ಶಿವಮೊಗ್ಗ: ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ ಅಭಿಮಾನಿಗಳಿಂದ ಡಿ.20ರ ಸಂಜೆ 6-30ಕ್ಕೆ ಕೋಟೆ ಮಾರಿಕಾಂಬಾ ದೇವಸ್ಥಾನದ ಪ್ರಸಾದ ಭವನದಲ್ಲಿ ಸಾರ್ವಜನಿಕ ಅಯ್ಯಪ್ಪ ಸ್ವಾಮಿ ಪಡಿಪೂಜೆ, ಕದಳಿ ಪೂಜೆ, ಮತ್ತು ಶಕ್ತಿ ಪೂಜೆ ಆಯೋಜಿಸಲಾಗಿದೆ ಎಂದು ಅಭಿಮಾನಿ ಬಳಗದ ಗುರುಸ್ವಾಮಿ ನಾಗರಾಜ್ ಹೇಳಿದರು.
ಅವರು ಇಂದು ಮಥುರಾ ಪ್ಯಾರಾಡೈಸ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಡೆದಾಡುವ ಅಯ್ಯಪ್ಪರೆಂದರೇ ಹೆಸರಾಗಿದ್ದ ದಿವಂಗತ ರೋಜಾ ಷಣ್ಮುಗಂ ಅವರ ಆಶೀರ್ವಾದದೊಂದಿಗೆ ಲೋಕಕಲ್ಯಾಣಾರ್ಥವಾಗಿ ಈ ಭಕ್ತಿ ಪೂಜೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಅಯ್ಯಪ್ಪ ಸ್ವಾಮಿಯ ಭಕ್ತರು ಭಾಗವಹಿಸಲಿದ್ದಾರೆ ಎಂದರು.
ಎಸ್.ಕೆ. ಮರಿಯಪ್ಪ ಅವರು ಪ್ರತಿ ವರ್ಷವೂ ಅವರ ಮನೆಯಲ್ಲಿ ಈ ಪೂಜೆ ನೆರವೇರಿಸುತ್ತಿದ್ದರು. ಈಗ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ. ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೈ ಸ್ವಾಮಿ ದರ್ಶನಕ್ಕೆ ತೆರಳುವುದು ವಾಡಿಕೆ. ಹಾಗೆಯೇ ವಿಶೇಷವಾಗಿ ಮೊದಲ ಬಾರಿಗೆ ಎಲ್ಲರ ಸಮ್ಮುಖದಲ್ಲಿ ಈ ಪೂಜೆ ಆಯೋಜಿಸಲಾಗಿದೆ. ಮಾಲೆ ಹಾಕಿರುವ ಗುರುಸ್ವಾಮಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು ಸಂಜೆ ಪೂಜೆ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕೂಡ ನಡೆಯಲಿದೆ ಎಂದರು.
ಉಮಾಶಂಕರ್ ಉಪಾಧ್ಯಾಯ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ಈ ವಿಶೇಷ ಪೂಜೆ ನಡೆಯುತ್ತಿದೆ. ಈ ಪೂಜೆಯನ್ನು ಆಯೋಜಿಸಿರುವ ಎಸ್.ಕೆ.ಮರಿಯಪ್ಪನವರಿಗೂ ರಾಜಕೀಯ ಶಕ್ತಿ ಬರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ ಎಂದರು.
ಮಲ್ಲಿಕಾರ್ಜುನ ಮಾತನಾಡಿ, ಎಸ್.ಕೆ. ಮರಿಯಪ್ಪ ಅವರು ಕಾಂಗ್ರೆಸ್ನಿಂದ ಸ್ಪರ್ಧೆ ಬಯಸಿ ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಲಿ ಎಂಬುದು ನಮ್ಮ ಆಶಯವಾಗಿದೆ. ಅಯ್ಯಪ್ಪ ಸ್ವಾಮಿಯ ಕೃಪೆ ಅವರ ಮೇಲಿರಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎ.ಹೆಚ್. ಸುನಿಲ್, ತಾರಾನಾಥ್, ರಘುವೀರ್ ಸಿಂಗ್, ಭರತೇಶ್, ಕಮಲಾಕರ, ರಘು ಮುಂತಾದವರಿದ್ದರು.