: ಪದವೀಧರರ ಸಹಕಾರ ಸಂಘದ 2023 ನೇ ಸಾಲಿನ ಕ್ಯಾಲೆಂಡರ್ ಅನ್ನು ಸಂಘದ ಕಚೇರಿಯಲ್ಲಿ ಇಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಬಿಡುಗಡೆ ಮಾಡಿದರು.

ಕ್ಯಾಲೆಂಡರ್ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರ ಸಹಕಾರ ಸಂಘವು ಅತ್ಯಂತ ಚಿಕ್ಕದಾಗಿ ಪ್ರಾರಂಭವಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ಸುಮಾರು 6,900 ಸದಸ್ಯರಿದ್ದಾರೆ. ಎಲ್ಲಾ ಸದಸ್ಯರಿಗೂ ಕ್ಯಾಲೆಂಡರುಗಳನ್ನುನೀಡುತ್ತೇವೆ. ಸದಸ್ಯರು ಕಚೇರಿಗೆ ಬಂದು ಹೊಸ ವರ್ಷದ ಕ್ಯಾಲೆಂಡರ್ ಪಡೆಯಬಹುದು ಎಂದರು.

ಪದವೀಧರರ ಸಹಕಾರ ಸಂಘವು ತನ್ನ 50ನೇ ವರ್ಷದ ಕಾರ್ಯಕ್ರಮವನ್ನು ಇತ್ತೀಚೆಗೆ ಯಶಸ್ವಿಯಾಗಿ ಪೂರೈಸಿತು. ಸಹಕಾರಿ ಆಸ್ಪತ್ರೆಯನ್ನು ಕೂಡ ನಾವು ಆರಂಭಿಸಿದ್ದೇವೆ. ಸದಸ್ಯರ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಸಂಘದ ಶಾಖಾ ಕಟ್ಟಡವನ್ನು ಕೃಷಿನಗರದಲ್ಲಿ ಪ್ರಾರಂಭಿಸಬೇಕೆಂಬ ಉದ್ದೇಶವಿದೆ. ಈಗಾಗಲೇ ಅಲ್ಲಿ ಜಾಗ ತೆಗೆದುಕೊಳ್ಳಲಾಗಿದೆ. ಸುಮಾರು 2.69 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗುವುದು. ಈ ಹೊಸ ಕಟ್ಟಡದಲ್ಲಿ ವಿಶೇಷವಾಗಿ ಲಾಕರ್ ಪ್ಲಾಜಾ ನಿರ್ಮಿಸುತ್ತೇವೆ. ಗೋದ್ರೇಜ್ ಕಂಪೆನಿಯವರಿಂದ 1500 ಲಾಕರ್ ವ್ಯವಸ್ಥೆ ಮಾಡಲಾಗುವುದು. ಸದಸ್ಯರು ಈ ವ್ಯವಸ್ಥೆಯ ಪ್ರಯೋಜನ ಪಡೆಯಬಹುದು ಎಂದರು.

ಶಾಖಾ ಕಟ್ಟಡ ಆರಂಭವಾದ ಮೇಲೆ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಈಗಾಗಲೇ ಸದಸ್ಯತ್ವಕ್ಕೆ ತುಂಬಾ ಬೇಡಿಕೆ ಇದೆ. ಈಗಿರುವ ಜಾಗವನ್ನು ಕುಕ್ಕೆ ಗೋಪಾಲ ಶಾಸ್ತ್ರಿಗಳು ಎಂಬುವವರು ನೀಡಿದ್ದರು. ಅವರು ಆ ಜಾಗವನ್ನು 1990ರಲ್ಲಿಯೇ ಕೇವಲ 4.25 ಲಕ್ಷಕ್ಕೆ ಕೊಟ್ಟಿದ್ದರು. ಆ ಹಣವನ್ನು ಕೂಡ ಅವರು ವಾಪಾಸು ಪಡೆಯದೇ ನಮ್ಮ ಸಂಘದಲ್ಲಿಯೇ ಠೇವಣಿ ಇಟ್ಟರು. ಅವರು ಈಗ ಅಮೆರಿಕದಲ್ಲಿದ್ದಾರೆ. ಇಲ್ಲಿಗೆ ಬಂದಾಗ ಆ ಠೇವಣಿ ಹಣದ ಬಡ್ಡಿಯನ್ನು ಇತರೆ ಸಂಘಸAಸ್ಥೆಗಳಿಗೆ ನೀಡುತ್ತಾರೆ ಎಂದರು.

ಎಲ್ಲಾ ಹಿರಿಯರ ಮತ್ತು ಈಗಿನ ಗಣ್ಯರಿಂದ ದಾನಿಗಳಿಂದ ಸದಸ್ಯರಿಂದ ಈ ಸಂಸ್ಥೆ ಎತ್ತರಕ್ಕೆ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಸದಸ್ಯರ ಕಲ್ಯಾಣಕ್ಕಾಗಿ, ಅವರ ಆರ್ಥಿಕಾಭಿವೃದ್ಧಿ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಸುಲಭ ದರದ ಬಡ್ಡಿಯಲ್ಲಿ ಸಾಲ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಮಮತಾ, ನಿರ್ದೇಶಕರಾದ ಎಸ್.ವಿ. ಸುರೇಶ್. ಭುವನೇಶ್ವರಿ, ರಮ್ಯ, ಟಿ.ವಿ. ಗೋಪಾಲಕೃಷ್ಣ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!