ಇಡೀ ಹಿಂದು ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಓಂ ಶಕ್ತಿ ದೇವಸ್ಥಾನಕ್ಕೆ ಶಿವಮೊಗ್ಗದ ತಾಯಂದಿರು ಹೋಗುತ್ತಿರುವುದು ಇದು ದೇವರ ಕೆಲಸ, ಧರ್ಮದ ಕೆಲಸ ಮತ್ತು ಭಕ್ತಿಯಾಗಿದ್ದು, ದೇವಿಯ ಕೃಪೆ ಸದಾ ಲಭಿಸುತ್ತದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಅವರು ನಗರದ ಅಗಮುಡಿ ಸಮುದಾಯ ಭವನದಲ್ಲಿ ಓಂ ಶಕ್ತಿ ದೇವಸ್ಥಾನ ಟ್ರಸ್ಟ್ ವತಿಯಿಂದ ೧೪ನೇ ವರ್ಷದ ಓಂ ಶಕ್ತಿಯಾತ್ರೆಯ ಪೂರ್ವಭಾವಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.


ಮೊದಲ ವರ್ಷ ೧೭ ಬಸ್ಸಿನಲ್ಲಿ ಶಿವಮೊಗ್ಗದಿಂದ ತೆರಳಿದ್ದರು. ಈ ಬಾರಿ ೧೨೧ ಬಸ್ಸಿನಲ್ಲಿ ೭ ದಿನಗಳ ಕಾಲ ೬೫೦೦ಕ್ಕೂ ಹೆಚ್ಚು ತಾಯಂದಿರು ತೆರಳುತ್ತಿರುವುದು ಮತ್ತು ಅವರನ್ನು ಯಾತ್ರೆಗೆ ಕಳುಹಿಸುವ ಸೌಭಾಗ್ಯ ನಮ್ಮ ಕುಟುಂಬಕ್ಕೆ ದೊರಕಿರುವುದು ಪೂರ್ವಜನ್ಮದ ಪುಣ್ಯ ಎಂದರು. ತಮ್ಮ ಕುಟುಂಬವನ್ನು ಬಿಟ್ಟು ಕುಟುಂಬದ, ಸಮಾಜದ ಹಾಗೂ ನಮ್ಮ ಊರಿನ ಒಳಿತಿಗಾಗಿ ತಾಯಂದಿರು ಶ್ರದ್ಧಾ ಭಕ್ತಿಯಿಂದ ವೃತ ನಿಯಮ ಆಚರಿಸಿ ಓಂ ಶಕ್ತಿ ಮಾತೆಯ ಯಾತ್ರೆಗೆ ತೆರಳುತ್ತಿರುವುದು ಸಂತೋಷ ತಂದಿದೆ ಎಂದರು.


ಹತ್ತಾರು ಸಾವಿರ ಜನ ಸ್ವಂತ ಅಕ್ಕ ತಂಗಿಯರನ್ನು ನಾನು ಈ ಮೂಲಕ ಪಡೆದಿದ್ದೇನೆ. ಎಂಬ ಭಾವ ನನಗೆ ಬಂದಿದೆ. ಇದಕ್ಕೆ ತಾಯಂದಿರ ಪ್ರೇರಣೆಯೇ ಕಾರಣ. ಎಲಿ ತನಕ ಭಗವಂತ ನನಗೆ ಶಕ್ತಿ ಕೊಡುತ್ತಾನೊ ಅಲ್ಲಿವರೆಗೆ ಎಷ್ಟೇ ಜನ ಇರಲಿ ತಾಯಿಯ ದರ್ಶನಕ್ಕೆ ಕರೆದುಕೊಂಡು ಹೋಗುತ್ತೇನೆ. ಭಾರತದಲ್ಲಿ ಮಾತ್ರ ಹೆಣ್ಣಿಗೆ ತಾಯಿ ಎಂದು ಪೂಜ್ಯ ಭಾವನೆಯಿಂದ ಕರೆಯುತ್ತೇವೆ. ಎಲ್ಲಾ ತಾಯಂದಿರ ಅಭಿಲಾಷೆ ಈಡೇರಲಿ ಎಂದರು.


ಜ.೫ರಿಂದ ಬೆಳಿಗ್ಗೆ ಶಿವಮೊಗ್ಗದಿಂದ ಹೊರಟು ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ೩೦ಕ್ಕೂ ಹೆಚ್ಚು ದೇವಸ್ಥಾನಗಳ ಸಂದರ್ಶನ ಮತ್ತು ಈ ಬಾರಿ ರಾಮೇಶ್ವರ ಕೂಡ ಸೇರಿದೆ. ಒಟ್ಟು ೬ ರಾತ್ರಿ, ೭ ಹಗಲು ಈ ಯಾತ್ರೆ ನಡೆಯಲಿದೆ ಎಲ್ಲರೂ ಶಿಸ್ತನ್ನು ಕಾಪಾಡಿ ಎಂದರು.
ಓಂ ಶಕ್ತಿ ಟ್ರಸ್ಟ್‌ನ ರಾಜ್ಯಾಧ್ಯಕ್ಷ ರಾಜುಗೋಪಾಲ್ ಮಾತನಾಡಿ

, ಏಷ್ಟೇ ಹಣವಿದ್ದರೂ ಕೆಲವರಿಗೆ ಕೊಡುವ ಮನಸ್ಸು ಇರಲ್ಲ ಈ ಯಾತ್ರೆ ಪಿಕ್‌ನಿಕ್ ಅಂತ ತಿಳಿಯಬೇಡಿ. ೧೪ ವರ್ಷದಿಂದ ನಿರಂತರವಾಗಿ ಯಾವುದೇ ಲೋಪವಿಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಓಂ ಶಕ್ತಿ ದೇವಿಯ ಯಾತ್ರೆಗೆ ಹೋಗುವುದು ಮತ್ತು ಅದನ್ನು ಆಯೋಜಿಸಿರುವುದು ಒಂದು ಪವಾಡವೇ ಆಗಿದೆ. ಪವಿತ್ರತೆಯನ್ನು ಕಾಪಾಡಿ ಶುದ್ಧ ಮನಸ್ಸಿನಿಂದ ಭಯ,ಭಕ್ತಿಯಿಂದ ಪದ್ಧತಿಯಂತೆ ಯಾತ್ರೆ ಮುಗಿಸಿ ಬಂದಲ್ಲಿ ಎಲ್ಲರಿಗೂ ದೇವಿಯ ಕೃಪೆ ಸಿಗುತ್ತದೆ. ಈಶ್ವರಪ್ಪ ಮತ್ತು ಕಾಂತೇಶ್ ಅವರ ಸಹಾಯದಿಂದ

ಈ ಸೌಭಾಗ್ಯ ಎಲ್ಲರಿಗೂ ದೊರೆತಿದೆ ಎಂದರು.
ಕೆ.ಈ.ಕಾಂತೇಶ್ ಮಾತನಾಡಿ, ಯಾತ್ರೆಯ ಹಿಂದಿನ ದಿನ ಪೂರ್ವಭಾವಿಯಾಗಿ ಜ.೪ರಂದು ಸಂಜೆ ನಗರದ ಫ್ರಿಡಂ ಪಾರ್ಕ್‌ನಲ್ಲಿ ಓಂ ಶಕ್ತಿ ದೇವಿಯ ವಿಶೇಷ ಪೂಜೆ ಮತ್ತು ಸಮಾವೇಶ ನಡೆಯಲಿದ್ದು, ಅಲ್ಲಿಗೆ ತೆರಳುವ ಎಲ್ಲಾ ಮಾತೆಯರು ಮತ್ತು ಕುಟುಂಬಸ್ಥರು ಒಂದೆಡೆ ಸೇರುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲರೂ ಭಾಗವಹಿಸುವಂತೆ ಅವರು ವಿನಂತಿಸಿದರು.


ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್ ಮಾತನಾಡಿ, ನಾನು ಈ ಉನ್ನತ ಸ್ಥಾನಕ್ಕೇರಲು ಓಂ ಶಕ್ತಿ ಮಾತೆಯೇ ಕಾರಣ. ಕಳೆದ ಹಲವು ವರ್ಷಗಳಿಂದ ಓಂ ಶಕ್ತಿಯಾತ್ರೆಯಲ್ಲಿ ಭಾಗವಹಿಸಿದ್ದೆ ಎಂದರು.


ಮೇಯರ್ ಶಿವಕುಮಾರ್ ಹಾಗೂ ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್ ಹಾಗೂ ಇತ್ತೀಚೆಗೆ ದೆಹಲಿ ಇಂಡಿಯನ್ ಓಲಂಪಿಕ್ ಭವನದಲ್ಲಿ ಟಿಕ್ವಾಂಡೋ ಫೆಡರೇಷನ್ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಗೆದ್ದ ದೊರೆಚಿನ್ನಪ್ಪ ಅವರನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಉದಯ್‌ಕುಮಾರ್, ಉಪಾಧ್ಯಕ್ಷರಾದ ಸುನೀಲ್‌ಶೆಟ್ಟಿ, ಜಿಲ್ಲಾಧ್ಯಕ್ಷ ಮಾದಣ್ಣ, ಜಿಲ್ಲಾ ಕಾರ್ಯದರ್ಶಿ ಎಂ.ಭೂಪಾಲ್, ಶಿವಮೊಗ್ಗ ಓಂಶಕ್ತಿ ದೇವಸ್ಥಾನದ ಟ್ರಸ್ಟಿಗಳು ರಾಜೇಂದ್ರ, ಸುಬ್ರಮಣಿ, ಮಂಜುನಾಥ್ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!