ಶಿವಮೊಗ್ಗ, ಸೆ.04:
ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ಜನರಿಂದ ಬರೀ ಆರೋಪ, ಆಕ್ಷೇಪಗಳು ಕೇಳಿಬರುತ್ತವೆ ಎಂದು ನಾನಾ ಸ್ಪಷ್ಟನೆಯ ಹಾಗೂ ಅಭಿವೃದ್ಧಿಯ ಕೆಲಸದ ಮಾಹಿತಿಯನ್ನು ರಾಜ್ಯ ಹಾಗೂ ಆಂಗ್ಲ ಪತ್ರಿಕೆಗಳ ಮೂಲಕ ಬಿಂಬಿಸಿದ ವಿಚಾರಗಳನ್ನು ಆ ಕಂಪನಿ ನೀಡುತ್ತಿದೆ.
ಆದರೆ ನಿನ್ನ ಸಂಜೆ ಶಿವಮೊಗ್ಗ ನಗರದಲ್ಲಿ ಸುರಿದ ಕೇವಲ ಅರ್ಧ ಗಂಟೆಯ ದಾರಾಕಾರ ಮಳೆಯಲ್ಲಿ ನಗರದ ಮುಖ್ಯ ರಸ್ತೆಯಾದ ಸವಳಂಗ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಯಾರ ತಪ್ಪಿನಿಂದ ಎಂದು ಜನ ಪ್ರಶ್ನಿಸುತ್ತಿದ್ದಾರೆ?
ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ಗೋಪಿ ಸರ್ಕಲ್ ನಿಂದ ಶಿವಮೊಗ್ಗ ನಗರದ ಲಕ್ಷ್ಮಿ ಚಿತ್ರಮಂದಿರದ ಹೊರಗಿನ ರಸ್ತೆಯಲ್ಲಿ ನಿನ್ನೆ ಸಂಜೆ ಸುರಿದ ಮಳೆಯ ಅವಾಂತರಗಳ ಬಗ್ಗೆ ಸಾಕಷ್ಟು ವಿಡಿಯೋಗಳು ವೈರಲ್ ಆಗಿದ್ದು, ಸ್ಮಾರ್ಟ್ ಸಿಟಿಯ ಲೆಕ್ಕವಿಲ್ಲದ, ತಲೆ ಇಲ್ಲದ ಕೆಲಸವನ್ನು ಬಹಿರಂಗ ಮಾಡಿದೆ.
ಮಳೆಯ ನೀರು ಪಕ್ಕದ ಕಾಲುವೆಗೆ ಸೇರಬೇಕು. ನೀರು ಸೂತ್ರವಾಗಿ ಹೊರ ಹೋಗಬೇಕು. ಆದರೆ ಇಲ್ಲಿ ನೀರು ರಸ್ತೆಯಲ್ಲೇ ಆವೃತವಾದರೆ ಕಥೆ ಏನು? ಶಿವಮೊಗ್ಗದ ಈ ರಸ್ತೆಯ ನೀರು ಹೊರಹೋಗುವಂತಹ ವ್ಯವಸ್ಥೆಯಲ್ಲಿ ನಾನು ಎಡವಟ್ಟುಗಳನ್ನು ಸ್ಮಾರ್ಟ್ ಸಿಟಿ ಮಾಡಿದೆ.
ಹೊರಹೋಗುವ ನೀರು ಸಲೀಸಾಗಿ ಚರಂಡಿಗೆ ತಲುಪದೇ ಇರುವುದು ಈ ಅವಾಂತರಕ್ಕೆ ಕಾರಣ. ಇದರ ಬಗ್ಗೆ ಅತ್ಯಂತ ಕಳಪೆಯಾಗಿ ಜನ ಮಾತನಾಡುವ ಮುನ್ನ ನಿಂತಿರುವ ನೀರು ಹರಿದು ಹೋಗುವಂತೆ ಮಾಡುವ ಜವಾಬ್ದಾರಿ ಅದರ ಮೇಲೆ ಇದೆ. ಜನ ಮಾಡುವ ಆರೋಪ ಸುಳ್ಳೇನಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ.