ಶಿವಮೊಗ್ಗ: ಕಲಬುರಗಿ ಜೈಲಿನಲ್ಲಿರುವ, ಟಿಪ್ಪುನಗರದ ಜಮೀರ್ ಅಲಿಯಾಸ್ ಬಚ್ಚಾ ಅಲಿಯಾಸ್ ಚಾಂದ್ ಪೀರ್ (31 ) 17 ನೆಯ ವಯಸ್ಸಿನಿಂದಲೇ ರೌಡಿಸಂಗೆ ಇಳಿದು ಇಲ್ಲಿಯವರೆಗೆ ಸುಮಾರು 22 ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಇತನನ್ನು ಒಂದು ವರ್ಷ ಕಾರಾಗೃಹದಲ್ಲೆ ಮುಂದುವರೆಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಆ. 20 ರಂದು ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಜಮೀರ್‌ನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರ್ರಾಯಪಟ್ಟು ಒಂದು ವರ್ಷದವರೆಗೆ ಅವಧಿಯನ್ನು ವಿಸ್ತರಿಸಿದೆ.


ಇದೇ ವೇಳೆ ಗೂಂಡಾ ಕಾಯ್ದೆಯಡಿ ಬಂಧಿತರಾಗಿರುವ ಸೂಳೆಬೈಲಿನ ಸಲೀಮ್ ಅಲಿಯಾಸ್ ಚೋರ್ ಸಲೀಂ (36 ) ಮತ್ತು ಕಡೇಕಲ್‌ನ ಅಬಿದ್ ಖಾನ್ (34 ) ನನ್ನು ಸಹ ಒಂದು ವರ್ಷದವರೆಗೆ ಜೈಲಿನಲ್ಲಿ ಮುಂದುವರೆಸಲು ಆದೇಶಿಸಿದೆ.
ರೌಡಿಸಂ ಮತ್ತು ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿರುವ ಇನ್ನೂ ಹಲವರ ಬಂಧನಕ್ಕೆ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೇಳಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!