ಊರ ಒಳಗಡೆ ಮದ್ಯದಂಗಡಿ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಭದ್ರಾವತಿ ತಾಲ್ಲೂಕಿನ ಸಿಂಗನಮನೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮತ್ತು ಅಬಕಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಹಲವಾರು ವರ್ಷಗಳಿಂದ ಸಿಂಗನಮನೆ ಗ್ರಾಮದ ಶಂಕರಘಟ್ಟದಲ್ಲಿರುವ ಸೈಟ್ ನಂ.೫೦/೨೧ ರೆಸಿಡೆನ್ಸಿಯಲ್ ಏರಿಯಾದಲ್ಲಿ ಅಕ್ಕ-ಪಕ್ಕ ವಾಸದ ಮನೆಗಳಿದ್ದು, ಹತ್ತಿರದಲ್ಲೇ ದೇವರಾಜ್ ಅರಸ್ ಬಿಸಿಎಂ ಹಾಸ್ಟೆಲ್ ಇರುತ್ತದೆ. ಹಾಗೂ ರಾಷ್ಟ್ರೀಯ ಹೆದ್ದಾರಿ ಕೂಡ ೧೦ ಅಡಿ

ದೂರದಲ್ಲಿರುತ್ತದೆ. ಆದರೆ ಇತ್ತೀಚೆಗೆ ಊರ ಹೊರಗೆ ಇರುವ ಮಹಾಲಕ್ಷ್ಮೀ ಬಾರ್ ಅಂಡ್ ರೆಸ್ಟೋರೆಂಟ್ನ್ನು ಊರ ಒಳಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವುದು ಸ್ಥಳೀಯ ಗ್ರಾಮಸ್ಥರಿಗೆ ಮಾಹಿತಿ ದೊರೆಕಿದ್ದು, ಇದರಿಂದ ಅಲ್ಲಿನ ನಿವಾಸಿಗಳಿಗೆ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಸಂಭವವಿದ್ದು, ಈ ಜಾಗದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ಗೆ ಅನುಮತಿ ನೀಡಬಾರದು ಮತ್ತು ಸ್ಥಳಾಂತರಕ್ಕೂ ಅವಕಾಶ ಕೊಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅವಕಾಶ ನೀಡಿದ್ದಲ್ಲಿ ನೇರವಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮತ್ತು ಓಡಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಪರಿಸರದಲ್ಲಿ ಮದ್ಯದಂಗಡಿ ಅಥವಾ ಬಾರ್ ಅಂಡ್ ರೆಸ್ಟೋರೆಂಟ್ಗೆ ಅವಕಾಶ ನೀಡಬಾರದೆಂದು ಶಂಕರಘಟ್ಟ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಜುನಾಥ್, ಎಂ.ಲೋಕೇಶ್, ಯೋಗೀಶ್, ಹೆಚ್.ಡಿ.ಶಂಕರ್ನಾರಾಯಣ, ಮಹೇಶ್ವರಪ್ಪ ಸೇರಿದಂತೆ ಶಂಕರಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು