ಶಿವಮೊಗ್ಗ: ಆಗಸ್ಟ್ 28 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್.-8ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವೀರಣ್ಣ ಲೇಔಟ್, ಕಾಶೀಪುರ, ಕೆ.ಹೆಚ್.ಬಿ, ಕಾಲೋನಿ ಎ, ಬಿ, ಸಿ, ಡಿ, ಇ, ಬ್ಲಾಕ್, ಕಲ್ಲಹಳ್ಳಿ, ಎಸ್.ಕೆ.ಎನ್. ಶಾಲೆ, ಪೊಲೀಸ್ ಚೌಕಿ, ಹುಚ್ಚರಾಯ ಕಾಲೋನಿ, ಲಕ್ಷ್ಮೀಪುರ, ಕೆಂಚಪ್ಪ ಲೇಔಟ್, ಆದರ್ಶ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
