ಭದ್ರಾವತಿ, ಸೆ.14:
ಅಪಾರ ಪ್ರಮಾಣದ ಭೂಮಿಗೆ ನೀರುಣಿಸಿ ಅನ್ನದಾತನ ಉಸಿರಾಗಿರುವ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ಭದ್ರಾ ಅಣೆಕಟ್ಟು ತುಂಬಿ ತನ್ನ ಭಾಹುಗಳಿಂದ ಜಲಧಾರೆ ಹರಿಸುವ ಸನ್ನಿವೇಶ ನಯನ ಮನೋಹರ.
ತುಂಬಿದ ಭದ್ರಾ ಡ್ಯಾಂನಿಂದ ಇಂದು ನದಿಗೆ 4 ಗೇಟ್ ಗಳ ಮೂಲಕ 1751 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
186 ಅಡಿ ಅಳತೆಯ ಭದ್ರೆಯಿಂದ ನಾಲ್ಕು ಗೇಟುಗಳ ಮೂಲಕ ಹರಿದುಬರುತ್ತಿರುವ ನೀರಿನ ಅಂದ ನೋಡಲು ಮನಕಾನಂದ ಸಿಗುವುದಂತೂ ಖಚಿತ.
ಭದ್ರಾ ಡ್ಯಾಂಗೆ 8453 ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಒಳಹರಿವಿದ್ದು, ಪವರ್ ಪ್ರಾಜೆಕ್ಟ್ ಎಡದಂಡೆ, ಬಲದಂಡೆ ಅಪ್ಪರ್ ಭದ್ರ ಹಾಗೂ ವಾಣಿವಿಲಾಸ್ ಸಾಗರಕ್ಕೆ ಎಲ್ಲಾ ಸೇರಿ ಒಟ್ಟು 3 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಡ್ಯಾಂನಿಂದ ಹರಿಸಲಾಗುತ್ತಿದೆ.
ಸನಿಹದಲ್ಲಿ ಕಂಗೊಳಿಸುತ್ತಿದೆ.
ಶಿವಮೊಗ್ಗ ದಾವಣಗೆರೆ, ಹೊಸಪೇಟೆ, ಹಾವೇರಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳ ಸಾವಿರಾರು ಎಕರೆ ಭತ್ತ, ಕಬ್ಬು, ತೆಂಗು ಹಾಗೂ ಅಡಿಕೆಗೆ ನೀರು ನೀಡುತ್ತಾ ಸಾವಿರಾರು ರೈತ ಕುಟುಂಬಗಳನ್ನು ಸಲಹುತ್ತಿರುವ ಭದ್ರೆಯ ಬಾಹುಗಳು ನಲಿದಾಡುವ ಕ್ಷಣ ಕಾಣುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಹೊಂದಿಕೊಂಡಿರುವ ಹಾಗೂ ಶಿವಮೊಗ್ಗ ಅಂಗಣಕ್ಕೆ ಸೇರಿದ ಭದ್ರೆಯ ಬಿ ಆರ್ ಪಿ ಯಲ್ಲಿನ ಭದ್ರಾ ಜಲಾಶಯ ನೋಡಲು, ನಲಿದಾಡಲು ಸುಂದರ ಕ್ಷಣವನ್ನು ಸೃಷ್ಟಿಸಿದೆ.