ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಖಡಕ್ ದಾಳಿ ನಡೆಸುತ್ತಾ ಅಕ್ರಮ ಚಟುವಟಿಗಳನ್ನ ಹತ್ತಿಕ್ಕುತ್ತಿದೆ. ಅಕ್ರಮ ಇಸ್ಪೀಟ್ ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಪೊಲೀಸರು, ಗಾಂಜಾ ಸಾಗಾಣಿಕೆ, ಮಾರಾಟದ ಪ್ರತಿ ಸೂಕ್ಷ್ಮ ಘಟನೆಗಳನ್ನು ಹದ್ದಿನ ಕಂಗಳಂತೆ ವೀಕ್ಷಿಸುತ್ತಾ ಹತ್ತಿಕ್ಕುವ ಕಾರ್ಯ ಮಾಡುತ್ತಿರುವುದು ಸಾರ್ವಜನಿಕರ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗುತ್ತಿದೆ. ಪೊಲೀಸರಿಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ವಿನೋಬನಗರ ಪೊಲೀಸರಿಂದ ಇಸ್ಪೀಟ್ ಅಡ್ಡೆ ಮೇಲೆ ದಾಳಿ: ಏಳು ಜನರೊಂದಿಗೆ ಜೂಜಿನ ಎರಡೂವರೆ ಲಕ್ಷ ರೂ. ವಶ

ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್

ದೊಡ್ಡಪೇಟೆ ಸರ್ಕಲ್ ವ್ಯಾಪ್ತಿಯ ವಿನೋಬನಗರ ಠಾಣಾ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರ ದಾಳಿ ನಡೆದಿದೆ.
ಮೊನ್ನೆ ಪಾರ್ಕ್ ಬಡಾವಣೆಯ ಖಾಸಗಿ ಲಾಡ್ಜ್ ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಮೇಲೆ ಜಯನಗರ ಪೊಲೀಸರು ದಾಳಿ ನಡೆಸಿ ಆಟಕ್ಕೆ ಬಳಸಲಾದ ಲಕ್ಷಾಂತರ ರೂ. ಹಣವನ್ವ ವಶಕ್ಕೆ ಪಡೆದಿದ್ದ ಬೆನ್ನಲ್ಲೆ ನಿನ್ನೆ ವಿನೋಬ ನಗರ ಪೊಲೀಸರು ದಾಳಿ ನಡೆಸಿ 7 ಜನರನ್ನ ಬಂಧಿಸಿದ್ದಾರೆ.
ಆಟಕ್ಕೆ ಬಳಸಿದ್ದ 2 ವರೆ ಲಕ್ಷ ರೂ.ಕ್ಕೂ ಅಧಿಕಹಣವನ್ನ ವಶಪಡಿಸಿಕೊಳ್ಳಲಾಗಿದೆ.
ಇಸ್ಪಿಟು ಜೂಜಾಟ ಆಡುತ್ತಿದ್ದ 07 ಜನ ಆರೋಪಿಗಳನ್ನ ಬಂಧಿಸಲಾಗಿದ್ದು ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ 2,51,550/- (ರೂಪಾಯಿ ಎರಡು ಲಕ್ಷದ ಐವತ್ತೊಂದು ಸಾವಿರದ ಐದು ನೂರ ಐವತ್ತು) ನಗದು ಹಣ ಅಮಾನತ್ತು ಪಡಿಸಿಕೊಂಡು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಟೋ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ರಂಗ ಬಿಲ್ಡಿಂಗ್ ನಲ್ಲಿ ಜನರು ಗುಂಪು ಸೇರಿಕೊಂಡು ಅಕ್ರಮ ಇಸ್ಪಿಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತಯ ಮೇರೆಗೆ ದಾಳಿ ನಡೆಸಲಾಗಿದೆ.


ಡಿವೈಎಸ್.ಪಿ ಉಮೇಶ್ ಈಶ್ವರ್ ನಾಯಕ್ ರವರ ಮಾರ್ಗದರ್ಶನದಲ್ಲಿ, ಸಿಪಿಐ ವಸಂತ್ ಕುಮಾರ್ ರವರ ನೇತೃತ್ವದಲ್ಲಿ, ವಿನೋಬನಗರ ಪಿಎಸ್ಐ ಉಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ ಆರೋಪಿತರನ್ನು ವಶಕ್ಕೆ ಪಡೆದಿರುತ್ತದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಅಕ್ರಮ ಜೂಜಾಟ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವಸಂತಕುಮಾರ್, ಸಿಪಿಐ, ದೊಡ್ಡಪೇಟೆ

ವಿಷನ್ ಕಾಂಪೌಂಡ್ ನಲ್ಲೂ ದಾಳಿ: ಆರು ಮಂದಿ ಬಂಧನ

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಿಷನ್ ಕಾಂಪೌಂಡ್ ಸಮುದಾಯ ಭವನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಇಸ್ಪಿಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ
ದೊಡ್ಡಪೇಟೆ ಸಿಪಿಐ
ವಸಂತ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ 06 ಜನ ಆರೋಪಿತರನ್ನು ವಶಕ್ಕೆ ಪಡೆದಿರುತ್ತದೆ.
ಆರೋಪಿತರಿಂದ ಜೂಜಾಟದಲ್ಲಿ ಪಣವಾಗಿಟ್ಟಿದ್ದ
ರೂ 26,500/-* (ರೂಪಾಯಿ ಇಪ್ಪತ್ತಾರು ಸಾವಿರದ ಐದು ನೂರು) ನಗದು ಹಣ ಹಾಗೂ
ಇಸ್ಪೀಟು ಕಾರ್ಡ್ ಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ಅಕ್ರಮ ಜೂಜಾಟ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ಕುಮಾರಸ್ವಾಮಿ, ಇನ್ಸ್ ಸ್ಪೆಕ್ಟರ್ DCIB

DCIB ತಂಡದ ದಾಳಿ: ಗಾಂಜಾ ವಶ
ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ DCIB ತಂಡದಿಂದ ದಾಳಿ ನಡೆಸಿ ಮಾದಕ ವಸ್ತು ಗಾಂಜಾ ಪ್ರಕರಣವನ್ನು ಪತ್ತೆ ಹಚ್ವಲಾಗಿದೆ.
ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ ಹಾಗೂ 12500 ರೂ ಬೆಲೆಬಾಳುವ 400 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, ರೂ 620/- ನಗದು ಹಣ ಮತ್ತು ಮೊಬೈಲ್ ಫೋನ್ ಅಮಾನತ್ತು ಪಡಿಸಿಕೊಂಡು ವಿನೋಬನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದೆ.
ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಟೋ ಕಾಂಪ್ಲೆಕ್ಸ್ ನ ಹತ್ತಿರ ರಸ್ತೆಯಲ್ಲಿ ಶರಾವತಿ ನಗದ ಜಭೀವುಲ್ಲಾ ಎಂಬ ಯುವಕ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಐಬಿ ಇನ್ಸ್ ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡವು ದಾಳಿ ನಡೆಸಿ, ಆರೋಪಿಯನ್ನ ಬಂಧಿಸಿ ಗಾಂಜಾದೊಂದಿಗೆ ಆತನ ಬಳಿಯಿದ್ದ ಮೊಬೈಲ್ ವಶಪಡಿಕೊಂಡಿದೆ, ಈ ಬಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದೆ.
ಮಾಹಿತಿಗೆ ಮನವಿ
ಮಾದಕ ವಸ್ತು ಗಾಂಜಾ ಮಾರಾಟದ ಬಗ್ಗೆ ಸಾರ್ವಜನಿಕರು ಶಿವಮೊಗ್ಗ ಜಿಲ್ಲಾ ಪೊಲೀಸ್ ದೂರವಾಣಿ ಸಂಖ್ಯೆ 9480803301 ಗೆ ಕರೆ ಮಾಡಿ ಮಾಹಿತಿಯನ್ನು ನೀಡಬಹುದು.
ಮಾಹಿತಿಯನ್ನು ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!