ಹೊಸನಗರ: ಪಟ್ಟಣದಲ್ಲಿ ಪ್ರತಿ ವರ್ಷದಂತೆ ಆಚರಿಸಲಾಗುತ್ತಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯನ್ನು ಈ ವರ್ಷ ವಿಶೇಷ ರೀತಿಯಲ್ಲಿ ಜನರನ್ನು ಆಕರ್ಷಿಸುವ ರೀತಿಯಲ್ಲಿ ಜನವರಿ 24 ಮಂಗಳವಾರದಿಂದ ಫೆ.1 ಬುಧವಾರದವರೆಗೆ ಒಟ್ಟು 9ದಿನಗಳ ವರೆಗೆ ಆಚರಿಸಲಾಗುವುದು ಎಂದು ಮಾರಿಕಾಂಬಾ ಜಾತ್ರ ಕಮಿಟಿಯ ಅಧ್ಯಕ್ಷರಾದ ಹೆಚ್ ಲಕ್ಷ್ಮಿನಾರಾಯಣರವರು ತಿಳಿಸಿದರು.

ಹೊಸನಗರದ ಮಾರಿಕಾಂಬಾ ದೇವಸ್ತಾನದ ಆವರಣದಲ್ಲಿ ಸುದ್ಧಿಗೋಷ್ಟಿ ನಡೆಸಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಫೆ.24 ಮಂಗಳವಾರ ದ್ಯಾವರ್ಸದಲ್ಲಿರುವ ದುರ್ಬಾಂಬಾ ದೇವಸ್ಥಾನದ ಆವರಣದಲ್ಲಿ ಶ್ರೀ ಮಾರಿಕಾಂಬಾ ದೇವಿಯನ್ನು ಪ್ರತಿಷ್ಟಾಪಿಸಿ ಬೆಳಿಗ್ಗೆಯಿಂದ ಪೂಜೆ ಸಲ್ಲಿಸಲಾಗುವುದು ನಂತರ ದುರ್ಗಾಂಬ ದೇವಸ್ಥಾನದಲ್ಲಿ ಸಂಜೆಯವರೆಗೆ ಪೂಜೆ ಸಲ್ಲಿಸುವುದರ ಜೊತೆಗೆ ನವಚಂಡಿಯಾಗ ಸಮಿತಿಯ ಬಳಗದವರಿಂದ ಸಂತೋಷ್ ಕಾಮತ್, ಗುರುರಾಜ್, ಸದಾಶಿವ ಶ್ರೇಷ್ಠಿ, ಸುನೀಲ್ ಶ್ರೇಷ್ಠಿ, ರಾಘವೇಂದ್ರ ಶೇಟ್ಸ್ ರವರ ನೇತೃತ್ವದಲ್ಲಿ ಮಧ್ಯಾಹ್ನ 1 ಗಂಟೆಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮದ ವ್ಯವಸ್ಥೆಯನ್ನು ಮಾಡಲಾಗಿದೆ.

ಜ.25 ಗುರುವಾರದಿಂದ ಮಾರಿಗುಡ್ಡದಲ್ಲಿರುವ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ 8 ದಿನಗಳ ಕಾಲ ಅದ್ದೂರಿ ಜಾತ್ರೆ ನಡೆಯಲಿದ್ದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 9 ಗಂಟೆಯವರೆಗೆ ಪ್ರತಿ ದಿನ ದೇವಿಗೆ ವಿವಿಧ ರೀತಿಯ ಪೂಜಾ ಕಾರ್ಯಕ್ರಮಗಳ ಜೊತೆಗೆ ವಿಶೇಷ ರೀತಿಯಲ್ಲಿ ಮನರಂಜನೆ ಕಾರ್ಯಕ್ರಮ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ನಾಟಕಗಳನ್ನು ಏರ್ಪಡಿಸಲಾಗಿದೆ ಎಂದರು.

ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಗಳಾಗಿ ವಿಜಯ್ ವಿಲ್ಸನ್ ಅಮ್ಯೂಸ್‌ಮೆಂಟ್‌ನವರಿಂದ ರೋಮಾಂಚನಕಾರಿ ಮೈ ಜುಂ ಎನ್ನುವ ಜಾಯಿಂಟ್ ವ್ಹೀಲ್, ಕೋಲಂಬಸ್, ಬ್ರೇಕ್ ಡ್ಯಾನ್, ಮಾರುತಿ ಡೂಮ್, ಮಕ್ಕಳ ರೈಲು ಮ್ಯಾಜಿಕ್ ಷೋ ಡಾಗ್ ಷೋ ಹಾಗೂ ಹತ್ತು ಹಲವಾರು ರೀತಿಯ ವಿಶೇಷ ಮನೋರಂಜನೆಗಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.

ಪ್ರತಿದಿನ ರಾತ್ರಿ 8;30ಕ್ಕೆ ವಿಶೇಷ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಜನವರಿ 26 ಗುರುವಾರ ಗುರೂಜಿ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಮಲ್ಲಗಂಬ ಮತ್ತು ಹಗ್ಗದ ಮೂಲಕ ವೈವಿದ್ಯಮಯ ವ್ಯಾಯಾಮಗಳ ಪ್ರದರ್ಶನ, ಹೋಲಿ ರಿಡೀಮರ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಪಿರಮಿಡ್ ಪ್ರದರ್ಶನ ಹಾಗೂ ಮನರಂಜನೆ, ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳಿಂದ ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜ್, ಕುವೆಂಪು ಶಾಲೆ ಕೊಡಚಾದ್ರಿ ಕಾಲೇಜ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನವರಿ 27 ಶುಕ್ರವಾರ ಚಂದ್ರಹಾಸ ಚರಿತ್ರೆ ಯಕ್ಷಗಾನ, ಜನವರಿ 28 ಶನಿವಾರ ಹಾಸ್ಯಮಯ ನಗೆ ನಾಟಕ ಕಣ್ಣಾಮುಚ್ಚಾಲೆ 29 ಭಾನುವಾರ ರಾತ್ರಿ 9ಗಂಟೆಯಿಂದ ಫ್ರೆಂಡ್ಸ್ ಮೆಲೋಡಿಸ್ ಉಡುಪಿ-ಮಂಗಳೂರುರವರಿಂದ ಮ್ಯೂಸಿಕಲ್ ನೈಟ್ ಸೋಮವಾರ ಜೆ.ಸಿ.ಎಂ ರಸ್ತೆ ಫ್ರೆಂಡ್ಸ್ ರವರಿಂದ ಆದರ್ಶ ದಂಪತಿಗಳು ಜ. 31 ಮಂಗಳವಾರ ರಾತ್ರಿ ಮಲೆನಾಡು ಕೋಗಿಲೆ ಖ್ಯಾತಿಯ ಆಧ್ಯರಾವ್ ಗಿರೀಶ್‌ಸಾಗರ್ ರಾಜಶೇಖರ್ ಶಿವಮೊಗ್ಗ ಇವರಿಂದ ಮ್ಯೂಸಿಕಲ್ ಸ್ಟಾರ್ ನೈಟ್ ಇವರಿಂದ ಮನರಂಜಿಸುವ ಹಾಡುಗಳ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಶ್ರೀ ದೇವಿಯ ಭಕ್ತಾರು ಹಾಗೂ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಯಶಸ್ವಿಗೊಳಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.

ಈ ಪತ್ರಿಕಾಗೋಷ್ಠಿಯಲ್ಲಿ ಮಾರಿಕಾಂಬಾ ದೇವಸ್ಥಾನದ ಕನ್ವಿನರ್ ಹೆಚ್.ಎನ್ ನಾಗರಾಜ್, ಜಾತ್ರಾ ಕಮಿಟಿಯ ಕಾರ್ಯದರ್ಶಿ ಟಿ. ಸುನೀಲ್ ಕುಮಾರ್, ಖಜಾಂಚಿ ಪಿ ಮನೋಹರ್, ಹೆಚ್.ಎಲ್ ದತ್ತಾತ್ರೇಯ, ಹೆಚ್.ಎಲ್. ಅನಿಲ್‌ಕುಮಾರ್, ಎ.ವಿ. ಮಲ್ಲಿಕಾರ್ಜುನ, ಎಂ.ಪಿ.ಎಂ ನಾರಾಯಣ, ಕೋಡೂರು ಪ್ರಕಾಶ್, ಹೆಚ್.ಎಂ ನಿತ್ಯಾನಂದ, ಕುಮಾರ ಗೌಡ, ಗಿರೀಶ್ ಹೆಚ್.ಎಸ್, ಕೆ.ಜಿ.ನಾಗೇಶ್, ಹಾಡಿ ಗೋಪಾಲ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!