ಶಿವಮೊಗ್ಗ,
ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರದಿನ್ನು ಬಹಿರಂಗಗೊ ಳಿಸಲು ಆಗ್ರಹಿಸಿ ಇಂದು ಕಾಂಗ್ರೆಸ್ ಪಾಲಿಕೆ ಸದಸ್ಯರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ನೇತೃತ್ವದಲ್ಲಿ ಧರಣಿ ನಡೆಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬ್ಯಾರಿಸ್ ಸಂಸ್ಥೆಯವರು ೯೯ ವರ್ಷ ಶಿವಪ್ಪನಾಯಕ ಮಾಲ್ ಅನ್ನು ಅವರ ಸಂಸ್ಥೆಗೆ ಬಾಡಿಗೆ ಆಧಾರದ ಮೇಲೆ ಮುಂದು ವರೆಸಲು ಕೇಳಿಕೊಂಡಿದ್ದರು. ಈ ವಿಚಾರವಾಗಿ ನಗರದ ಅನೇಕ ಸಂಘ ಸಂಸ್ಥೆಗಳು, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಗೂ ಜೆ.ಡಿ.ಎಸ್ ಪಕ್ಷದ ಪಾಲಿಕೆ ಸದಸ್ಯರು ವಿರೋಧವನ್ನು ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಸಾಮಾನ್ಯ ಸಭೆ ತಾರಕಕ್ಕೆ ಹೋಗಿತ್ತು. ಮಾಧ್ಯಮದಲ್ಲಿ ಸಹ ಶಿವಮೊಗ್ಗ ನಗರದ ಅನೇಕ ನಾಗರೀಕರು ವಿರೋಧವನ್ನು ವ್ಯಕ್ತಪಡಿದ್ದರು ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಈ ವಿಷಯವನ್ನು ತರಲು ಹೇಳಿದವರು ಯಾರು? ಹಾಗೂ ಸಭೆಗೆ ತಂದವರು ಯಾರು? ಏಕೆಂದರೆ ಅವಧಿ ಮುಗಿಯುವ ೩ ತಿಂಗಳ ಮುಂಚಿತವಾಗಿ ಮಾತ್ರ ಬ್ಯಾರಿಸ್ ಸಂಸ್ಥೆಯವರು ಬಾಡಿಗೆ ಮುಂದುವರಿಸಲು ಕೇಳುವ ಅಧಿಕಾರವಿರುತ್ತದೆ.

ಆದುದ್ದರಿಂದ ಈ ವಿಚಾರವಾಗಿ ಬಹಳಷ್ಟು ಚರ್ಚೆ ಗಳು ನಡೆದವು. ಸಾಮಾಜಿಕ ಜಾಲತಾಣದಲ್ಲಿ ಪ್ರತಿ ನಿತ್ಯ ಇದರ ಬಗ್ಗೆ ಚರ್ಚೆಯಾಗಿತ್ತಿತ್ತು. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ರವರು ಹೋರಾಟ ಮಾಡಿ ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಮಹಾಪೌರರಿಗೆ ಒತ್ತಾಯ ಮಾಡಿದ್ದರು. ಆಗ ಮಹಾಪೌರರು ಸಾಮಾನ್ಯ ಸಭೆಯನ್ನು ೧೫ ನಿಮಿಷ ಮುಂದೂಡಿದರು. ತದನಂತರ ಪೂಜ್ಯ ಮಹಾಪೌರರು ೫ ಜನ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದರು ಎಂದರು.

ಸಮಿತಿ ವರದಿ ಬರಲು ಸುಮಾರು ೨೦ ತಿಂಗಳುಗಳಾಗಿದ್ದು, ಈಗ ಸಮಿತಿ ವರದಿ ಬಂದಿದೆ ಎಂದು ತಿಳಿದು ಬಂದಿರುತ್ತದೆ. ಆದ್ದರಿಂದ ಈ ಸಮಿತಿ ವರದಿ ಏನಿದೆ ಎಂಬುದು ಪಾಲಿಕೆ ಸದಸ್ಯರು,ಸಾರ್ವಜನಿಕರು ತಿಳಿಯಬೇಕೆಂದು ಆಗಸ್ಟ್ ೮ ರಂದು ಮಹಾಪೌರರಲ್ಲಿ ಮತ್ತು ಆಯುಕ್ತರಲ್ಲಿ ಎಲ್ಲಾ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರ ನಿಯೋಗ, ಕೂಡಲೇ ಬಹಿಂರಂಗಪಡಿ ಸಬೇಕೆಂದು ಮನವಿ ನೀಡಿದ್ದು, ಇಂದಿಗೆ ೨೨ ದಿನಗಳೇ ಕಳೆದರೂ ಯಾವುದೇ ತನಿಖಾ ವರದಿಯನ್ನು ಬಹಿರಂಗಪಡಿಸದೇ ಇರುವುದು ಅತ್ಯಂತ ಖಂಡನಿಯ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೇಶ್, ಆರ್.ಸಿ. ನಾಯ್ಕ್, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ ಇದ್ದರು.