ಶಿವಮೊಗ್ಗ, ಏ.01;
ಭದ್ರಾವತಿ ತಾಲ್ಲೂಕಿನ ಅರಬಿಳಚಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ನರೇಗಾ ಕೂಲಿ ಕೆಲಸ ನೀಡುವಲ್ಲಿ ವಿಪಲರಾಗಿದ್ದಾರೆ ಎಂದು ಆಗ್ರಹಿಸಿ ಅರಬಿಳಚಿ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಹಾಗೂ ನರೇಗಾ ಕಾರ್ಮಿಕರು ಗ್ರಾಪಂ ಮುಂಭಾಗ ಅನಿರ್ದಿಷ್ಠಾವಧಿ ಮುಷ್ಕರ ಪ್ರತಿಭಟನೆ ನಡೆಸಿದರು.
ಅರಬಿಳಚಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾರ್ಮಿಕರು ದಲಿತ ಸಂಘರ್ಷ ಸಮೀತಿ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಪಿಡಿಓ ನರೆಗಾ ಕೂಲಿ ಕೆಲಸವನ್ನು ನೀಡುತ್ತಿಲ್ಲ. ಬಾಕಿ ಕೂಲಿ ಹಣವನ್ನು ಖಾತೆಗಳಿಗೆ ಜಮಾ ಮಾಡದೆ ಸತಾಯಿಸುತ್ತಿದ್ದಾರೆ. ಇಸ್ವತ್ತು ನೀಡಲು ಸಾವಿರಾರು ರೂಪಾಯಿ ಹಣ ಕೇಳುತ್ತಿದ್ದಾರೆ.
ಲಂಚ ನೀಡದ ೧೪೦ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಇ-ಸ್ವತ್ತು ನೀಡಿಲ್ಲ ಎಂದು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಇದೆ ಅಧಿಕಾರಿ ವಿರುದ್ಧ ಕೆಲ ದಿನಗಳ ಹಿಂದೆ ಪ್ರತಿಭಟನೆಯಾದಾಗ ಅರಬಿಳಚಿ ಗ್ರಾಪಂ ತನಿಖಾಧಿಕಾರಿಯಾಗಿ ನೇಮಕವಾದ ತಾಪಂ ಸಹಾಯಕ ನಿರ್ದೆಶಕ ಉಪೇಂದ್ರ ಪ್ರತಿಭಟನಾಕಾರರು ಮನವೊಲಿಸಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ. ಪಿಡಿಓ ಹನುಮಂತಪ್ಪನನ್ನು ಕೂಡಲೆ ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದಿದ್ದಾರೆ.
ಮದ್ಯಾಹ್ನದ ವೇಳೆಗೆ ಗ್ರಾಪಂಗೆ ಬೇಟಿ ನೀಡಿದ ಭದ್ರಾವತಿ ತಾಪಂ ಇಒ ರಮೇಶ್ ಪ್ರತಿಭಟನಾಕಾರೊಂದಿಗೆ ಮಾತನಾಡಿದರೂ ಯಾವುದೇ ಪ್ರಯೋಜವಾಗಲಿಲ್ಲ. ಪಿಡಿಒ ವರ್ಗಾವಣೆಗೊಳಸಿ ಗ್ರಾಪಂ ಸಮಸ್ಯೆಗಳನ್ನು ಸರಿ ಪಡಿಸುವ ವರೆಗೆ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ಅನಿರ್ದಿಷ್ಠಾವಧಿ ಪ್ರತಿಭಟನೆ ಆರಂಭಿಸಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಡುಗೆ ಮಾಡಿ ಸೇವಿಸಿದರು.
ಪಿಡಿಓ ಹಣ ದುರುಪಯೋಗದ ಆರೋಪ ಸೇರಿದಂತೆ ಕಾರ್ಯವೈಖರಿಯಿಂದ ಅಮಾದಾನಗೊಂಡ ಗ್ರಾಪಂ ಸದಸ್ಯರು ಪ್ರತಿಭಟನಾಕಾರರೊಂದಿಗೆ ಪಿಡಿಓ ವಿರುದ್ಧ ಇಓಗೆ ದೂರು ನೀಡಿದರು. ಕ್ರಮ ಕೈಗೊಳ್ಳುವ ಭರವಸೆ ನೀಡಿದ ಭದ್ರಾವತಿ ತಾ. ಪಂ. ಇಓ ಮತ್ತೆ ಇತ್ತ ತಿರುಗಿ ನೋಡಿಲ್ಲ. ಹಾಗಾಗಿ ಇಂದು ತಾ. ಪಂ ಕಛೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ರೈತ ಮುಖಂಡ ಮಂಜುನಾಥ್, ಗ್ರಾಪಂ ಅಧ್ಯಕ್ಷ ಸದಾಶಿವಪ್ಪ, ಡಿಎಸ್‌ಎಸ್ ತಾಲೂಕು ಸಂಚಾಲಕ ಸುರೇಶ್, ರಾಮಲಿಂಗಪ್ಪ, ಗ್ರಾಪಂ ಸದಸ್ಯರಾದ ಕಿರಣ್, ಶಬರಿಶ್, ಗುಣಶೇಖರ್, ಬಸವರಾಜ್, ವೀರಭದ್ರಪ್ಪ, ಆಂಜನೇಯ ಇತರರಿದ್ದರು.