ನಗರದಲ್ಲಿ ಫ್ಲೆಕ್ಸ್ ಹಾವಳಿ ಮಿತಿಮೀರಿದೆ ನಿಯಂತ್ರಣ ಮಾಡಲು ಅಸಾಧ್ಯ ಎಂದು ಪಾಲಿಕೆ ಕೈಚೆಲ್ಲಿ ಕುಳಿತಿರುವ ಹಾಗಿದೆ. ಈ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಫ್ಲೆಕ್ಸ್ ಅಳವಡಿಕೆಗೆ ನಿಯಮಾವಳಿಗಳನ್ನು ರೂಪಿಸಲಾಗಿತ್ತು. ಆದರೆ ಅದು ಯಾವುದು ಚಾಲ್ತಿಯಲ್ಲಿಲ್ಲ. ನಗರದ ಗೋಪಿವೃತ್ತ, ಅಮೀರ್‌ಅಹಮ್ಮದ್ ವೃತ್ತ, ಮಹಾವೀರವೃತ್ತ ಮುಂತಾದ ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್ ಅಳವಡಿಕೆಯನ್ನು
ನಿಷೇಧಿಸಲಾಗಿತ್ತು. ಪಾಲಿಕೆಯಿಂದ ಸ್ಥಾಪಿಸಲ್ಪಟ್ಟ ಫ್ಲೆಕ್ಸ್ ಬೋರ್ಡ್‌ಗಳಿಗೆ ಮಾತ್ರ ಅಳವಡಿಸಬೇಕಿತ್ತು. ಆದರೆ ಇಲ್ಲಿ ಇತ್ತೀಚೆಗೆ ಫ್ಲೆಕ್ಸ್‌ಗಳನ್ನು ಎಲ್ಲಿಬೇಕಾದಲ್ಲಿ ಅಳವಡಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನೆಹರೂ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ಅಳವಡಿಸುವುದರಿಂದ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಾರ್ಯಕ್ರಮ ಮುಗಿದರೂ ಕೂಡ ಫ್ಲೆಕ್ಸ್ ತೆರವುಗೊಳಿಸುವುದಿಲ್ಲ. ವಿಪರ್ಯಾಸವೆಂದರೆ ಮಹಾವೀರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್‌ಗೆ ಫ್ಲೆಕ್ಸ್ ಕಟ್ಟಲಾಗಿದೆ. ಪಾಲಿಕೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬ ಸಂಶಯ ಕಾಡುತ್ತಿದ್ದು, ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ