ಶಿವಮೊಗ್ಗ,
ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ವಿವಿಧ ರೈಲ್ವೇ ಯೋಜನೆಗಳನ್ನು ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸುವಂತೆ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.
ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳ ತಂಡವು ಶಿವಮೊಗ್ಗ ಜಿಲ್ಲೆಯ ವಿವಿಧ ರೈಲ್ವೇ ನಿಲ್ದಾಣ ಗಳಲ್ಲಿರುವ ರೈಲ್ವೇ ಯೋಜನೆಗಳ ಸ್ಥಿತಿಗತಿಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ಭೇಟಿಯ ಸಂದರ್ಭದಲ್ಲಿ ಬೀರೂರು-ಶಿವ ಮೊಗ್ಗ-ತಾಳಗುಪ್ಪವರೆಗಿನ ರೈಲ್ವೇ ಮಾರ್ಗ ಗಳನ್ನು ಪರಿಶೀಲಿಸಿದ್ದಲ್ಲದೇ ಅಲ್ಲಿನ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ನಂತರ ಸಂಸದ ಬಿ.ವೈ.ರಾಘವೇಂದ್ರ ಅವರೊಂದಿಗೆ ಜಿಲ್ಲೆಯ ರೈಲ್ವೆ ಕಾಮಗಾರಿಗಳ ಕುರಿತು ಸಮಾಲೋಚನೆ ನಡೆಸಿದರು.
ಜಿಲ್ಲೆಯ ಕಡದಕಟ್ಟೆ, ವಿದ್ಯಾನಗರ, ಶಿಕಾರಿಪುರ ರಸ್ತೆ ಹಾಗೂ ಕಾಶೀಪುರ ರೈಲ್ವೇ ಮೇಲ್ಸೇತುವೆಗಳ ಕಾಮಗಾರಿ ಗಳಿಗೆ ವೇಗ ಹೆಚ್ಚಿಸಲು ಸೂಚಿಸಲಾಗಿದೆ. ತಾಳಗುಪ್ಪ-ಹುಬ್ಬಳ್ಳಿ ನೂತನ ರೈಲ್ವೇ ಮಾರ್ಗದ ಕುರಿತು ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂ ಡಿದ್ದು, ಅದರ ವರದಿಯು ನವೆಂಬರ್ ಮಾಹೆಯಲ್ಲಿ ರೈಲ್ವೇ ಇಲಾಖೆಗೆ ಸಲ್ಲಿಕೆಯಾ ಗಲಿದೆ. ಈ ಮಾರ್ಗ ಅನುಷ್ಠಾನದ ಬಗ್ಗೆ ಮುಂದಿನ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸುವಂತೆ ರೈಲ್ವೇ ಸಚಿವರನ್ನು ಒತ್ತಾಯಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಸಂಜೀವ್‌ಕುಮಾರ್ ಅವರು ಮಾತನಾಡಿ, ೨೦೨೩ರ ಡಿಸೆಂಬರ್ ಮಾಸಾಂತ್ಯದೊಳಗಾಗಿ ಬೀರೂರು ತಾಳಗುಪ್ಪ ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಿ, ಲೋಕಾರ್ಪಣೆಗೊ ಳಿಸಲು ಉದ್ದೇಶಿಸಲಾಗಿದೆ ಎಂದರು.
ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿನ ಇತರೆ ರೈಲು ನಿಲ್ಧಾಣಗಳನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ಸರ್.ಎಂ.ವಿ. ರೈಲು ನಿಲ್ದಾಣದ ರೀತಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದ ಲಾಗಿದೆ. ಜೊತೆಗೆ ರೈಲು ಪ್ರಯಾಣಿಕರ ಸುರಕ್ಷ ತೆಗೂ ಗಮನಹರಿಸಲಾಗುವುದು ಎಂದರು. ಸಭೆಯಲ್ಲಿ ವಿಭಾಗೀಯ
ರೈಲ್ವೇ ವ್ಯವಸ್ಥಾ ಪಕ ರಾಹುಲ್ ಅಗರ್‌ವಾಲ್, ಚೀಫ್ ಇಂಜಿ ನಿಯರ್ ಎಸ್.ಬಿ.ಎಸ್.ಗುಪ್ತಾ, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಪ್ರಧಾನ ಆಡಳಿತಾಧಿಕಾರಿ ಆರ್.ಎಲ್.ಮೀನಾ, ಹಿರಿಯ ವಿಭಾಗೀಯ ಇಂಜಿನಿಯರ್ ಕೆ.ರವಿಚಂದ್ರ, ಭರತ್ ತಿವಾರಿ, ಮಂಜುನಾಥ್ ಕೆ. ಸುಂದರ್‌ರಾಜನ್, ಶ್ರೀಧರ್‌ಮೂರ್ತಿ ಸೇರಿದಂತೆ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು