ಶಿವಮೊಗ್ಗ, ಸೆ.14: ಮಹಾನಗರ ಪಾಲಿಕೆ ನೌಕರರಿಗೆ ಕರ್ನಾಟಕ ಆರೋಗ್ಯಜ್ಯೋತಿ ಸಂಜೀವಿನಿ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ರಾಜ್ಯ ಮಹಾನಗರ ಪಾಲಿಕೆಗಳ ನೌಕರ ಸಂಘ ಜಿಲ್ಲಾಶಾಖೆ ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಪಾಲಿಕೆಯಿಂದ ಮೆರವಣಿಗೆ ಹೊರಟು ಮನವಿ ಸಲ್ಲಿಸಿತು.
ತಮಟೆ ಹೊಡೆದುಕೊಂಡು ಮೆರವಣಿಗೆಯು ಪಾಲಿಕೆ ಆವರಣದಿಂದ ಭಾರೀ ಸದ್ದಿನೊಂದಿಗೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆ ನೌಕರರಿಗೆ ಈ ಕರ್ನಾಟಕ ಆರೋಗ್ಯ ಸಂಜೀವಿನಿ ಜಾರಿಗೊಳಿಸಲಾಗಿದೆ.

ಮಹಾನಗರ ಪಾಲಿಕೆಯ ನಮಗೇಕೆ ಇಲ್ಲ? ಪಾಲಿಕೆ‌ ಸಿಬ್ಬಂದಿಗಳು ನಾವು ಸರ್ಕಾರಿ ನೌಕರರಲ್ಲವಾ ಎಂದು ಪ್ರಶ್ನಿಸಲಾಗಿದೆ.
ಹಾಗಾಗಿ ಪಾಲಿಕೆ ಸಿಬ್ಬಂದಿಗಳಿಗೂ ಮತ್ತು ಕುಟುಂಬಸ್ಥರಿಗೆ ಸೆ. 6 ರಿಂದ ಜಾರಿಗೊಂಡ ಯೋಜನೆ ಅನ್ವಯವಾಗಬೇಕು ಎಂದು ಒತ್ತಾಯಿಸಲಾಯಿತು. ರಾಜ್ಯದ 10 ಪಾಲಿಕೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನೆ ಮೆರವಣಿಗೆಯಲ್ಲಿ ಸಂಘದ ಅಧ್ಯಕ್ಷ ಎಂ ಮಾರಪ್ಪ, ಉಪಾಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಗೋವಿಂದ್, ಖಜಾಂಚಿ ಎಸ್ ಜಿ ಮಂಜಣ್ಣ ಹಾಗೂ ನೌಕರರು ಭಾಗಿಯಾಗಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!