ಶಿವಮೊಗ್ಗ, ಏ.02:
ಶಿವಮೊಗ್ಗ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯ ಚೆಕ್ ಪೋಸ್ಟ್ ಗಳ ತಪಾಸಣೆಯಲ್ಲಿ ನಾಲ್ಕು ಪ್ರಮುಖ ಪರಿಶೀಲನೆ ನಡೆದಿದ್ದು ಅದರಲ್ಲಿ ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳ ಬ್ಯಾಗ್ ಗಳು ಅನದಿಕೃತವಾಗಿ ತೆಗೆದುಕೊಂಡು ಹೋಗುತ್ತಿದ್ದ ನಗದು ಹಾಗೂ ರಘು ಹಾಗೂ ಜಮಖಾನಗಳನ್ನು ಏಪ್ರಿಲ್ ಒಂದರ ನಿನ್ನೆ ವಶಪಡಿಸಿಕೊಳ್ಳಲಾಗಿದೆ ಎಲ್ಲ ಸಮಗ್ರ ಮಾಹಿತಿಗಳು ಈ ಕೆಳಕಂಡಂತಿವೆ. ಅಂದಾಜು ಹನ್ನೊಂದೂವರೆ ಲಕ್ಷ ಮೌಲ್ಯದ ನಗದು, ವಸ್ತುಗಳು ದೊರೆಯುತ್ತವೆ.
ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು, ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಮತ್ತು ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಈ ಕೆಳಕಂಡ ವಸ್ತುಗಳು ಮತ್ತು ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
1) ದಿನಾಂಕಃ 01-04-2023 ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ಮೌಲ್ಯ ರೂ 10,00,000/- ಗಳ ಅಕ್ಕಿ, ಬೇಳೆ, ಎಣ್ಣೆ, ಶಾವಿಗೆ, ಸಕ್ಕರೆ ಮತ್ತು ಇತರೆ ವಸ್ತುಗಳಿದ್ದ 500 ಬ್ಯಾಗ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
2) ದಿನಾಂಕಃ 01-04-2023 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು ಮೌಲ್ಯ ರೂ 5,00,000/- ಗಳ 115 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
3) ದಿನಾಂಕಃ 01-04-2023 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ 03 ಲಗೇಜ್ ವಾಹನಗಳಲ್ಲಿ ಸಾಗಿಸುತ್ತಿದ್ದ ಅಂದಾಜು ಮೌಲ್ಯ ರೂ 4,50,000/- ಗಳ ರಗ್ಗು ಮತ್ತು ಜಮಖಾನಗಳನ್ನು ವಶಪಡಿಸಿಕೊಳ್ಳಲಾಗಿದೆ.
4)ದಿನಾಂಕಃ 01-04-2023 ರಂದು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ ರೂ 90,000/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.