ವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಈಗ ನಿರ್ಮಾಣವಾಗಿ ರುವ ಮನೆಗಳು ಉತ್ತಮ ದರ್ಜೆಯನ್ನು ಹೊಂದಿದ್ದು, ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕು ಮಾರ್ ಆರೋಪಿಸಿದಂತೆ ವಾಸಕ್ಕೆ ಯೋಗ್ಯವಲ್ಲದ ಮನೆಗಳು ಅಲ್ಲಿ ಇಲ್ಲ ಎಂದು ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ಸ್ಪಷ್ಟಪಡಿಸಿದ್ದಾರೆ.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆ.ಬಿ.ಪ್ರಸನ್ನ ಕುಮಾರ್ ಅವರು ಅವಸರದಲ್ಲಿ ಮುಖ್ಯಮಂತ್ರಿಗಳು ಅವಸರದಲ್ಲಿ ಮನೆಗಳನ್ನು ಉದ್ಘಾಟಿಸುತ್ತಾರೆ ಎಂದು ಆರೋಪಿಸಿದ್ದಾರೆ. ಆದರೆ ಫಲಾನುಭವಿಗಳು ತಾವು ಬಾಡಿಗೆ ಮನೆಯಲ್ಲಿದ್ದೇವೆ. ಆಶ್ರಯ ಮನೆಗಾಗಿ ಸಾಲ ಮಾಡಿದ್ದಾರೆ. ಈಗ ಮನೆಗಳು ಪೂರ್ಣಗೊಂಡಿವೆ. ಅವುಗಳನ್ನು ನಮಗೆ ನೀಡಿ ಎಂದು ಒತ್ತಾಯಿಸಿದ್ದರಿಂದ ಪೂರ್ಣಗೊಂಡ ೬೨೦ ಮನೆಗಳನ್ನು ಲಾಟರಿ ಮೂಲಕ ಹಂಚಲಾಗಿದೆ ಎಂದರು.


೧೨ ವರ್ಷಗಳ ಹಿಂದೆ ಶಾಸಕರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ೨೦೧೮-೧೯ರಲ್ಲಿ ೬೫೦ ಎಕರೆ ಖರೀದಿಸಿ ಮನೆಗನ್ನು ನಿರ್ಮಿಸಿಕೊಡುವ ಯೋಜನೆಯನ್ನು ರೂಪಿಸಿದ್ದರು. ನಂತರ ಶಾಸಕರಾಗಿ ಆಯ್ಕೆಯಾಗಿದ್ದ (ಕೆ.ಬಿ. ಪ್ರಸನ್ನಕುಮಾರ್ ಅವರು ಈ ಯೋಜನೆಯ ಕಾರ್ಯರೂಪಕ್ಕೆ ಯಾವುದೇ ಪ್ರಯತ್ನ ಮಾಡಲಿಲ್ಲ. ಇವರು ಅಲ್ಲಿ ಮನೆಗಳನ್ನು ನಿರ್ಮಿಸಿ ಕೊಡದೆ ಈಗ ಕೆ.ಎಸ್. ಈಶ್ವರಪ್ಪನವರ ವಿರುದ್ಧವೇ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ಈಗ ಮನೆಗಳು ನಿರ್ಮಾಣವಾಗಿರುವುದಕ್ಕೆ ಶಹಬಾಸ್‌ಗಿರಿ ಹೇಳಬೇಕೇ ಹೊರತು ಆರೋಪ ಮಾಡುವುದುಸರಿಯಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಬೇಕು ಎಂದರು.


ಗೋವಿಂದಾಪುರದಲ್ಲಿ ೩೦೦೦ ಮತ್ತುಗೋಪಿಶೆಟ್ಟಿಕೊಪ್ಪದಲ್ಲಿ ೧೮೩೬ ಮನೆಗಳನ್ನು ನಿರ್ಮಿಸಲು ಸರ್ಕಾರದಿಂದ ಮಂಜೂರಾಗಿದ್ದು, ತದನಂತರ ಗೋವಿಂದಾಪುರದಲ್ಲಿ ೧ ಬ್ಲಾಕ್‌ನಲ್ಲಿ ೨೪ ಮನೆಗಳನ್ನು ಮಾದರಿ ಮನೆಯಾಗಿ ನಿರ್ಮಿಸಲು ಹೊಸ ತಂತ್ರಜ್ಞಾನದ ಷೇರುವಾಲ್ ಟೆಕ್ನಾಲಜಿ ಉಪಯೋಗಿಸಿ ಕಾಮಗಾರಿ ನಡೆಸಲು ೨೦೧೯ರ ಜ.೭ರಂದು ನಿರ್ಮಿತಿ ಕೆಂದ್ರಕ್ಕೆ ೨೪ ಮನೆಗಳನ್ನು ನಿರ್ಮಿಸಲು ಆದೇಶ ನೀಡಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಆತಂಕದಲ್ಲಿದ್ದ ಅರ್ಜಿದಾರರಿಗೆ ಮಾದರಿ ಮನೆಗಳನ್ನು ತೋರಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದ್ದರಿಂದ ಮನೆಗಳನ್ನು ಪಡೆಯಲು ಮುಂದಾದರು ಎಂದರು.


ಇನ್ನುಳಿದ ಸುಮಾರು ೧೫೦೦ ಮನೆಗಳನ್ನು ಜೂ.೨೦೨೩ರ ಒಳಗಾಗಿ ಪೂರ್ಣಗೊಳಿಸಿ ಹಂಚಿಕೆ ಮಾಡಲಾಗುವುದು. ಎಲ್ಲಾ ಮನೆಗಳಿಗೆ ನಿಯಮಾನುಸಾರವಾಗಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಯುಜಿಡಿ, ಕುಡಿಯುವ ನೀರು, ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹಾಗಾಗಿ ಮಾಜಿ ಶಾಸಕರ ಆರೋಪದಲ್ಲಿ ಯಾವ ಹುರುಳಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಶ್ರಯ ಸಮಿತಿ ಸದಸ್ಯರಾದ ರೇಣುಕಾ ನಾಗರಾಜ್, ಆನಂದಪ್ಪ, ಬಿಜೆಪಿ ಮುಖಂಡ ಮಣಿ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!