುಗಳ ನಡುವೆ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ನಾಯಕರು ಹೆಚ್ಚಿನ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!