ಬೆಜ್ಜವಳ್ಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಮತ್ತು ಶ್ರೀಗಳ ಪೀಠಾರೋಹಣ ವರ್ಧಂತಿ, ಭಜನೆ, ಭಕ್ತಿ ಭಾವಧಾರೆ, ಸಭಾ ಕಾರ್ಯಕ್ರಮ, ಹರಿಹರಪೀಠ ಪ್ರಶಸ್ತಿ ಪ್ರದಾನ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಜ. ೧೪ರಂದು ಹಮ್ಮಿಕೊಳ್ಳಲಾಗಿದೆ.
ಇಂದು ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಬೆಜ್ಜವಳ್ಳಿ ಆಯುರಾಶ್ರಮದ ಪೀಠಾಧಿಪತಿ ವಿದ್ಯಾವಾಚಸ್ಪತಿ ಡಾ ||ವಿಶ್ವಸಂತೋಷ ಭಾರತಿ ಸ್ವಾಮೀಜಿ, ಅಂದು ಬೆಳಗ್ಗೆ ೬ ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗುತ್ತದೆ.

೮:೩೦ಕ್ಕೆ ಕದಳಿ ಮಂಟಪದಲ್ಲಿ ರಾಜಪಲ್ಲಕ್ಕಿಯ ಮಹಾಪೂಜೆ, ಹರಕೆ ತುಲಾಭಾರ, ಕ್ಷೇತ್ರ ಗಣಗಳ ದೈವದರ್ಶನ, ಪಟ್ಟದ ಆಯುಧಗಳ ಮಹಾಪೂಜೆ ನಡೆಯುವುದು. ೧:೧೫ಕ್ಕೆ ಅಯ್ಯಪ್ಪಸ್ವಾಮಿಗೆ ಮಹಾಮಂಗಳಾರತಿ, ನಂತರ ಸ್ವಾಮಿಯ ಪಾದುಕಾಪುಜೆ, ಆಭರಣೋತ್ಸವ, ಮಧ್ಯಾಹ್ನ ೧ ಗಂಟೆಗೆ ಅಯ್ಯಪ್ಪಸ್ವಾಮಿಯ ಉಯ್ಯಾಲೆ ಸೇವೆ, ೧:೪೫ಕ್ಕೆ ಮಹಾಮಂಗಳಾರತಿ ನಡೆಯಲಿದೆ ಎಂದು ವಿವರಿಸಿದರು

.
೨ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಸಾನಿಧ್ಯ ವನ್ನು ಡಾ|| ವಿಶ್ವಸಂತೊಷ ಸ್ವಾಮೀಜಿ ವಹಿಸುವರು. ಚಿತ್ರದುರ್ಗದ ಮಾದಾರ ಚೆನ್ನಯ್ಯಪೀಠದ ಬಸವ ಮೂರ್ತಿ ಚೆನ್ನಯ್ಯ ಸ್ವಾಮೀಜಿ, ಹೊಸದುರ್ಗದ ಕುಂಚಿಟಿಗಮಠದ ಶಾಂತವೀರ ಮಹಾಸ್ವಾಮಿಜಿ ಆಗಮಿಸುವರು. ಉದ್ಘಾಟನೆಯನ್ನು ಕೇಂದ್ರ ಸಚಿವ ಶ್ರೀಪಾದ ನಾಯಕ್ ನೆರವೇರಿಸುವರು. ಅಧ್ಯಕ್ಷತೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಹಿಸಿಕೊಳ್ಳುವರು ಎಂದರು.

ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಡಾ|| ಅಶ್ವತ್ಥನಾರಾಯಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಶಾಸಕರಾದ ಹರತಾಳು ಹಾಲಪ್ಪ, ಭಾರತಿ ಶೆಟ್ಟಿ, ಡಿ ಎಸ್ ಅರುಣ್, ಶಿವಮೊಗ್ಗದ ಡಾ|| ಧನಂಜಯ ಸರ್ಜಿ, ಬೆಜ್ಜವಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಆಗಮಿಸುವರೆಂದರು.
ಈ ಸಂದರ್ಭದಲ್ಲಿ ಹರಿಹರಪೀಠ ಪ್ರಶಸ್ತಿಯನ್ನು ಮೈಸೂರಿನ ಇತಿಹಾಸಕಾರ ಪ್ರೊ. ನಂಜರಾಜ ಅರಸ್, ಶಿವಮೊಗ್ಗ ಟೈಮ್ಸ್ ಸಂಪಾದಕ ಚಂದ್ರಕಾಂತ್, ಮಂಗಳೂರಿನ ಬಂಟರ ವಾಹಿನಿ ಪತ್ರಿಕೆಯ ಸಂಪಾದಕ ಪ್ರದೀಪ್ಕುಮಾರ್ ರೈ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಂತಾ ಶೆಟ್ಟಿ, ಎಸ್, ಡಿ ಸತೀಶ್ ಮೊದಲಾದವರಿದ್ದರು.