ರಾಜಕೀಯ/ ಸ್ವಾಮಿ ಸ್ಪೇಷಲ್-೧
ಬರುವ ಫೆಬ್ರವರಿ ೧೨ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸಲಿರುವ ಸುದ್ದಿ ಹಬ್ಬಿದ ಬೆನ್ನಲ್ಲೇ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಅವತ್ತೇ ಡಿಸೈಡ್ ಆಗುತ್ತಾ? ಎಂಬ ಪ್ರಶ್ನೆಗಳಿಗೆ ಉತ್ತರ ದೊರಕುವ ಸಾಧ್ಯತೆಗಳನ್ನು ಇದೇ ಬಿಜಪಿ ಅಂತರಂಗದಲ್ಲಿನ ಮೂಲಗಳು ತಿಳಿಸಿವೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕರಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಅವರಿದ್ದು ಭಾರತೀಯ ಜನತಾ ಪಕ್ಷದ ನಿಯಮ ದಂತೆ ವಯೋಮಿತಿ ಆಧಾರದ ಹಿನ್ನೆಲೆ ಯಲ್ಲಿ ಅಂತಿಮ ಅವಕಾಶವಾಗಿ ಈಶ್ವರಪ್ಪನ ವರಿಗೆ ಈ ಬಾರಿಯೂ ಟಿಕೆಟ್ ದೊg ಯುವ ಸಾಧ್ಯತೆಗಳು ನಿಚ್ಚಳವಾಗಿವೆ ಎನ್ನಲಾಗುತ್ತಿದೆ.

ಹಾಗೆಯೇ ಇದು ಸಾಧ್ಯವಿಲ್ಲ ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗೆ ರಾಜೀನಾಮೆ ನೀಡಿ, ಭಾರತೀಯ ಜನತಾ ಪಕ್ಷಕ್ಕೆ ಸೇರಿಕೊಂಡ ಸರ್ಜಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇ ಶಕ ಹಾಗೂ ಶಿವಮೊಗ್ಗದಲ್ಲೆಡೆ ಕಳೆದ ಏಳೆಂಟು ತಿಂಗಳಿನಿಂದ ರಾಜಕೀಯ ಅಕಾ ಡಕ್ಕೆ ಧುಮುಕುವ ನಿಟ್ಟಿನಲ್ಲಿ ಸಕ್ರಿಯರಾಗಿದ್ದ ಡಾ. ಧನಂಜಯ ಸರ್ಜಿ ಅವರಿಗೆ ಟಿಕೆಟ್ ಘೋಷಣೆಯನ್ನು ಪ್ರಧಾನಿಗಳೇ ಮಾಡಿ ಹೋಗುತ್ತಿದ್ದಾರೆ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಅವರಿಗೆ ಉನ್ನತ ಮಟ್ಟದ ಪಕ್ಷದ ಜವಾ ಬ್ದಾರಿಯನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಶಿವಮೊಗ್ಗ ಭಾರತೀಯ ಜನತಾ ಪಕ್ಷಕ್ಕೆ ನಗರದ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಬಹುದೊಡ್ಡ ಪಟ್ಟಿಯೇ ಸಿದ್ಧವಾಗಿದೆ. ಸರ್ಕಾರದ ನಾಲ್ಕು ಅಂಗಗಳಲ್ಲಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವ ಹಾಲಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್, ವಿಧಾನ ಪರಿಷತ್ ಶಾಸಕ ಹಾಗೂ ಉದ್ಯಮಿ ಎಸ್ ರುದ್ರೇಗೌಡ, ಈಶ್ವರಪ್ಪ ಅವರ ಪುತ್ರ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಬ್ರಾಹ್ಮಣ ವಲಯದಿಂದ ಬಿಜೆಪಿ ಪ್ರಮುಖ ಮಾಜಿ ಸೂಡಾ ಅಧ್ಯಕ್ಷ ಎಸ್.ದತ್ತಾತ್ರಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಸದಸ್ಯ ಚನ್ನಬಸಪ್ಪ ಸೇರಿದಂತೆ ಹಲವರು ಪಕ್ಷದ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ

.
ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಆಗಮಿಸಲಿರುವ ಸಂದರ್ಭ ದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾ ಟನೆ ಸೇರಿದಂತೆ ಹಲವಾರು ಕಾರ್ಯಕ್ರಮ ಗಳಲ್ಲಿ ಭಾಗವಹಿಸಲಿದ್ದಾರೆ. ಅಂತೆಯೇ ಚುನಾವಣೆ ಸನಿಹದ ಈ ಸಮಯದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯ ಕ್ರಮಗಳಲ್ಲಿ ಮತ್ತು ಸಭೆಗಳಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿ ಸಲಿದ್ದು, ವಿಶೇ ಷವಾಗಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಅವರಿಂದಲೇ ಘೋಷಣೆ ಆಗಲಿದೆ ಎಂದು ಇದೇ ಮೂಲಗಳು ತಿಳಿಸಿವೆ. ಏಕೆಂದರೆ ಪಕ್ಷದಲ್ಲಿ ಭಿನ್ನಾಭಿಪ್ರಾ ಯಗಳು ಬಾರದಿರುವಂತೆ ನೋಡಿಕೊಳ್ಳಲು ಪ್ರಧಾನಿಗಳಿಗೆ ಈ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂ ರಪ್ಪ ಒಪ್ಪಿಸಿದ್ದಾರೆಂದು ಇದೇ ಮೂಲಗಳು ತಿಳಿಸಿವೆ.

ಫೆಬ್ರವರಿ ೧೨ರಂದು ಯಾರಿಗೆ ಶಿವ ಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಆಗಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಈ ನಡುವೆ ಇದೇ ಮೂಲಗಳ ಮತ್ತೊಂದು ಹೇಳಿಕೆ ಪ್ರಕಾರ ಅಂದು ಪ್ರಧಾನಿಗಳು ಶಿವಮೊಗ್ಗ ಕ್ಷೇತ್ರದ ವಿಷಯವಾಗಿ ಚರ್ಚಿಸಿ ಸೂಕ್ತ ಅಭ್ಯರ್ಥಿಗಳೊಂದಿಗೆ ಮುಖತಾ ಸಮಾಲೋಚನೆ ನಡೆಸಿ, ನಂತರ ಎಲ್ಲರನ್ನೂ ಸಮಾಧಾನಪಡಿಸಿ ಹೋಗಲಿ ದ್ದಾರೆ. ಯಾವುದೇ ಘೋಷಣೆ ಮಾಡುವು ದಿಲ್ಲ ಎಂದು ಇದೇ ಮೂಲಗಳು ಹೇಳಿವೆ.