ಶಿವಮೊಗ್ಗ,ಸೆ.06:
ನಿನ್ನೆ ವಾರದ ಕಡೆ ದಿನದ ಭಾನುವಾರ. ಈ ರಜಾದಿನದ ಸಂತಸ ಎಲ್ಲೆಡೆ ಮಾಮೂಲಿಯಾಗಿತ್ತು. ಕೊರೋನಾ ಕಿರಿಕ್ ನಡುವೆ ಶಿವಮೊಗ್ಗ ನಗರದೊಳಗೆ ಭಾರಿ ಪ್ರಮಾಣದ ಬಿಸಿಲಧಗೆ ದಹಿಸುತ್ತಿತ್ತು.ಇಲ್ಲಿ ಹಗಲು ಬಿಸಿಲಿನ ನಡುವೆ ಮಳೆ ಇರಲಿಲ್ಲ .


ಸಂಜೆ 6 ನಂತರದ ಹೊತ್ತಿನಿಂದ ಬಿಟ್ಟೂ ಬಿಡದೆ ಕಾಡಿದ ವರುಣ ನಗರದ ರಾಜಕಾಲುವೆ ಆಸುಪಾಸಿನಲ್ಲಿ ಮನೆಯೊಳಗೆ ನುಗ್ಗಿ ತನ್ನ ರೌದ್ರಾವತಾರ ತೋರಿದೆ. ಕೆಲ ಬಡಾವಣೆಯಲ್ಲಿ ರಾಜಕಾಲುವೆ ಮೂಲಕ ಬಂದ ನೀರು ನಾನಾ ಅವಾಂತರ ಸೃಷ್ಟಿಸಿದೆ.
ಈ ಅವಾಂತರಗಳಿಗೆ ಸುಮಾರು 150 ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.


ಬಹಳಷ್ಟು ಬಡಾವಣೆಗಳಲ್ಲಿ ಈ ವರುಣನ ಆರ್ಭಟಕ್ಕೆ ವಿದ್ಮತ್ ಕಟ್, ಮನೆಯೊಳಗೆ ನೀರು ನುಗ್ಗಿದೆ. ರಾಜಕಾಲುವೆ ಒಡೆದು ಹೋಗಿದೆ.
ತಮ್ಮ ತಮ್ಮ ಅಫೀಷಿಯಲ್ ಇರುವ ಏರಿಯಾಗಳನ್ನು ಡೆವಲಪ್ ಮಾಡುತ್ತಿರುವ ಸ್ಮಾರ್ಟ್ ಸಿಟಿ ಕಾರ್ಯದಿಂದ ಈ ಹೊಸತವ ವ್ಯವಹಾರ ಪರಿಚಯವಾದಂತಾಯಿತು.
ಶಿವಮೊಗ್ಗ ನಗರದ ವರುಣನ ಆರ್ಭಟಕ್ಕೆ ಆತಂಕಗೊಂಡ ಜನ ವರುಣನಿಗೆ ಹಿಡಿ ಶಾಪ ಹಾಕುತ್ತಿದ್ದ ಸನ್ನಿವೇಶ ಕಂಡು ಬಂದಿತು.


ಮದ್ಯರಾತ್ರಿಯಾದರೂ ನಿಲ್ಲದ ವರುಣ ಸುಮಾರು ಐದಾರು ಗಂಟೆ ನಗರದ ಬಹಳಷ್ಟು ಕಡೆ ಆತಂಕ ಸೃಷ್ಟಿಸಿತ್ತು.


ಸುಮಾರು ಎರಡ್ಮೂರು ಗಂಟೆಗಳ ಕಾಲ ಬಹಳಷ್ಟು ಜಾಗಗಳಲ್ಲಿ ಕರೆಂಟ್ ಇಲ್ಲ. ಉಂಡು ಮಲಗುವ ಬದುಕುಗಳು ವಿದ್ಯುತ್ ಅವಘಡಕ್ಕೆ ಹಿಡಿಶಾಪ ಹೇಳುತ್ತಿದ್ದರು. ಆದರೆ ಕಷ್ಟದ ಈ ಸಂದರ್ಭದಲ್ಲಿ. ಶಿವಮೊಗ್ಗ ಮೆಸ್ಕಾಂನ ಎಲ್ಲಾ ನೌಕರವರ್ಗ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಸುರಿವ ಬಾರೀ ಮಳೆಯಲ್ಲೇ ವಿದ್ಯುತ್ ಸರಿ ಮಾಡಿದ್ದು ಆದಷ್ಟು ಬೇಗನೆ ಬಂದಿದೆ. ತಪ್ಪು ವರುಣನದಾ ಅಥವಾ ನಮ್ಮ ನಡುವಿನ ಹೊಸ ಕಾಮಗಾರಿಗಳದಾ…?

By admin

ನಿಮ್ಮದೊಂದು ಉತ್ತರ

You missed

error: Content is protected !!