ಶಿವಮೊಗ್ಗ,ಸೆ.07:
ನಗರದದ ಹೃದಯಭಾಗದಲ್ಲಿರುವ ಲಾಡ್ಜೊಂದರಲ್ಲಿ ಅಕ್ರಮವಾಗಿ ಇಸ್ಪಿಟು ಜೂಜಾಟ ಆಡುತ್ತಿದ್ದ 08 ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ 1,20,260/- (ರೂಪಾಯಿ ಒಂದು ಲಕ್ಷದ ಇಪ್ಪತ್ತು ಸಾವಿರದ ಎರಡು ನೂರ ಅರವತ್ತು) ನಗದು ಹಣ, 07 ದ್ವಿ ಚಕ್ರ ವಾಹನಗಳು ಹಾಗೂ 08 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.
ಶಿವಮೊಗ್ಗ ಗಾಂಧಿಬಜಾರಿನ ಯುವಕರು ಇಲ್ಲಿ ಇಸ್ಪೀಟ್ ಆಡುತ್ತಿದ್ದರೆನ್ನಲಾಗಿದೆ.
ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ಕ್ ಬಡಾವಣೆಯಲ್ಲಿರುವ ತಿರುಮಲ ಲಾಡ್ಜ್ ನ ರೂಮೊಂದರಲ್ಲಿ ಹಲವರು ಗುಂಪು ಸೇರಿಕೊಂಡು ಅಕ್ರಮ ಇಸ್ಪಿಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕೋಟೆ ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ
ಜಯನಗರ ಪಿಎಸ್ಐ ರಹತ್ ಆಲಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ಕಾರ್ಯಾಚರಣೆ ನಡೆಸಿ, ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 08 ಜನ ಆರೋಪಿತರನ್ನ ಬಂಧಿಸಲಾಗಿದೆ.
ಆರೋಪಿತರಿಂದ ಜೂಜಾಟದಲ್ಲಿ ಪಣವಾಗಿಟ್ಟಿದ್ದ
ರೂ 1,20,260/-* (ರೂಪಾಯಿ ಒಂದು ಲಕ್ಷದ ಇಪ್ಪತ್ತು ಸಾವಿರದ ಎರಡು ನೂರ ಅರವತ್ತು) ನಗದು ಹಣ,
ಲಕ್ಷಾಂತರ ರೂ ಬೆಲೆಬಾಳುವ 07 ದ್ವಿ ಚಕ್ರ ವಾಹನಗಳು,
08 ಮೊಬೈಲ್ ಫೋನ್ ಗಳನ್ನು ಹಾಗೂ ಇಸ್ಪೀಟು ಕಾರ್ಡ್ ಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ಅಕ್ರಮ ಜೂಜಾಟ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಎಂ. ಶಾಂತರಾಜ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.

103ಕೆಜಿ ಜಿಂಕೆ ಮಾಂಸದೊಂದಿಗೆ ಇಬ್ಬರ ಬಂಧನ

ಜಿಂಕೆ ಮಾಂಸ ವಶ

ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಚರಣೆ ಮತ್ತು ಕಾಡು ಪ್ರಾಣಿ ಜಿಂಕೆಯ ಮಾಂಸವನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿತರ ಬಂಧನ ಹಾಗೂ ಒಟ್ಟು 103 ಕೆ.ಜಿ. ಜಿಂಕೆಯ ಮಾಂಸ ಹಾಗೂ ಪ್ಯಾಂಸೆಂಜರ್ ಆಟೋವನ್ನು ಅಮಾನತ್ತು ಪಡಿಸಿಕೊಂಡು, ವನ್ಯ ಜೀವಿ ಸಂರಕ್ಷಣಾ ಕಾಯ್ದೆ ರೀತ್ಯಾ ಘನ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ
ಇಬ್ಬರು ಆರೋಪಿತರುಗಳು ಕಾಡು ಪ್ರಾಣಿ ಜಿಂಕೆಯ ಮಾಂಸವನ್ನು ಮಾರಾಟ ಮಾಡುವ ಸಲುವಾಗಿ ಪ್ಯಾಸೆಂಜರ್ ಆಟೋದಲ್ಲಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ತುಂಗಾನಗರ ಪೊಲೀಸ್ ಠಾಣಾ ಪಿಎಸ್ಐ ತಿರುಮಲೇಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಶಿವಮೊಗ್ಗದ ಶಂಕರ ವಲಯದ ಉಪ ವಲಯ ಅರಣ್ಯಾಧಿಕಾರಿಗಳಾದ
ಶ್ರೀ್ೀ ಅಬ್ದುಲ್ ಮಜೀದ್ ರವರು ಸೇರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ಕಾಡು ಪ್ರಾಣಿ ಜಿಂಕೆಯ ಮಾಂಸವನ್ನು ಮಾರಾಟ ಮಾಡುವ ಸಲುವಾಗಿ ಪ್ಯಾಸೆಂಜರ್ ಆಟೋದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಆರೋಪಿತರಾದ ಮಂಜುನಾಥ @ ಜಿಂಕೆ ಮಂಜ, 30 ವರ್ಷ ವಾಸ ಶ್ರೀರಾಮಪುರ ಶಿವಮೊಗ್ಗ
ಹಾಗೂ ಉಮೇಶ್ ನಾಯ್ಕ, 32 ವರ್ಷ, ವಾಸ ಮಲ್ಲಿಗೇನಹಳ್ಳಿ ಶಿವಮೊಗ್ಗ ಇಬ್ಬರನ್ನು ವಶಕ್ಕೆ ಪಡೆದು ಆರೋಪಿತರಿಂದ
ಒಟ್ಟು 103 ಕೆ.ಜಿ ಜಿಂಕೆ ಮಾಂಸ, ರೂ 800 ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಪ್ಯಾಂಸೆಂಜರ್ ಆಟೋವನ್ನು ಅಮಾನತ್ತು ಪಡಿಸಿಕೊಂಡು, ವನ್ಯ ಜೀವಿ ಸಂರಕ್ಷಣಾ ಕಾಯ್ದೆ ರೀತ್ಯಾ ಘನ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!