ಶಿವಮೊಗ್ಗ,
ನಗರದ ವಿವಿಧ ಪ್ರಗತಿಪರ ಸಂಘಟನೆ ಗಳು, ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಒಕ್ಕೂಟದ ವತಿಯಿಂದ ಸೆ. ೩ ರಂದು ಬೆಳಗ್ಗೆ ೧೦ ಗಂಟೆಗೆ ನಗರದಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಎಂಬ ಘೋಷವಾಕ್ಯ ದಡಿ ಬೃಹತ್ ಶಾಂತಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಂದು ಮಥುರಾ ಪ್ಯಾರಡೈಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಪಿ. ಶ್ರೀಪಾಲ್, ಹೆಚ್.ಆರ್. ಬಸವರಾಜಪ್ಪ, ಡಾ. ಧನಂಜಯ ಸರ್ಜಿ, ಎಂ. ಗುರು ಮೂರ್ತಿ, ಕೆ.ಟಿ.
ಗಂಗಾಧರ್, ಕೆ.ಎಲ್. ಅಶೋಕ್, ಓಪನ್ ಮೈಂಡ್ ಶಾಲೆಯ ಎಂ.ಡಿ.ಕಿರಣ್‌ಕುಮಾರ್ ಸೇರಿದಂತೆ ಹಲವರು ಈ ಶಾಂತಿ ನಡಿಗೆಯಲ್ಲಿ ನಗರದ ಶಾಲಾ ಮಕ್ಕಳು ಸೇರಿದಂತೆ ಹಿಂದೂ, ಮುಸ್ಲಿಂ ಧರ್ಮಗುರುಗಳು, ರೈತ ಹೋರಾ ಟಗಾರರು, ಮಹಿಳೆಯರು, ಚಿಂತಕರು, ವ್ಯಾಪಾರಸ್ಥರು, ನೂರಾರು ಸ್ವಯಂಸೇವ ಕರು, ವರ್ತಕರು, ಉದ್ಯಮಿಗಳು ಸೇರಿದಂತೆ ಸುಮಾರು ೧೦ ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸರ್ಜಿ ಫೌಂಡೇಷನ್ ನ ಮ್ಯಾನೇ ಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಮಾತನಾಡಿ, ಶಿವಮೊಗ್ಗ ಸುಸಂಸ್ಕೃತರ ತವರೂರಾಗಿದೆ. ಇಂತಹ ತವರೂರಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ನಡೆಯುತ್ತಿವೆ. ಶಾಂತಿ ಬಯಸುವುದು, ಶಾಂತಿ ಸ್ಥಾಪಿಸುವುದು, ಪ್ರೀತಿ ಹಂಚುವುದು ಈ ರ್ಯಾಲಿಯ ಉದ್ದೇಶವಾಗಿದೆ. ಮುಖ್ಯವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು ಇದರ ಮುಂದಾಳತ್ವ ವಹಿಸಲಿದ್ದಾರೆ. ವಿದ್ಯಾರ್ಥಿ ಗಳು ಶಾಂತಿ ಸಾರುವ ಪ್ಲೇ ಕಾರ್ಡ್ ಹಿಡಿದು ಘೋಷಣೆ ಕೂಗುತ್ತಾ ಸಾಗು ವರು. ಇದೊಂದು ಅಪರೂಪದ ಮತ್ತು ಶಾಂತಿಯ ನಡಿಗೆಯಾಗಿದೆ ಎಂದರು.
ಕೆ.ಪಿ. ಶ್ರೀಪಾಲ್ ಮಾತನಾಡಿ, ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೇ ರಾಜಕೀಯ ಪಕ್ಷಗಳಿಂದ ಹೊರತಾದ ಶಾಂತಿ ನಡಿಗೆ ಕಾರ್ಯ ಕ್ರಮವಿದು. ಈ ನಡಿಗೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಕೂಡ ಕೈಜೋಡಿಸಿ, ಬೆಂಬಲ ವ್ಯಕ್ತಪಡಿಸಿ ಭದ್ರತೆ ವ್ಯವಸ್ಥೆ ಕೂಡ ಮಾಡಲಿದೆ ಎಂದರು.
ಆಫ್ತಾಬ್ ಫರ್ವೀಜ್ ಮಾತನಾಡಿ, ಶಿವಮೊಗ್ಗದಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯಾವುದೇ ಧರ್ಮದವರಿಗೆ ತೊಂದರೆಯಾದರೆ ನಮ್ಮ ಒಕ್ಕೂಟ ಸ್ಪಂದಿಸಲಿದೆ ಎಂದರು.
ಕೆ.ಟಿ. ಗಂಗಾಧರ್ ಮಾತನಾಡಿ, ನಮ್ಮ ನಡಿಗೆ ಶಾಂತಿಯ ಕಡೆಗೆ ಎನ್ನುವ ಈ ನಡಿಗೆ ಅತ್ಯಂತ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಕಟದ ವಾತಾವರಣವಿದೆ. ಆರ್ಥಿಕ ಪರಿಸ್ಥಿತಿ ಕೂಡ ಕೆಟ್ಟದಾಗಿದೆ. ಎಲ್ಲರೂ ಸಹಜ ಜೀವನ ನಡೆಸಲು ಅನುಕೂಲವಾಗುವಂತೆ ಮತ್ತು ಸಾಮರಸ್ಯದಿಂದ ಬದುಕು ಕಂಡು ಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಎಂ. ಗುರುಮೂರ್ತಿ ಮಾತನಾಡಿ, ಶಾಂತಿ ನಡಿಗೆ ನಗರದ ಮೂರು ಪ್ರಮುಖ ಮಾರ್ಗಗಳಿಂದ ಆರಂಭವಾಗಲಿದೆ. ಡಿ.ಎ.ಆರ್. ಗ್ರೌಂಡ್ ನಿಂದ, ಅಂಬೇಡ್ಕರ್ ಭವನದಿಂದ, ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ನಡಿಗೆ ಆರಂಭವಾಗಿ ಸೈನ್ಸ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ಬೆಕ್ಕಿನ ಕಲ್ಮಠದ ಶ್ರೀಗಳು, ಬಸವಕೇಂದ್ರದ ಶ್ರೀಗಳು, ಜಡೆಮಠದ ಶ್ರೀಗಳು, ಕ್ರೈಸ್ತ ಧರ್ಮಗುರುಗಳಾದ ಡಾ. ಫ್ರಾನ್ಸಿಸ್ ಸೆರಾವೋ, ಫಾ. ಸ್ಟ್ಯಾನಿ, ಡಾ. ಕ್ಲಿಫರ್ಡ್ ರೋಷನ್ ಪಿಂಟೋ ಮತ್ತು ಮುಸ್ಲಿಂ ಮೌಲ್ವಿಗಳು ಕೂಡ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟ ನೆಗಳ ಮುಖಂಡರಾದ ಕೆ. ಜೆಸಿಐನ ಪುಷ್ಪಾ, ರೋಷನ್ ಪಿಂಟೋ, ಸುರೇಶ್ ಅರಸಾಳು, ಡಾ. ಭರತ್, ಹಾಲೇಶಪ್ಪ, ಕೃಷ್ಣಮೂರ್ತಿ ಮೊದಲಾದವರಿದ್ದರು.