ಶಿವಮೊಗ್ಗ
ಶಿವಮೊಗ್ಗದ ದಸರಾ ಜಂಬೂ ಸವಾರಿ, ವಿಜಯದಶಮಿಯ ದಿನ ಬುಧವಾರ ಅದ್ಧೂರಿ ಯಾಗಿ ನೆರವೇರಿತು. ಆಗಾಗ ಸುರಿದ ಮಳೆ ಯನ್ನೂ ಲೆಕ್ಕಿಸದೇ ಭಾರಿ ಸಂಖ್ಯೆಯಲ್ಲಿ ಭಕ್ತ ಸಮುದಾಯ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿತು.


೭೫೦ ಕೆ.ಜಿ ತೂಗುವ ಬೆಳ್ಳಿಯ ಅಂಬಾ ರಿಯ ಮೇಲೆ ವಿರಾಜಮಾನವಾಗಿದ್ದ ಚಾಮು ಂಡೇಶ್ವರಿ ದೇವಿಯನ್ನು ಕಣ್ತುಂಬಿಕೊಂಡರು.
ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಮಳೆರಾಯ ಆಗಾಗ ಸುರಿದರೂ, ಮೆರವಣಿಗೆ ಸಾಗಿದ ಬಹು ಹೊತ್ತು ಬಿಡುವು ನೀಡಿ ಕೃಪೆ ತೋರಿದ. ಅಂಬಾರಿ ಹೊತ್ತಿದ್ದ ’ಸಾಗರ’ ಗಜಗಾಂಭೀ ರ್ಯದಿಂದ ಹೆಜ್ಜೆ ಹಾಕಿದರೆ,

ಅವನಿಗೆ ನೇತ್ರಾವತಿ ಹಾಗೂ ಭಾನುಮತಿ ಆನೆಗಳು ಸಾಥ್ ನೀಡಿದವು. ಜನಸಾಗರದ ನಡುವೆ ಗಜಪಡೆಯನ್ನು ಮಾವುತರು ಪ್ರಶಾಂತವಾಗಿ ಮುನ್ನಡೆಸಿದರು.


ಶಿವಪ್ಪ ನಾಯಕ ಅರಮನೆ ಹಾಗೂ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವ ಸ್ಥಾನ ಬಳಿ ನಂದಿಕೋಲಿಗೆ ತಹಶೀಲ್ದಾರ್ ನಾಗರಾಜ್ ಪೂಜೆ ಸಲ್ಲಿಸಿ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು. ಈ ವೇಳೆ ಮೇಯರ್ ಸುನೀತಾ ಅಣ್ಣಪ್ಪ ಇದ್ದರು. ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಗಜಪಡೆಗೆ ಪುಷ್ಪಾರ್ಚನೆ ನೆರವೇರಿಸಿ ದರು. ಮೆರವಣಿಗೆಯಲ್ಲಿ ನಗರದ ವಿವಿಧ ದೇವರುಗಳ ಪಲ್ಲಕ್ಕಿಗಳನ್ನು ಹೊತ್ತ ಟ್ರ್ಯಾಕ್ಟರ್ ಗಳು ಸಾಗಿ ಬಂದವು. ಮೆರವಣಿಗೆಯಲ್ಲಿ ಸಾಗಿ ಬಂದ ಭಕ್ತರು ಹಾಗೂ ಹಾದಿಯಲ್ಲಿದ್ದ ಸಾರ್ವ ಜನಿಕರು ಫೋಟೊ, ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ವಿಡಿಯೊ ಕರೆ ಮಾಡಿ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಆಪ್ತರಿಗೆ ನೆರವಾದರು.


ಮೆರವಣಿಗೆಯಲ್ಲಿ ಸಾಗಿ ಬಂದ ನಂದಿ ಕುಣಿತ, ವೀರಗಾಸೆ, ಕೀಲು ಕುದುರೆ, ಡೊಳ್ಳು ಕುಣಿತ, ಕರಾವಳಿಯ ಹುಲಿ ವೇಷಧಾರಿಗಳು, ಗೊಂಬೆ ಕುಣಿತ, ತಟ್ಟಿರಾಯ ಕಲಾ ತಂಡಗಳು ವಿಶೇಷ ಕಳೆ ತಂದವು. ಶಿವಾಜಿ ವೇಷಧಾರಿ ಟ್ರ್ಯಾಕ್ಟರ್‌ನಲ್ಲಿ ಸಾಗಿಬಂದರು.


ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಜಂಬೂ ಸವಾರಿ ಮೆರವಣಿಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ ಮಾರ್ಗ ವಾಗಿ ಹಳೆ ಜೈಲ್ ರಸ್ತೆಯ ಮೂಲಕ ಹಾಯ್ದು ಬಂದು ಫ್ರೀಡಂ ಪಾರ್ಕ್ ತಲುಪಿತು. ಅಲ್ಲಿಂದ ಚಾಮುಂ ಡೇಶ್ವರಿ ಮೂರ್ತಿಯನ್ನು ಬೆಳ್ಳಿಯ ಅಂಬಾರಿಯೊಂದಿಗೆ ಹೂವಿನಿಂದ ಅಲಂಕರಿ ಸಿದ್ದ ವಿಶೇಷ ವಾಹನದಲ್ಲಿ ಕೊಂಡೊಯ್ಯಲಾ ಯಿತು. ಇದೇ ವೇಳೆ ಫ್ರೀಡಂ ಪಾರ್ಕ್‌ನಲ್ಲಿ ಅಂತರರಾಷ್ಟ್ರೀಯ ಜಾನಪದ ಕಲಾವಿದರಾದ ಡಾ.ಸುಬ್ಬನಹಳ್ಳಿ ರಾಜು ಮತ್ತು ರಾಜಪ್ಪ ನಡೆಸಿಕೊಟ್ಟ ಜಾನಪದ ಸಂಭ್ರಮದಲ್ಲಿ ನೆರೆದವರು ಹೆಜ್ಜೆಹಾಕಿದರು.


ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅ ರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಉಪಮೇಯರ್ ಶಂಕರ ಗನ್ನಿ, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಸದಸ್ಯರಾದ ಎಚ್.ಸಿ.ಯೋಗೀಶ, ನಾಗರಾಜ್ ಕಂಕಾರಿ, ರೇಖಾ ರಂಗನಾಥ್, ಎಸ್.ಜಿ.ರಾಜು, ಎಸ್. ಜ್ಞಾನೇಶ್ವರ್, ಎಸ್. ಶಿವಕುಮಾರ್, ಧೀರರಾಜ್ ಹೊನ್ನವಿಲೆ, ಯಮುನಾ ರಂಗೇಗೌಡ ಮೆರವಣಿಗೆಯಲ್ಲಿ ಸಾಗಿದರು.
ರಾವಣ ಸಂಹಾರ, ಸಿಡಿ ಮದ್ದು ಸಿಡಿತ..


ತಹಶೀಲ್ದಾರ್ ನಾಗರಾಜ್ ಅಂಬು ಛೇದಿಸಿದರು. ಈ ವೇಳೆ ಮಲೆನಾಡಿನ ಸಾಂಪ್ರದಾಯಿಕ ಉಡುಗೆಯಲ್ಲಿ ನಾಗರಾಜ್ ಗಮನ ಸೆಳೆದರು. ನಂತರ ಅಲ್ಲೇ ಪ್ರತಿಷ್ಠಾಪಿಸಿದ್ದ ೧೦ ತಲೆಯ ರಾವಣನ ಪ್ರತಿಕೃತಿಯನ್ನು ಅಗ್ನಿ ಮೂಲಕ ಸಂಹರಿಸಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!